AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತಿಗೆ ರಶ್ಮಿಕಾ ಬಗ್ಗೆ ವಿಜಯ್ ಸಹೋದರ ಆನಂದ್ ದೇವರಕೊಂಡ ಹೇಳಿದ್ದೇನು?

Rashmika Mandanna wedding: ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ನಿನ್ನೆ ನಡೆದಿದ್ದು, ಇದೀಗ ರಶ್ಮಿಕಾ ಮಂದಣ್ಣ ಅವರು ದೇವರಕೊಂಡ ಕುಟುಂಬದ ಸೊಸೆ. ವಿಜಯ್ ಕುಟುಂಬದವರು ರಶ್ಮಿಕಾರನ್ನು ಬಹುವಾಗಿ ಇಷ್ಟಪಡುತ್ತಾರೆ. ವಿಜಯ್, ತಾಯಿ ರಶ್ಮಿಕಾಗೆ ಪರಂಪರಾಗತವಾಗಿ ಬಂದಿರುವ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ವಿಜಯ್ ಅವರ ಸಹೋದರ ಆನಂದ್ ದೇವರಕೊಂಡ ಅತ್ತಿಗೆ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ.

ಅತ್ತಿಗೆ ರಶ್ಮಿಕಾ ಬಗ್ಗೆ ವಿಜಯ್ ಸಹೋದರ ಆನಂದ್ ದೇವರಕೊಂಡ ಹೇಳಿದ್ದೇನು?
Anand Rashmika
ಮಂಜುನಾಥ ಸಿ.
|

Updated on: Feb 27, 2026 | 8:18 AM

Share

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ವಿವಾಹವಾಗಿದ್ದಾರೆ. ಇವರಿಬ್ಬರ ವಿವಾಹ ಉದಯಪುರದ ಐಟಿಸಿ ಮೆಮಂಟೋಸ್​​ನಲ್ಲಿ ಅದ್ಧೂರಿಯಾಗಿ ನಡೆದಿದೆ. ಎರಡೂ ಕುಟುಂಬದ ಆಪ್ತರು, ಬಹಳ ಆಪ್ತ ಸ್ನೇಹಿತರು ಸಂಬಂಧಿಗಳ ಎದುರು ಈ ಜೋಡಿ ಅಧಿಕೃತವಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ರಶ್ಮಿಕಾ ಅವರು ಇದೀಗ ಅಧಿಕೃತವಾಗಿ ದೇವರಕೊಂಡ ಮನೆ ಸೊಸೆ. ದೇವರಕೊಂಡ ಕುಟುಂಬದವರು ಹೊಸ ಸದಸ್ಯೆಯನ್ನು ಬಲು ಪ್ರೀತಿಯಿಂದ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.

ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ಅವರು ರಶ್ಮಿಕಾಗೆ ತಮ್ಮ ಕುಟುಂಬದಲ್ಲಿ ತಲೆ-ತಲಾಂತರಗಳಿಂದ ಬಂದಿದ್ದ ವಿಶೇಷ ಚಿನ್ನದ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಳೆಗಳನ್ನು ಪಡೆದ ರಶ್ಮಿಕಾ ಭಾವುಕರಾಗಿದ್ದಾರೆ. ಇದೀಗ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಸಹ ತಮ್ಮ ಕುಟುಂಬಕ್ಕೆ ರಶ್ಮಿಕಾರನ್ನು ಸ್ವಾಗತಿಸಿದ್ದಾರೆ. ರಶ್ಮಿಕಾ ಬಗ್ಗೆ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ವಿಜಯ್ ಮತ್ತು ರಶ್ಮಿಕಾರನ್ನು ಮದುವೆ ಮಂಟಪದಲ್ಲಿ ತಬ್ಬಿ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿರುವ ಆನಂದ್ ದೇವರಕೊಂಡ, ‘ನಾನು ಹೋದಲ್ಲೆಲ್ಲ ಹಲವಾರು ಬಾರಿ ಅಭಿಮಾನಿಗಳು ‘ಅತ್ತಿಗೆ ಹೇಗಿದ್ದಾರೆ’ ಎಂದು ಕಿರುಚುತ್ತಿದ್ದರು, ಆದರೆ ಅವರಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಇಂದು ನನ್ನ ಅಣ್ಣ ಮದುವೆಯಾಗಿದ್ದಾನೆ. ಅತ್ಯಂತ ಸಕಾರಾತ್ಮಕ ಮತ್ತು ಸಹಾನುಭೂತಿಯ ವ್ಯಕ್ತಿಯನ್ನು ಅತ್ತಿಗೆಯಾಗಿ ನಾನು ಪಡೆದುಕೊಂಡಿದ್ದೇನೆ. ತಮ್ಮ ಜೀನದಾದ್ಯಂತ ಇವರಿಬ್ಬರು (ವಿಜಯ್-ರಶ್ಮಿಕಾ) ಹೀಗೆಯೇ ನಗುತ್ತಲೇ ಇರಲಿ, ನಗುತ್ತಲೇ ಜೀವನ ಪರ್ಯಂತ ಜೊತೆಯಾಗಿರಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ ಆನಂದ್ ದೇವರಕೊಂಡ.

ಇದನ್ನೂ ಓದಿ:Photo Gallery: ಮದುವೆ ಫೋಟೋ ಜೊತೆ ರಶ್ಮಿಕಾ ಮಂದಣ್ಣ ಎಮೋಷನಲ್ ಮಾತು

ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಸಹ ತೆಲುಗು ಚಿತ್ರರಂಗದ ನಟರಾಗಿದ್ದು, ಕೆಲವು ಒಳ್ಳೆಯ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಣ್ಣನಂತೆ ಮಾಸ್ ಸಿನಿಮಾಗಳಲ್ಲಿ ನಟಿಸದೆ ತಮಗೆ ಹೊಂದಿಕೆ ಆಗುವಂಥಹ ಕಾಮಿಡಿ, ರೊಮ್ಯಾಂಟಿಕ್ ಸಿನಿಮಾಗಳನ್ನು ಆನಂದ್ ನಟಿಸುತ್ತಾ ಸಾಗುತ್ತಿದ್ದಾರೆ. ರಶ್ಮಿಕಾ ಅವರೊಟ್ಟಿಗೆ ಮೊದಲಿನಿಂದಲೂ ಆನಂದ್​​ಗೆ ಒಳ್ಳೆಯ ಗೆಳೆತನವಿದೆ. ಆನಂದ್ ಅವರು ತಮ್ಮ ಒಂದು ಸಿನಿಮಾದ ಪ್ರೀ ರಿಲೀಸ್ ಇವೆಂಟ್​​ಗೆ ರಶ್ಮಿಕಾರನ್ನೇ ಅತಿಥಿಯನ್ನಾಗಿ ಕರೆದಿದ್ದರು. ಅಂದು ಆನಂದ್ ಬಗ್ಗೆ ಭಾವುಕರಾಗಿ ರಶ್ಮಿಕಾ ಮಾತನಾಡಿದ್ದರು. ಒಟ್ಟಾರೆ ರಶ್ಮಿಕಾ, ಪ್ರೀತಿ ತುಂಬಿದ ಮನೆಗೆ ಸೊಸೆಯಾಗಿ ಕಾಲಿರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ
ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಯವರು ಅತ್ಯಂತ ಜಾಗರೂಕರಾಗಿರಿ!
ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಯವರು ಅತ್ಯಂತ ಜಾಗರೂಕರಾಗಿರಿ!
ಬಾಲಕಿ‌ ಪೋಷಕರಿಂದ ವಿಡಿಯೋ ಹೇಳಿಕೆ ರಿಲೀಸ್: ಮುತ್ಯಾನ ಬಗ್ಗೆ ಹೇಳಿದ್ದಿಷ್ಟು
ಬಾಲಕಿ‌ ಪೋಷಕರಿಂದ ವಿಡಿಯೋ ಹೇಳಿಕೆ ರಿಲೀಸ್: ಮುತ್ಯಾನ ಬಗ್ಗೆ ಹೇಳಿದ್ದಿಷ್ಟು