ಬೇರೆಯವರು ಬಳಸಿದ ಲೋಟದಿಂದ ನೀರು ಕುಡಿಯುವ ಅಭ್ಯಾಸ ಇದ್ದರೆ ಇವತ್ತೇ ಬಿಟ್ಟು ಬಿಡಿ
ಸಾಮಾನ್ಯವಾಗಿ ನಾವು ಮನೆ ಅಥವಾ ಹೊರಗಡೆ ಹೋದಾಗ ತಿಳಿದೋ, ತಿಳಿಯದೆಯೋ ಬೇರೆಯವರು ಬಳಕೆ ಮಾಡಿದ ಗ್ಲಾಸ್ ಗಳನ್ನು ಮತ್ತೆ ಬಳಸುತ್ತೇವೆ. ಇದು ಕೆಲವರಿಗೆ ಸಾಮಾನ್ಯವಾಗಿರಬಹುದು ಆದರೆ ಈ ರೀತಿಯ ಅಭ್ಯಾಸ ನಿಮಗರಿವಿಲ್ಲದಂತೆ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದನ್ನು ತಡೆಯುವುದು ಹೇಗೆ? ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಕೆಲವರಿಗೆ ಬೇರೆಯವರು ಬಳಸಿದ ಲೋಟದಿಂದ ನೀರು (Water) ಕುಡಿಯುವ ಅಭ್ಯಾಸ ಇರುತ್ತದೆ. ಮನೆಯಲ್ಲಿ ಒಬ್ಬರು ಬಳಸಿದ ಲೋಟವನ್ನೇ ಮತ್ತೊಬ್ಬರು ಬಳಸುತ್ತಾರೆ ಅಥವಾ ಗಂಡ, ಹೆಂಡತಿ ಒಂದೇ ಲೋಟದಲ್ಲಿ ನೀರು ಜ್ಯೂಸ್ (Juice) ಅಥವಾ ಇನ್ನಿತರ ಪಾನೀಯಗಳನ್ನು ಒಂದೇ ಗ್ಲಾಸ್ ಗಳನ್ನೂ ಬಳಕೆ ಮಾಡುತ್ತಾರೆ. ಈ ರೀತಿ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಈ ರೀತಿ ಮಾಡುವುದರಿಂದ ಆರೋಗ್ಯ (Health) ಅಪಾಯಗಳು ಹೆಚ್ಚಾಗಬಹುದು. ಜೊತೆಗೆ ನಮಗರಿವಿಲ್ಲದಂತೆ ಬ್ಯಾಕ್ಟೀರಿಯಾ (Bacteria) ಮತ್ತು ವೈರೆಸ್ ನಮ್ಮ ದೇಹ ಸೇರಬಹುದು. ಹಾಗಾದರೆ ಒಬ್ಬರು ಬಳಕೆ ಮಾಡಿದ ಲೋಟವನ್ನು ಮತ್ತೊಬ್ಬರು ಬಳಕೆ ಮಾಡುವುದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ? ಇದನ್ನು ತಡೆಯುವುದು ಹೇಗೆ? ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಸಂಭಾವ್ಯ ಆರೋಗ್ಯ ಅಪಾಯಗಳು ಇಲ್ಲಿವೆ;
- ಬ್ಯಾಕ್ಟೀರಿಯಾ: ಸ್ಟ್ರೆಪ್ಟೋಕಾಕಸ್, ಸ್ಟೆಫಿಲೋಕೊಕಸ್ ಮತ್ತು ಇ.ಕೋಲಿಯಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳು ಲಾಲಾರಸದಲ್ಲಿ ಇರುತ್ತವೆ ಇದು ನೀರು ಕುಡಿಯುವಾಗ ಗ್ಲಾಸ್ ಗಳಿಗೆ ವರ್ಗಾಯಿಸಲ್ಪಡುತ್ತವೆ. ಈ ರೀತಿಯಿದ್ದಾಗ ಅದೇ ಲೋಟವನ್ನು ಮತ್ತೊಬ್ಬರು ಉಪಯೋಗ ಮಾಡುವುದರಿಂದ ಈ ಬ್ಯಾಕ್ಟೀರಿಯಾಗಳು ಒಬ್ಬರಿಂದ ಒಬ್ಬರಿಗೆ ಹರಡಬಹುದು.
- ವೈರಸ್ ಗಳು: ನೆಗಡಿ, ಜ್ವರ ಮತ್ತು ಹರ್ಪಿಸ್ ಸಿಂಪ್ಲೆಕ್ಸ್ನಂತಹ ಕೆಲವು ವೈರಸ್ಗಳು ಲಾಲಾರಸದಿಂದ ಹರಡುತ್ತದೆ.
ಸಂಭವನೀಯ ಪರಿಣಾಮಗಳೇನು?
ಬೇರೆಯವರು ಬಳಸಿದ ಲೋಟದಿಂದ ನೀರು ಕುಡಿಯುವುದರಿಂದ ಸ್ಟ್ರೆಪ್ ಗಂಟಲು, ಶೀತ ಹುಣ್ಣುಗಳು ಅಥವಾ ಜಠರಗರುಳಿನ ಸಮಸ್ಯೆಗಳಂತಹ ಸೋಂಕುಗಳು ನಿಮ್ಮ ಆರೋಗ್ಯ ಹಾಳು ಮಾಡಬಹುದು. ಅದರಲ್ಲಿಯೂ ಮೊದಲು ಗ್ಲಾಸ್ ಬಳಸಿದ ವ್ಯಕ್ತಿಗೆ ಯಾವುದಾದರೂ ಸಾಂಕ್ರಾಮಿಕ ರೋಗವಿದ್ದರೆ ಅದು ನಿಮಗೂ ಹರಡಬಹುದು ಹಾಗಾಗಿ ಮನೆಯಾಗಲಿ ಅಥವಾ ಹೊರಗಡೆ ಸಾರ್ವಜನಿಕ ಕುಡಿಯುವ ನೀರಿನ ಸ್ಥಳವಾಗಲಿ ಯಾವಾಗಲು ಲೋಟವನ್ನು ತೊಳೆಯದೆಯೇ ಬಳಕೆ ಮಾಡಬೇಡಿ.
ಇದನ್ನೂ ಓದಿ: ತಿಂಗಳಲ್ಲಿ ಒಂದು ಬಾರಿಯಾದರು ನದಿ ನೀರಿನ ಸ್ನಾನ ಮಾಡಿ, ಆರೋಗ್ಯದಲ್ಲಿ ಈ ಬದಲಾವಣೆ ಖಂಡಿತ
ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು?
- ಲೋಟವನ್ನು ಚೆನ್ನಾಗಿ ತೊಳೆಯಿರಿ: ಬೇರೊಬ್ಬರು ಬಳಸಿದ ಲೋಟವನ್ನು ನೀವು ಬಳಸುವ ಮೊದಲು ಅದನ್ನು ಸಾಬೂನು ಅಥವಾ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಿರಿ.
- ನಿಮ್ಮದೇ ಲೋಟ ಬಳಕೆ ಮಾಡಿ: ಈ ರೀತಿಯ ಅಪಾಯಗಳನ್ನು ಕಡಿಮೆ ಮಾಡಲು, ಗಾಜು ಅಥವಾ ಸ್ಟಿಲ್ ಲೋಟಗಳನ್ನು ಬಳಕೆ ಮಾಡಿ. ಆದರೆ ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನೀವು ಮಾತ್ರ ಅದನ್ನು ಬಳಸಿ.
- ಶುಚಿತ್ವ ಕಾಪಾಡಿ: ನಿಮ್ಮ ಕೈಗಳು ಮತ್ತು ಪಾತ್ರೆಗಳನ್ನು ನಿಯಮಿತವಾಗಿ ತೊಳೆಯುವುದು ಸಹ ಕಾಯಿಲೆಗಳು ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಈ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ, ಬೇರೆಯವರು ಬಳಸಿದ ಲೋಟ ಉಪಯೋಗ ಮಾಡುವುದನ್ನು ಕಡಿಮೆ ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








