AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಟೆಂಟ್ ಕ್ರಿಯೇಟರ್ಸ್​ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ಸಚಿವ ವೈಷ್ಣವ್ ಸೂಚನೆ

Union Minister Dr. Ashwini Vaishnaw speaks at DNPA Conclave 2026: ಸೋಷಿಯಲ್ ಮೀಡಿಯಾಗಳಲ್ಲಿ ಕಂಟೆಂಟ್ ಅಪ್​ಲೋಡ್ ಮಾಡುವವರಿಗೆ ಆದಾಯದಲ್ಲಿ ನ್ಯಾಯಯುತ ಪಾಲು ಸಿಗಬೇಕು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಮಾನವ ಅಭಿವೃದ್ಧಿಗೆ ಪ್ರೋತ್ಸಾಹದ ಅಗತ್ಯ ಇರುತ್ತದೆ. ಕಂಟೆಂಟ್ ಕ್​ರಿಯೇಟರ್​ಗಳಿಗೆ ಅವರ ಪ್ರಾಮಾಣಿಕ ಕೆಲಸಕ್ಕೆ ಸರಿಯಾದ ಮನ್ನಣೆ ಮತ್ತು ಸಂಭಾವನೆ ಸಿಗುವುದು ಅಗತ್ಯ ಎಂದು ವೈಷ್ಣವ್ ವಿವರಿಸಿದ್ದಾರೆ.

ಕಂಟೆಂಟ್ ಕ್ರಿಯೇಟರ್ಸ್​ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್​ಫಾರ್ಮ್​ಗಳಿಗೆ ಸಚಿವ ವೈಷ್ಣವ್ ಸೂಚನೆ
ಅಶ್ವಿನಿ ವೈಷ್ಣವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 26, 2026 | 3:46 PM

Share

ನವದೆಹಲಿ, ಫೆಬ್ರುವರಿ 28: ಕುಗ್ರಾಮದಲ್ಲಿ ಕೂತು ತಮಾಷೆಯ ವಿಡಿಯೋಗಳನ್ನು ಮಾಡುವವರಿಂದ ಹಿಡಿದು ಸೃಜನಶೀಲ ಕಲಾವಿದರವರೆಗೂ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಕಂಟೆಂಟ್ ಹಾಕುವ ಜನರಿಗೆ ಖುಷಿಯ ಸುದ್ದಿ ಇದೆ. ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಕಂಟೆಂಟ್ ಕ್ರಿಯೇಟರ್​ಗಳಿಗೆ ತಮ್ಮ ಆದಾಯದಲ್ಲಿ ನ್ಯಾಯಯುತ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸಚಿವ ಡಾ. ಅಶ್ವಿನಿ ವೈಷ್ಣವ್ ಒತ್ತಾಯಿಸಿದ್ದಾರೆ. ಡಿಜಿಟಲ್ ನ್ಯೂಸ್ ಪಬ್ಲಿಶನ್ಸ್ ಅಸೋಸಿಯೇಶನ್ (ಡಿಎನ್​ಪಿಎ) ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘ಮಾಧ್ಯಮ ವೃತ್ತಿಪರರು, ಸೃಜನಶೀಲ ಕಲಾವಿದರು, ಇನ್​ಫ್ಲುಯೆನ್ಸರ್​ಗಳು, ಬರಹಗಾರರು, ಸಂಶೋಧಕರು ಮೊದಲಾದವರು ಈ ಪ್ಲಾಟ್​ಫಾರ್ಮ್​ಗಳನ್ನು ಬಳಸುವುದರಿಂದ ಅದರ ಮೌಲ್ಯದ ಹಂಚಿಕೆ ನ್ಯಾಯಯುತವಾಗಿರಬೇಕು. ಈ ಕ್ರಿಯೇಟರ್​ಗಳು ಡಿಜಿಟಲ್ ಇಕೋಸಿಸ್ಟಂನ ಬೆನ್ನೆಲುಬಾಗಿರುತ್ತಾರೆ. ಆದರೂ ಕೂಡ ಹಲವರಿಗೆ ಸರಿಯಾದ ಮನ್ನಣೆಯಾಗಲೀ, ಸಂಭಾವನೆಯಾಗಲೀ ಸಿಕ್ಕುವುದಿಲ್ಲ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಎ ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕಾಶ್ಮೀರದ ಬಜೆಟ್ ನಿಮ್ಮ ಐಎಂಎಫ್ ಸಾಲಕ್ಕಿಂತ ಎರಡು ಪಟ್ಟು ದೊಡ್ಡದು: ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಭಾರತ ತರಾಟೆ

‘ಮಾನವ ಅಭಿವೃದ್ಧಿಯು ಯಾವಾಗಲೂ ಕೂಡ ಪ್ರೋತ್ಸಾಹಕಗಳಿಂದ ಪ್ರೇರಿತವಾಗಿರುತ್ತದೆ. ಪ್ರಾಮಾಣಿಕ ಕೆಲಸಕ್ಕೆ ನ್ಯಾಯಯುತವಾದ ಪ್ರಶಂಸೆ ಮತ್ತು ಬಹುಮಾನ ಸಿಗುವ ಖಚಿತ ಭರವಸೆಯ ಅಗತ್ಯ ಇರುತ್ತದೆ. ಕಂಟೆಂಟ್ ಕ್​ರಿಯೇಟರ್​ಗಳಿಗೆ ಉತ್ತೇಜನ ನೀಡಲು ಈ ರೀತಿಯ ಮನ್ನಣೆ ಬಹಳ ಮುಖ್ಯ’ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಇನ್ನೂ ಹೆಚ್ಚು ಜವಾಬ್ದಾರಿಯುತವಾಗಿರಲಿ

ಡಿಎನ್​ಪಿಎ ಕಾಂಕ್ಲೇವ್ 2026 ಕಾರ್ಯಕ್ರಮದಲ್ಲಿ ಅಶ್ಚಿನಿ ವೈಷ್ಣವ್ ಅವರು ಡೀಪ್​ಫೇಕ್ ಇತ್ಯಾದಿ ಹಾವಳಿಯ ವಿಚಾರವನ್ನು ಪ್ರಸ್ತಾಪಿಸಿ, ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳು ಹೆಚ್ಚು ಜವಾಬ್ದಾರಿಯುತವಾಗಿರಲಿ ಎಂದು ಕರೆ ಕೊಟ್ಟಿದ್ದಾರೆ.

ಇದನ್ನೂ ಓದಿ: 1917ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕೊಟ್ಟಿದ್ದ 35,000 ರೂ ಸಾಲ ವಾಪಸ್ ಕೇಳಲಿರುವ ಭಾರತೀಯ ಕುಟುಂಬ; ಈಗದರ ಮೌಲ್ಯ ಎಷ್ಟಿರಬಹುದು?

ಡೀಪ್​ಫೇಕ್​ನಂತಹ ನಕಲಿ ಚಿತ್ರ, ಸುಳ್ಳು ಮಾಹಿತಿ ಪ್ರಸರಣ ಇತ್ಯಾದಿ ಅಪಾಯಗಳು ಹೆಚ್ಚುತ್ತಲೇ ಇದ್ದು, ವಿಶ್ವಾದ್ಯಂತ ಡಿಜಿಟಲ್ ಪ್ಲಾಟ್​ಫಾರ್ಮ್​ಗಳ ಬಗ್ಗೆ ಸಾರ್ವಜನಿಕ ನಂಬಿಕೆ ಕಡಿಮೆ ಆಗುವ ಅಪಾಯ ಇದೆ. ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ತಮ್ಮಲ್ಲಿ ಸೇರ್ಪಡೆಯಾಗುವ ಕಂಟೆಂಟ್ ಬಗ್ಗೆ ಜವಾಬ್ದಾರಿ ಹೊತ್ತುಕೊಳ್ಳಬೇಕು. ಅಪಾಯಕಾರಿ ಕಂಟೆಂಟ್​ಗಳನ್ನು ಗುರುತಿಸಿ ಕ್ರಮ ತೆಗೆದುಕೊಳ್ಳುವಂತಹ ವ್ಯವಸ್ಥೆ ರೂಪಿಸಬೇಕು ಎಂದು ವೈಷ್ಣವ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More