AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fiscal Deficit: ಏಪ್ರಿಲ್​ನಿಂದ ಜುಲೈ ಮಧ್ಯೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 3.2 ಲಕ್ಷ ಕೋಟಿ ರೂಪಾಯಿ

2021-22 ಆರ್ಥಿಕ ವರ್ಷದ ಏಪ್ರಿಲ್​ನಿಂದ ಜುಲೈ ಮಧ್ಯೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ ಮೊತ್ತವು 3.2 ಲಕ್ಷ ಕೋಟಿ ರೂಪಾಯಿ ಆಗಿದೆ.

Fiscal Deficit: ಏಪ್ರಿಲ್​ನಿಂದ ಜುಲೈ ಮಧ್ಯೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 3.2 ಲಕ್ಷ ಕೋಟಿ ರೂಪಾಯಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 31, 2021 | 8:02 PM

ನವದೆಹಲಿ: 2021-22ರ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಾದ ಏಪ್ರಿಲ್​ನಿಂದ ಜುಲೈನಲ್ಲಿ ಆದಾಯ ಏರಿಕೆಯ ಹೊರತಾಗಿಯೂ ಭಾರತದ ವಿತ್ತೀಯ ಕೊರತೆಯು (ಆದಾಯ ಮತ್ತು ಖರ್ಚಿನ ಮಧ್ಯದ ವ್ಯತ್ಯಾಸ) ರೂ. 3.21 ಲಕ್ಷ ಕೋಟಿಗಳಷ್ಟಿತ್ತು ($ 43.98 ಶತಕೋಟಿ) ಅಥವಾ ಇಡೀ ವರ್ಷದ ಬಜೆಟ್ ಗುರಿಯ ಶೇ 21.3ರಷ್ಟಿತ್ತು ಎಂದು ಸರ್ಕಾರಿ ಅಂಕಿ- ಅಂಶಗಳಿಂದ ಮಂಗಳವಾರ ತಿಳಿದುಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 8.2 ಲಕ್ಷ ಕೋಟಿ ರೂಪಾಯಿ ಆಗಿದ್ದು, ಪೂರ್ತಿ ವರ್ಷದ ಗುರಿಯನ್ನೂ ದಾಟಿತ್ತು. ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಮಂಗಳವಾರ ಬಿಡುಗಡೆ ಮಾಡಿದ ಅಧಿಕೃತ ದತ್ತಾಂಶದ ಪ್ರಕಾರ, ಏಪ್ರಿಲ್​ನಿಂದ ಜುಲೈ ಅವಧಿಗೆ 2 ಲಕ್ಷ ಕೋಟಿ ರೂಪಾಯಿ ಅಥವಾ ಬಜೆಟ್ ಅಂದಾಜಿನ ಶೇ 18ರಷ್ಟಿತ್ತು. ಕಳೆದ ವರ್ಷದ ಇದೇ ಅವಧಿಗೆ 7.1 ಲಕ್ಷ ಕೋಟಿ ಅಥವಾ ಬಜೆಟ್ ಅಂದಾಜಿನ ಶೇ 117ರಷ್ಟಿತ್ತು.

ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಕೇಂದ್ರದ ಸಗಟು ತೆರಿಗೆ ಆದಾಯವು 6.9 ಲಕ್ಷ ಕೋಟಿ ರೂಪಾಯಿ (ನಿವ್ವಳ 5.29 ಲಕ್ಷ ಕೋಟಿ ರೂ.) ಉತ್ತಮ ಆದಾಯ ತೆರಿಗೆ ಹಾಗೂ ಜಿಎಸ್​ಟಿ ಸಂಗ್ರಹದಿಂದ ಬಂದಿದೆ. ಉದ್ಯಮಗಳು ತಮ್ಮ ಮೊದಲು ಮುಂಗಡ ತೆರಿಗೆ ಕಂತನ್ನು ಜೂನ್​ನಲ್ಲಿ ಸಂದಾಯ ಮಾಡುತ್ತವೆ. ಇಡೀ ವರ್ಷದಲ್ಲಿ ಎಷ್ಟು ತೆರಿಗೆ ಬರಬಹುದು ಎಂಬುದರ ಅಂದಾಜು ಮಾಡಿದ ನಂತರವೇ ಹೀಗೆ ಕಟ್ಟಲಾಗುತ್ತದೆ. ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಡೇಟಾ ಪ್ರಕಾರವಾಗಿ, ಈ ಹಣಕಾಸು ವರ್ಷದಲ್ಲಿ ಮೊದಲ ನಾಲ್ಕು ತಿಂಗಳಲ್ಲಿ ಆಗಿರುವ ಬಂಡವಾಳ ವೆಚ್ಚ 1.28 ಲಕ್ಷ ಕೋಟಿ ರೂಪಾಯಿ. 1 ವರ್ಷದ ಹಿಂದೆ ಇದೇ ಅವಧಿಯಲ್ಲಿ 1.11 ಲಕ್ಷ ಕೋಟಿ ರೂಪಾಯಿ ಆಗಿತ್ತು. ತಜ್ಞರು ಹೇಳುವಂತೆ, ಕೇಂದ್ರ ಸರ್ಕಾರದಿಂದ ಪೂರ್ತಿ ವರ್ಷದ ತೆರಿಗೆ ಸಂಗ್ರಹ ಗುರಿಯನ್ನು ಮುಟ್ಟಬಹುದು. ಆದರೆ ಬಂಡವಾಳ ಹಿಂತೆಗೆತ ಗುರಿಯನ್ನು ತಲುಪುವುದು ಸವಾಲು.

ಈ ವರೆಗೆ 8371 ಕೋಟಿ ರೂಪಾಯಿ ಸ್ವೀಕೃತಿ ಆಗಿದೆ. ಆದರೆ ಬಂಡವಾಳ ಹಿಂತೆಗೆತದ ಗುರಿ ಇರುವುದು 1.75 ಲಕ್ಷ ಕೋಟಿ ರೂಪಾಯಿ. ಬಹಳ ದೊಡ್ಡ ಮಾರ್ಜಿನ್​ನಲ್ಲಿ ನಮ್ಮ ಗುರಿ ತಪ್ಪಬಹುದು. ಇದರಿಂದ ಭಾರತ ಸರ್ಕಾರದ ವಿತ್ತೀಯ ಕೊರತೆಯು FY22rರ ಬಜೆಟ್​ ಅಂದಾಜಿಗಿಂತ ಹೆಚ್ಚಾಗಲಿದೆ. ಇದಕ್ಕಿಂತ ಹೆಚ್ಚಾಗಿ, ಇತರ ಮುಖ್ಯ ಹಣಕಾಸು ಉತ್ತೇಜನಾ ಕ್ರಮಗಳನ್ನು ಏನಾದರೂ ಘೋಷಣೆ ಮಾಡಿದಲ್ಲಿ ಅಥವಾ ಈಗ ಕೊರೊನಾ ಲಸಿಕೆಗಾಗಿ ಮೀಸಲಿಟ್ಟ ಬಜೆಟ್ 350 ಬಿಲಿಯನ್ ರೂಪಾಯಿ ದಾಟಿದಲ್ಲಿ ವಿತ್ತೀಯ ಕೊರತೆ ಮತ್ತೂ ಹೆಚ್ಚಾಗುತ್ತದೆ ಎಂದು ರೇಟಿಂಗ್ ಏಜೆನ್ಸಿ ICRA ಲಿಮಿಟೆಡ್​ನ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಯ್ಯರ್ ಅಭಿಪ್ರಾಯ ಪಟ್ಟಿದ್ದಾರೆ.​

ಇದನ್ನೂ ಓದಿ: 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ

(Central Government Fiscal Deficit For FY22 Between April To July Amounted To Rs 3.2 Trillion)

ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
ಕಾಶಪ್ಪನವರ್​ ಮಹಾ ಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾರೆ: ಯತ್ನಾಳ್
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma: ಪುಲ್ ಪುಲ್ ಪುಲ್... ಹಿಟ್​ಮ್ಯಾನ್ ಸ್ಪೆಷಲ್ ವಿಡಿಯೋ