Updated on: Jan 28, 2022 | 3:19 PM
ಅಂದವಾದ ಚರ್ಮ ಇರಬೇಕು ಎನ್ನುವುದು ಎಲ್ಲರ ಬಯಕೆ. ಆದರೆ ಅದಕ್ಕೆ ತಕ್ಕಹಾಗೆ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಈ ಆಹಾರಗಳನ್ನು ನಿಮ್ಮ ಡಯೆಟ್ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಕಾಂತಿಯುತ ಚರ್ಮವನ್ನು ಪಡೆಯಬಹುದು.
ಅವಕಾಡೊ ಅಥವಾ ಬಟರ್ ಫ್ರುಟ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ ಇ ಮತ್ತು ಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ವಾಲ್ನಟ್ ಅಥವಾ ಅಖ್ರೋಟ್ ಚರ್ಮದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಬಿ ಅಂಶಗಳು ಸುಕ್ಕುಗಟ್ಟಿದ, ಕಳೆಗುಂದಿದ ತ್ವಚೆಯನ್ನು ನಿವಾರಿಸುತ್ತದೆ.
ಟೊಮಾಟೋದಲ್ಲಿರುವ ವಿಟಮಿನ್ ಎ,ಸಿ,ಆ್ಯಂಟಿಆಕ್ಸಿಡೆಂಟ್ಗಳು ಮೊಡವೆಗಳನ್ನು ನಿವಾರಿಸಿ ಕ್ಲೀನ್ ಸ್ಕಿನ್ ನೀಡುತ್ತದೆ.
ಕಲ್ಲಂಗಡಿ ಹಣ್ಣು ಮುಖದ ಮೇಲಿನ ಕಲೆಯನ್ನು ನಿವಾರಿಸಲು ಸಹಾಯವಾಗಿದೆ. ಹೆಚ್ಚು ನೀರನಂಶವುಳ್ಳ ಈ ಹಣ್ಣಿನ ಸೇವನೆ ನಿಮ್ಮ ಚರ್ಮವನ್ನು ಕಾಂತಿಯುತವಾಗಿಸುತ್ತದೆ.
ಚರ್ಮಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಬಿ2 ಮತ್ತು ವಿಟಮಿನ್ ಇ ಅಂಶ ಗ್ರೀನ್ ಟೀಯಲ್ಲಿದೆ. ಹೀಗಾಗಿ ಚರ್ಮದ ಸುರಕ್ಷತೆಯಲ್ಲಿ ಗ್ರೀನ್ ಟೀ ಮಹತ್ವದ ಪಾತ್ರವಹಿಸುತ್ತದೆ.
ಯಥೇಚ್ಛವಾದ ಆ್ಯಂಟಿ ಆಕ್ಸಿಡೆಂಟ್, ಫೈಬರ್, ನ್ಯೂಟ್ರಿಯಂಟ್ಸ್ಗಳು ಗುಣಗಳನ್ನು ಹೊಂದಿರುವ ಬೆರ್ರಿಹಣ್ಣುಗಳನ್ನು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಚಾಕಲೇಟ್ ಯಾರಿಗೆ ಇಷ್ಟ ಇಲ್ಲ ಹೇಳಿ. ಚಾಕಲೇಟ್ ಚರ್ಮದ ಆರೋಗ್ಯಕ್ಕೂ ಒಳಿತು. ಹೌದು, ಸನ್ಬರ್ನ್, ಸ್ಕಿನ್ ಟಾನಿಂಗ್ಅನ್ನು ಹೋಗಲಾಡಿಸಲು ಡಾರ್ಕ್ ಚಾಕಲೇಟ್ ಸಹಕಾರಿ.
ದಾಳಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಒಳಿತು. ಒಣ ಚರ್ಮ, ಸುಕ್ಕು ಚರ್ಮವನ್ನು ದಾಳಿಂಬೆ ಹಣ್ಣು ನಿವಾರಿಸುತ್ತದೆ.
ಅಗಸೆ ಬೀಜದಲ್ಲಿ ಸಮೃದ್ಧವಾದ ಕೊಬ್ಬಿನಾಮ್ಲಗಳು ಇರುವುದರಿಂದ ಒಣ ಚರ್ಮವನ್ನು ನಿವಾರಿಸುತ್ತದೆ. ಮತ್ತು ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಗಳು ಚರ್ಮವನ್ನು ಕಾಂತಿಯುತಗೊಳಿಸುತ್ತವೆ.