AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಡಸ್​​ಇಂಡ್ ಬ್ಯಾಂಕ್: ಸಿಇಒ ದಿಢೀರ್ ರಾಜೀನಾಮೆ; ಹೊಸ ತಂಡ ರಚನೆಗೆ ಆರ್​​ಬಿಐ ಅನುಮತಿ

IndusInd bank latest updates: ಇಂಡಸ್​​ಇಂಡ್ ಬ್ಯಾಂಕ್​ನ ಎಂಡಿ ಮತ್ತು ಸಿಇಒ ಸುಮಂತ್ ಕಥಪಾಲಿಯಾ ಏಪ್ರಿಲ್ 29ರಂದು ರಾಜೀನಾಮೆ ನೀಡಿದ್ದಾರೆ. ಡಿರೈವೇಟಿವ್ ಪೋರ್ಟ್​​ಫೋಲಿಯೋದಲ್ಲಿ ತಪ್ಪು ಲೆಕ್ಕಾಚಾರದಿಂದ ಆದ ನಷ್ಟದ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಅವರು ರಾಜೀನಾಮೆ ಕೊಟ್ಟಿದ್ದಾರೆ. ಮೂರು ತಿಂಗಳ ಕಾಲ ಬ್ಯಾಂಕ್ ಆಡಳಿತ ನಿರ್ವಹಿಸಲು ಎಕ್ಸಿಕ್ಯೂಟಿವ್ ಕಮಿಟಿ ರಚಿಸಲಾಗಿದ್ದು, ಅದಕ್ಕೆ ಆರ್​​ಬಿಐ ಅನುಮೋದನೆ ನೀಡಿದೆ.

ಇಂಡಸ್​​ಇಂಡ್ ಬ್ಯಾಂಕ್: ಸಿಇಒ ದಿಢೀರ್ ರಾಜೀನಾಮೆ; ಹೊಸ ತಂಡ ರಚನೆಗೆ ಆರ್​​ಬಿಐ ಅನುಮತಿ
ಇಂಡಸ್​​ಇಂಡ್ ಬ್ಯಾಂಕ್​
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 30, 2025 | 11:21 AM

Share

ನವದೆಹಲಿ, ಏಪ್ರಿಲ್ 30: ಇಂಡಸ್​​​ಇಂಡ್ ಬ್ಯಾಂಕ್​​ನ (IndusInd Bank) ಸಿಇಒ ಹಾಗು ಎಂಡಿಯಾಗಿದ್ದ ಸುಮಂತ್ ಕಠಪಾಲಿಯಾ (Sumant Kathpalia) ಅವರು ನಿನ್ನೆ ಸಂಜೆ ದಿಢೀರ್ ರಾಜೀನಾಮೆ ನೀಡಿದ ಕಂಪನಿಯ ನಾಯಕತ್ವದಿಂದ ಹೊರಬಂದಿದ್ದಾರೆ. ಇದೇ ವೇಳೆ, ಹಿಂದೂಜಾ ಕುಟುಂಬ ಬೆಂಬಲಿದ ಈ ಬ್ಯಾಂಕ್​​ನ ಹೊಸ ಮಧ್ಯಂತರ ನಾಯಕತ್ವದ (Interim leadership team) ತಂಡ ರಚನೆಗೆ ಆರ್​​ಬಿಐ ಅನುಮೋದನೆ ನೀಡಿದೆ. ಹೊಸ ತಂಡ ರಚನೆಯ ವಿಚಾರವನ್ನು ಇಂಡಸ್​​​ಇಂಡ್ ಬ್ಯಾಂಕ್ ಇಂದು ಬುಧವಾರ ತನ್ನ ರೆಗ್ಯುಲೇಟರಿ ಫೈಲಿಂಗ್​​​ನಲ್ಲಿ ತಿಳಿಸಿದೆ.

ಹೊಸ ಸಿಇಒ ನೇಮಕ ಆಗುವವರೆಗೂ ಇಂಡಸ್ ಇಂಡ್ ಬ್ಯಾಂಕ್​​ನ ಆಡಳಿತ ನಿರ್ವಹಣೆ ಮಾಡಲು ಕಾರ್ಯವಾಹಕರ ಸಮಿತಿ ರಚನೆಗೆ ಆರ್​​ಬಿಐ ಏಪ್ರಿಲ್ 29ರಂದು ಬರೆದ ಪತ್ರದಲ್ಲಿ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ಈ ಮಧ್ಯಂತರ ಎಕ್ಸಿಕ್ಯೂಟಿವ್ ತಂಡದಲ್ಲಿ ಸೌಮಿತ್ರ ಸೇನ್ ಮತ್ತು ಅನಿಲ್ ರಾವ್ ಅವರಿದ್ದಾರೆ. ಸೌಮಿತ್ರ ಸೇನ್ ಅವರು ಕನ್ಸೂಮರ್ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರೆ, ಅನಿಲ್ ರಾವ್ ಅವರು ಮುಖ್ಯ ಆಡಳಿತ ಅಧಿಕಾರಿಯಾಗಿದ್ದಾರೆ. ಇವರಿಬ್ಬರೂ ಕೂಡ ತಾತ್ಕಾಲಿಕ ಅವಧಿಯವರೆಗೆ ಸಿಇಒ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.

ಇದನ್ನೂ ಓದಿ: ಐಪಿಎಲ್​​​ಗೆ ಟ್ಯಾಕ್ಸ್ ಹಾಕಿದ್ರೆ 10 ಹೊಸ ಐಐಟಿ: ಹೀಗೊಂದು ಸಲಹೆ ನೀಡಿದ ಬೆಂಗಳೂರಿನ ಪ್ರೊಫೆಸರ್

ಇದನ್ನೂ ಓದಿ
Image
ದಾಖಲೆ ಸೃಷ್ಟಿಸಿದ ಆಧಾರ್ ಅಥೆಂಟಿಕೇಶನ್
Image
ಸಂಶೋಧನೆಗೆ ಟ್ಯಾಕ್ಸ್, ಮನರಂಜನೆಗೆ ವಿನಾಯಿತಿ: ಪ್ರೊಫೆಸರ್ ವಿಷಾದ
Image
ಭಾರತದಲ್ಲಿ ವಾಹನೋದ್ಯಮ ಪ್ರಬಲ ಹೇಗೆ?
Image
ಸರ್ವಮ್ ಎಐನಿಂದ ಭಾರತದ ಮೊದಲ ಫೌಂಡೇನ್ ಮಾಡಲ್?

ಇಂಡಸ್​​ಇಂಡ್ ಬ್ಯಾಂಕ್​ ಇತ್ತೀಚೆಗೆ ಡಿರೈವೇಟಿವ್ಸ್ ವಿಚಾರದಲ್ಲಿ ವಿವಾದದ ಮಸಿ ಮೆತ್ತಿಕೊಂಡಿದೆ. ಇದರ ನೈತಿಕ ಹೊಣೆ ಹೊತ್ತು ಸುಮಂತ್ ಕಥಪಾಲಿಯಾ ಅವರು ರಾಜೀನಾಮೆ ನೀಡಿದ್ದಾರೆ. ಹಾಗೆಂದು ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಇಂಡಸ್​ಇಂಡ್ ಬ್ಯಾಂಕ್​ನ ವಿವಾದವೇನು?

ಬ್ಯಾಂಕ್​​ನ ಡಿರೈವೇಟಿವ್ ಪೋರ್ಟ್​​ಫೋಲಿಯೋದಲ್ಲಿ (ಎಫ್ ಅಂಡ್ ಒ ಟ್ರೇಡಿಂಗ್, ಫೋರೆಕ್ಸ್ ಟ್ರೇಡಿಂಗ್, ಸ್ಪೆಕ್ಯೂಲೇಶನ್ ಇತ್ಯಾದಿ) ಲೆಕ್ಕದ ಅಂದಾಜು ತಪ್ಪಿರುವುದರಿಂದ ಬ್ಯಾಂಕ್​​ನ ಮೌಲ್ಯವನ್ನು ಡಿಸೆಂಬರ್ ತಿಂಗಳಲ್ಲಿ ಶೇ. 2.35ರಷ್ಟು ಕಡಿಮೆ ಮಾಡಿದೆ ಎಂದು ಇಂಡ್​​ಇಂಡ್ ಬ್ಯಾಂಕ್ ಹೇಳಿತ್ತು. ಇದು ಬಹಿರಂಗಗೊಂಡ ಬಳಿಕ ಒಂದೇ ದಿನದಲ್ಲಿ ಅದರ ಷೇರುಬೆಲೆ ಶೇ. 26ರಷಟು ಕುಸಿದುಹೋಗಿತ್ತು.

ನಂತರ, ಆರ್​​​ಬಿಐ ಇಂಡಸ್​​ಇಂಡ್ ಬ್ಯಾಂಕ್​​ನ ಸಿಇಒ ಅವರಿಗೆ ಗರಿಷ್ಠ 1 ವರ್ಷದವರೆಗೆ ಮಾತ್ರ ಮುಂದುವರಿಸಲು ಅವಕಾಶ ನೀಡಿತು. ಬ್ಯಾಂಕ್ ಮೂರು ವರ್ಷ ಸಿಇಒಗೆ ಅವಕಾಶ ನೀಡುವಂತೆ ಮಾಡಿದ ಮನವಿಯನ್ನು ರಿಸರ್ವ್ ಬ್ಯಾಂಕ್ ಪುರಸ್ಕರಿಸಲಿಲ್ಲ.

ಇದನ್ನೂ ಓದಿ: ಇಪಿಎಫ್ ಟ್ರಾನ್ಸ್​​ಫರ್ ಈಗ ತ್ವರಿತ, ಸರಳ; ಫಾರ್ಮ್ 13ರಲ್ಲಿ ತುಸು ಬದಲಾವಣೆ

ಈಗ ಸಿಇಒ ಸುಮಂತ್ ಕಥಪಾಲಿಯಾ ರಾಜೀನಾಮೆ ನೀಡಿದ ಬಳಿಕ ರಚನೆಯಾಗಿರುವ ಎಕ್ಸಿಕ್ಯೂಟಿವ್ ಕಮಿಟಿ ಮೂರು ತಿಂಗಳ ಕಾಲ ಆಡಳಿತ ನಿರ್ವಹಣೆ ಮಾಡಲಿದೆ. ಅಷ್ಟರಲ್ಲಿ ಬ್ಯಾಂಕ್​​ಗೆ ಹೊಸ ಸಿಇಒ ನೇಮಕವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್