AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಯುಕೆ ವ್ಯಾಪಾರ ಒಪ್ಪಂದ: ರೈತರಿಗೆ ಅತಿದೊಡ್ಡ ಉಡುಗೊರೆ, ಇತರ ಉದ್ಯಮಗಳಿಗೂ ಪುಷ್ಟಿ

India UK trade deal: ಭಾರತ ಮತ್ತು ಬ್ರಿಟನ್ ದೇಶಗಳ ನಡುವೆ ಸಮಗ್ರ ಆರ್ಥಿಕ ಒಪ್ಪಂದ ಅಥವಾ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಎಫ್​ಟಿಎಯಿಂದ ಭಾರತಕ್ಕೆ ಹೆಚ್ಚು ಅನುಕೂಲವಾಗಲಿದೆ.

ಭಾರತ-ಯುಕೆ ವ್ಯಾಪಾರ ಒಪ್ಪಂದ: ರೈತರಿಗೆ ಅತಿದೊಡ್ಡ ಉಡುಗೊರೆ, ಇತರ ಉದ್ಯಮಗಳಿಗೂ ಪುಷ್ಟಿ
ರೈತ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2025 | 5:05 PM

Share

ನವದೆಹಲಿ, ಜುಲೈ 24: ಪ್ರಧಾನಿ ನರೇಂದ್ರ ಮೋದಿ ಅವರ ಬ್ರಿಟನ್ ಪ್ರವಾಸದ ವೇಳೆ ಎರಡೂ ದೇಶಗಳ ಮಧ್ಯೆ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ (Free Trade Agreement) ಸಹಿ ಹಾಕಲಾಗಿದೆ. ಈ ಐತಿಹಾಸಿಕ ಒಪ್ಪಂದದಿಂದ ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ ವಹಿವಾಟು ಎರಡು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಶೇ. 99ರಷ್ಟು ಭಾರತೀಯ ಉತ್ಪನ್ನಗಳಿಗೆ ಬ್ರಿಟನ್ ಶೂನ್ಯ ತೆರಿಗೆ ಹಾಕುತ್ತದೆ. ಶೇ. 90ರಷ್ಟು ಬ್ರಿಟನ್ ಉತ್ಪನ್ನಗಳಿಗೆ ಭಾರತ ಸಾಕಷ್ಟು ಟ್ಯಾರಿಫ್ ಇಳಿಕೆ ಮಾಡಿದೆ.

ಸಾಂಪ್ರಾಯಿಕ ಕುಸುರಿ ಕಲೆ ಮತ್ತು ಕೌಶಲ್ಯ ಬೇಡುವ ಕೊಲ್ಹಾಪುರಿ ಚಪ್ಪಲಿ, ಬನರಾಸ್ ಸೀರೆ, ಮೈಸೂರು ಸಿಲ್ಕ್ ಸೀರೆ ಇತ್ಯಾದಿ ವಿವಿಧ ಉತ್ಪನ್ನಗಳಿಗೆ ಬ್ರಿಟನ್ ಮಾರುಕಟ್ಟೆಗೆ ಸುಲಭ ಪ್ರವೇಶ ಸಿಗಲಿದೆ. ಈ ಸಣ್ಣ ಉದ್ಯಮಗಳಲ್ಲಿ ಮಹಿಳೆಯರೇ ಹೆಚ್ಚಾಗಿ ತೊಡಗಿಸಿಕೊಂಡಿರುವುದರಿಂದ ಭಾರತದ ನಾರಿಶಕ್ತಿ ಮತ್ತಷ್ಟು ಗರಿಗೆದರುವ ಅವಕಾಶ ಇದೆ.

ಇದನ್ನೂ ಓದಿ: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ; ಭಾರತೀಯ ಉದ್ಯಮ ವಲಯ ಹರ್ಷ

ರೈತರಿಗೆ ಮಹಾ ಗೆಲುವು..

ಭಾರತ ಮತ್ತು ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತೀಯ ರೈತರಿಗೆ ಅತಿ ಹೆಚ್ಚು ವರದಾನ ಸಿಕ್ಕಿದೆ. ಶೇ. 95ರಷ್ಟು ಕೃಷಿ ಉತ್ಪನ್ನಗಳಿಗೆ ಟ್ಯಾರಿಫ್ ರಹಿತ ಪ್ರವೇಶವನ್ನು ಬ್ರಿಟನ್ ನೀಡಿದೆ. ಅರಶಿನ, ಮೆಣಸು, ಏಲಕ್ಕಿ, ಉಪ್ಪಿನಕಾಯಿ, ಬೇಳೆಕಾಳುಗಳು ಇತ್ಯಾದಿ ಆಹಾರ ಉತ್ಪನ್ನಗಳಿಗೆ ಮುಕ್ತ ಪ್ರವೇಶ ಸಿಕ್ಕಿದೆ. ಹಣ್ಣ, ತರಕಾರಿಗಳಿಗೂ ಶೂನ್ಯ ಟ್ಯಾರಿಫ್ ಇದೆ.

ಟ್ಯಾರಿಫ್ ರಹಿತ ರಫ್ತಿನಿಂದಾಗಿ ಭಾರತದ ಉತ್ಪನ್ನಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಲಿದೆ. ಭಾರತದ ಜಾಗತಿಕ ಕೃಷಿ ರಫ್ತು ವರ್ಷಕ್ಕೆ 36.63 ಬಿಲಿಯನ್ ಡಾಲರ್​ನಷ್ಟಿದೆ. ಇನ್ನು, ಬ್ರಿಟನ್ ದೇಶದ ಕೃಷಿ ಉತ್ಪನ್ನಗಳ ಆಮದು 37.52 ಬಿಲಿಯನ್ ಡಾಲರ್ ಇದೆ. ಇದರಲ್ಲಿ ಭಾರತದಿಂದ ಸರಬರಾಜಾಗುವ ಆಹಾರ ಉತ್ಪನ್ನಗಳ ಮೌಲ್ಯ ಕೇವಲ 811 ಮಿಲಿಯನ್ ಡಾಲರ್. ಈಗ ಭಾರತೀಯ ಕೃಷಿ ಉತ್ಪನ್ನಗಳಿಗೆ ಆಮದು ಸುಂಕ ಇಲ್ಲದೇ ಇರುವುದರಿಂದ ಭಾರತದಿಂದ ಹೆಚ್ಚಿನ ರಫ್ತು ಆಗಬಹುದು. ಮುಂದಿನ ಮೂರು ವರ್ಷಗಳಲ್ಲಿ ಬ್ರಿಟನ್​​ಗೆ ಭಾರತದ ಕೃಷಿ ರಫ್ತು ಶೇ. 20ರಷ್ಟು ಹೆಚ್ಚುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸಾಲ ವಂಚನೆ ಆರೋಪ; ಅನಿಲ್ ಅಂಬಾನಿಯ ಹಲವು ಕಂಪನಿಗಳ ಮೇಲೆ ಇಡಿ ರೇಡ್

ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಶೇ. 44ರಷ್ಟು ಜನಸಂಖ್ಯೆ ಇರುವುದರಿಂದ ಒಟ್ಟಾರೆ ಸಾಕಷ್ಟು ಜನರಿಗೆ ಈ ಒಪ್ಪಂದವು ನೇರ ಮತ್ತು ಪರೋಕ್ಷವಾಗಿ ಲಾಭ ತರಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ