AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾನ್ ಮತ್ತು ಆಧಾರ್​ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್​ಲೈನ್​ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ

Aadhaar and PAN card, steps to update details online: ಬಹಳ ಮಹತ್ವದ ದಾಖಲೆ ಎನಿಸಿರುವ ಆಧಾರ್ ಕಾರ್​ಡ್ ಮತ್ತು ಪ್ಯಾನ್ ಕಾರ್ಡ್​ಗಳಲ್ಲಿರುವ ಮಾಹಿತಿ ಸರಿಹೊಂದಿಕೆಯಾಗಿರುವುದು ಮುಖ್ಯ. ನಿಮ್ಮ ಹೆಸರು, ತಂದೆಯ ಹೆಸರು, ಜನ್ಮದಿನಾಂಕ ಇತ್ಯಾದಿ ವಿವರ ತಪ್ಪಿದ್ದರೆ ತಿದ್ದಲು ಅವಕಾಶ ಇದೆ. ಆನ್​ಲೈನ್​ನಲ್ಲಿ ಆಧಾರ್ ಮತ್ತು ಪ್ಯಾನ್ ದಾಖಲೆಗಳ ಮಾಹಿತಿಯನ್ನು ಪರಿಷ್ಕರಿಸುವ ವಿಧಾನ ಈ ಲೇಖನದಲ್ಲಿದೆ.

ಪ್ಯಾನ್ ಮತ್ತು ಆಧಾರ್​ನಲ್ಲಿರುವ ಮಾಹಿತಿ ತಪ್ಪಿದ್ದರೆ ಆನ್​ಲೈನ್​ನಲ್ಲೇ ಸರಿಪಡಿಸುವ ಕ್ರಮ ತಿಳಿದಿರಿ
ಆಧಾರ್, ಪ್ಯಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2025 | 6:25 PM

Share

ಆಧಾರ್ ಮತ್ತು ಪ್ಯಾನ್ ಕಾರ್ಡ್​ಗಳು ಬಹಳ ಮಹತ್ವದ ದಾಖಲೆಗಳಾಗಿವೆ. ಆಧಾರ್ (Aadhaar) ಅತಿಮುಖ್ಯ ಗುರುತು ದಾಖಲೆ ಎನಿಸಿದೆ. ಪ್ಯಾನ್ ಕಾರ್ಡ್ ಮುಖ್ಯ ಹಣಕಾಸು ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಹಲವಾರು ಹಣಕಾಸು ಚಟುವಟಿಕೆಗೆ ಪ್ಯಾನ್ ಅಗತ್ಯವಾಗಿದೆ. ಆದಾಯ ತೆರಿಗೆ ಲೆಕ್ಕಾಚಾರಕ್ಕೆ ಪ್ಯಾನ್ ಮುಖ್ಯ ಆಧಾರ. ಹೀಗಾಗಿ, ಇವೆರಡು ದಾಖಲೆಗಳು ಸರಿಯಾದ ಸ್ಥಿತಿಯಲ್ಲಿ ಇರುವುದು ಬಹಳ ಮುಖ್ಯ. ಅಂದರೆ, ಈ ದಾಖಲೆಗಳಲ್ಲಿ ತಪ್ಪು ಮಾಹಿತಿ ಅಥವಾ ದೋಷ ಇದ್ದರೆ ಮತ್ತು ಎರಡರ ಮಾಹಿತಿಯಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ತೊಂದರೆ ಆಗಬಹುದು. ಉದಾಹರಣೆಗೆ, ಎರಡು ದಾಖಲೆಗಳಲ್ಲಿ ನಿಮ್ಮ ಹೆಸರಿನ ಸ್ಪೆಲ್ಲಿಂಗ್ ಬೇರೆ ಬೇರೆ ರೀತಿ ಇರಬಹುದು. ಇಂಥ ಕೆಲ ತಪ್ಪುಗಳನ್ನು ಸರಿಪಡಿಸಲು ಅವಕಾಶ ಇದೆ.

ಪ್ಯಾನ್ ದೋಷಗಳನ್ನು ಸರಿಪಡಿಸುವ ಕ್ರಮ

  • ಎನ್​ಎಸ್​ಡಿಎಲ್ ಪ್ಯಾನ್ ವೆಬ್​ಸೈಟ್​ಗೆ ಹೋಗಿ
  • ಚೇಂಜ್/ಕರೆಕ್ಷನ್ ಇನ್ ಪ್ಯಾನ್ ಕಾರ್ಡ್ ಡೀಟೇಲ್ಸ್ ಎಂಬುದರ ಮೇಲೆ ಕ್ಲಿಕ್ ಮಾಡಿ
  • ಪ್ಯಾನ್ ಕಾರ್ಡ್ ವಿವರವನ್ನು ನಮೂದಿಸಿ, ‘ಸಬ್ಮಿಟ್’ ಕೊಡಿ.
  • ನಿಮ್ಮ ಮನವಿ ನೊಂದಾಯಿತವಾದ ಬಳಿಕ ಇಮೇಲ್ ಐಡಿಗೆ ಒಂದು ಟೋಕನ್ ಅಥವಾ ರೆಫರೆನ್ಸ್ ನಂಬರ್ ಬರುತ್ತದೆ.
  • ಪ್ಯಾನ್ ಕಾರ್ಡ್​ನಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಜನ್ಮದಿನಾಂಕ, ಲಿಂಗ, ವಿಳಾಸ, ಸಂಪರ್ಕ ಇತ್ಯಾದಿ ಯಾವ ಮಾಹಿತಿಯನ್ನು ಅಪ್​ಡೇಟ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
  • ಪರಿಷ್ಕೃತ ಮಾಹಿತಿ ಸಲ್ಲಿಸಿದ ಬಳಿಕ ಅದಕ್ಕೆ ಪೂರಕವಾದ ಸ್ಕ್ಯಾನ್ಡ್ ಡಾಕ್ಯುಮೆಂಟ್ ಅನ್ನು ಅಪ್​ಲೋಡ್ ಮಾಡಿ.
  • ಈಗ ಅಗತ್ಯ ಶುಲ್ಕ ಪಾವತಿಸಿ, ಅಂತಿಮವಾಗಿ ಅರ್ಜಿಯನ್ನು ಸಬ್ಮಿಟ್ ಮಾಡಿ.

ಇದನ್ನೂ ಓದಿ: SGST ಯಾರಿಗೆ ಹೋಗುತ್ತೆ? ಕರ್ನಾಟಕ ಸಿಎಂ ಹೇಳಿದ್ದು ಸುಳ್ಳಾ? ಇಲ್ಲಿದೆ ವಾಸ್ತವಿಕ ಜಿಎಸ್​ಟಿ ಲೆಕ್ಕಾಚಾರ

ಆಧಾರ್ ಕಾರ್ಡ್​ನಲ್ಲಿರುವ ಮಾಹಿತಿ ಅಪ್​ಡೇಟ್ ಮಾಡುವುದು…

  • ಯುಐಡಿಎಐ ವೆಬ್​ಸೈಟ್​ಗೆ ಹೋಗಿ
  • ನಿಮ್ಮ ಮೊಬೈಲ್ ನಂಬರ್ ಹಾಗೂ ಒಟಿಪಿ ಮೂಲಕ ಲಾಗಿನ್ ಆಗಿ
  • ಅಪ್​ಡೇಟ್ ಆಧಾರ್ ಆನ್​ಲೈನ್ ಎಂಬುದರ ಮೇಲೆ ಕ್ಲಿಕ್ ಮಾಡಿ
  • ಹೆಸರು, ವಿಳಾಸ, ಲಿಂಗ ಮತ್ತು ಫೋನ್ ನಂಬರ್, ಈ ಯಾವುದರ ಮಾಹಿತಿ ಬದಲಿಸಬೇಕು ಎಂಬುದನ್ನು ಆಯ್ಕೆ ಮಾಡಿ.
  • ಬಳಿ ಪರಿಷ್ಕೃತ ಮಾಹಿತಿ ಹಾಕಿ ಅಪ್​ಡೇಟ್ ಕೊಡಿ.
  • ನಂತರ, ಸಬ್ಮಿಟ್ ಕ್ಲಿಕ್ ಮಾಡಿ.
  • ಈಗ 50 ರೂ ಶುಲ್ಕ ಪಾವತಿಸಬೇಕು. ನಂತರ ನಿಮಗೆ ಸರ್ವಿಸ್ ರಿಕ್ವೆಸ್ಟ್ ನಂಬರ್ ಬರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ