ಕಾಂತಿಯುತ ಮೈ ಬಣ್ಣ ನಿಮ್ಮದಾಗಬೇಕಾ? ಈ ಆಯುರ್ವೇದದ ಲೇಪನ ಬಳಸಿ
ಚರ್ಮ ಆರೋಗ್ಯವಾಗಿರಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತೇವೆ. ಆದರೆ ಭಾರತೀಯರು ಸಾಂಪ್ರದಾಯಿಕವಾಗಿ ಚರ್ಮದ ಆರೈಕೆ ಮಾಡುವುದಕ್ಕಾಗಿ, ಶತಮಾನಗಳಿಂದಲೂ ಬಳಸುತ್ತಿರುವ ಉಬ್ಟಾನ್ ( ಸ್ಕ್ರಬ್) ಬಳಸಬಹುದು. ಇದು ನಮ್ಮ ಚರ್ಮಕ್ಕೆ ಬಹಳ ಒಳ್ಳೆಯದು. ಇವುಗಳನ್ನು ವಿವಿಧ ಗಿಡಮೂಲಿಕೆಗಳು, ಮಸಾಲೆಗಳು ಮತ್ತು ನೈಸರ್ಗಿಕ ಪದಾರ್ಥಗಳ ಮಿಶ್ರಣದಿಂದ ತಯಾರಿಸಲಾಗುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಹಾಗಾದರೆ ಇದರ ಬಳಕೆಯಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ನಾವು ಹಲವಾರು ರೀತಿಯ ಪಯತ್ನಗಳನ್ನು ಮಾಡುತ್ತೇವೆ. ಆದರೆ ಈಗಿನ ಕ್ರೀಮ್ (Cream) ಗಳು ನಿಮಗೆ ನೀವು ಅಂದುಕೊಂಡಂತಹ ಫಲಿತಾಂಶ ನೀಡುವುದಿಲ್ಲ ಜೊತೆಗೆ ಇವು ನಿಮ್ಮ ಚರ್ಮಕ್ಕೂ ಒಳ್ಳೆಯದಲ್ಲ. ಆದರೆ ಚರ್ಮದ (Skin) ಕಾಂತಿ ಹೆಚ್ಚಿಸಲು ಆಯುರ್ವೇದ ಗಿಡಮೂಲಿಕೆಯಿಂದ ತಯಾರಿಸುವ ಸ್ಕ್ರಬ್ (Scrub) ಗಳನ್ನು ಬಳಕೆ ಮಾಡಬಹುದು. ಅದರಲ್ಲಿಯೂ ಭಾರತೀಯರು ಸಾಂಪ್ರದಾಯಿಕವಾಗಿ ಚರ್ಮದ ಆರೈಕೆ ಮಾಡುವುದಕ್ಕಾಗಿ, ಶತಮಾನಗಳಿಂದಲೂ ಬಳಸುತ್ತಿರುವ ಉಬ್ಟಾನ್ ( ಸ್ಕ್ರಬ್) ಬಳಸಬಹುದು, ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಏಕೆಂದರೆ ಇವುಗಳನ್ನು ವಿವಿಧ ಗಿಡಮೂಲಿಕೆಗಳು, ಮಸಾಲೆ (spice) ಗಳು ಮತ್ತು ನೈಸರ್ಗಿಕ ಪದಾರ್ಥ (Natural product) ಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಹಾಗಾದರೆ ಇದರ ಬಳಕೆಯಿಂದ ಸಿಗುವ ಪ್ರಯೋಜನಗಳೇನು? ಚರ್ಮದ ಕಾಂತಿ ಹೆಚ್ಚಿಸಲು ಇದು ಹೇಗೆ ಸಹಕಾರಿ ಎಂಬುದನ್ನು ತಿಳಿದುಕೊಳ್ಳಿ.
ಕಾಂತಿಯುತ ಮೈ ಬಣ್ಣ ಪಡೆಯುವುದಕ್ಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ನಾನಾ ರೀತಿಯ ಕ್ರೀಮ್ ಬಳಸಿ ಚರ್ಮವನ್ನು ಹಾಳು ಮಾಡಿಕೊಳ್ಳುವ ಬದಲು ಉಬ್ಟಾನ್ ಬಳಸಬಹುದು. ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸದೆ ಹೊಳೆಯುವ ಚರ್ಮ ಪಡೆಯಲು ಇದು ಉತ್ತಮ ಪರಿಹಾರವಾಗಿದೆ. ಹಾಗಾದರೆ ಉಬ್ಟಾನ್ ಬಳಸುವುದರಿಂದ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
- ಉಬ್ಟಾನ್ ಎಕ್ಸ್ಫೋಲಿಯೇಷನ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಚರ್ಮದ ಈ ಮೇಲ್ಪದರವನ್ನು ಸ್ವಚ್ಛಗೊಳಿಸಿ, ಸತ್ತ ಚರ್ಮದ ಕೋಶಗಳು ಮತ್ತು ಕಲ್ಮಶಗಳನ್ನು ಹೊರಹಾಕುತ್ತದೆ, ನಿಮ್ಮ ಚರ್ಮವನ್ನು ನಯವಾಗಿಸುತ್ತದೆ.
- ಈ ಉಬ್ಟಾನ್ ನಿಮ್ಮ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಇದರಲ್ಲಿರುವ ಅರಿಶಿನ, ಕೇಸರಿ ಮತ್ತು ಕಡಲೆ ಹಿಟ್ಟಿನಂತಹ ನೈಸರ್ಗಿಕ ಪದಾರ್ಥಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಇದು ಚರ್ಮಕ್ಕೆ ಹೊಳಪು ನೀಡುತ್ತದೆ.
- ಉಬ್ಟಾನ್ ಚರ್ಮದ ರಂಧ್ರಗಳಲ್ಲಿರುವ ಕೊಳೆ, ಹೆಚ್ಚುವರಿ ಎಣ್ಣೆ ಮತ್ತು ಇತರ ಮಾಲಿನ್ಯಕಾರಕಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಮೊಡವೆ ಮತ್ತು ಇನ್ನಿತರ ಚರ್ಮದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
- ಉಬ್ಟಾನ್ ನಲ್ಲಿರುವ ಹಾಲು, ಮೊಸರು ಅಥವಾ ಜೇನುತುಪ್ಪದಂತಹ ನೈಸರ್ಗಿಕ ಪದಾರ್ಥಗಳು ಚರ್ಮಕ್ಕೆ ಆಳವಾದ ಮಾಯಿಶ್ಚರೈಸಿಂಗ್ ಒದಗಿಸುವಲ್ಲಿ ಸಹಾಯ ಮಾಡುತ್ತದೆ.
- ಉಬ್ಟಾನ್ನಲ್ಲಿರುವ ಗಿಡಮೂಲಿಕೆ ಪದಾರ್ಥಗಳು ಚರ್ಮವನ್ನು ಬಿಗಿಗೊಳಿಸಲು ಸಹಾಯ ಮಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ








