AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜೆಯಲ್ಲಿ ಪುಟಾಣಿಗಳ ಯಕ್ಷಗಾನದ ಮಜಾ, ಯೂಟ್ಯೂಬ್​​ನಲ್ಲಿ ಫುಲ್​​​ ವೈರಲ್ ಈ ಪುಟ್ಟ ಭಾಗವತರು

ಬೇಸಿಗೆ ರಜೆ ಶುರುವಾಗಿದೆ, ಮಕ್ಕಳಂತೂ ಈ ರಜೆಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೌದು ಮಕ್ಕಳೆಲ್ಲರೂ ಈ ರಜೆಯಲ್ಲಿ ಸ್ವಿಮ್ಮಿಂಗ್, ಕ್ರಿಕೆಟ್, ಡ್ರಾಯಿಂಗ್ ಕಲಿಯಲು ಬೇಸಿಗೆ ಶಿಬಿರಕ್ಕೆ ಹೋದರೆ, ಈ ಮಕ್ಕಳು ಮಾತ್ರ ತಮ್ಮ ವಿಭಿನ್ನವಾದ ಅಭಿರುಚಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈ ಪುಟಾಣಿ ಮಕ್ಕಳಿಗೆ ಸಂಬಂಧ ಪಟ್ಟ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿವೆ. ಹಾಗಾದ್ರೆ ಬೇಸಿಗೆಯಲ್ಲಿ ಈ ಪುಟಾಣಿಗಳು ಯಾವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ರಜೆಯಲ್ಲಿ  ಪುಟಾಣಿಗಳ ಯಕ್ಷಗಾನದ ಮಜಾ,  ಯೂಟ್ಯೂಬ್​​ನಲ್ಲಿ ಫುಲ್​​​ ವೈರಲ್ ಈ ಪುಟ್ಟ ಭಾಗವತರು
ಮಕ್ಕಳ ಯಕ್ಷಗಾನImage Credit source: Youtube
ಸಾಯಿನಂದಾ
|

Updated on: Apr 30, 2025 | 2:51 PM

Share

ಬೇಸಿಗೆ ರಜೆ (summer holiday) ಶುರುವಾಯಿತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆದರೆ ಹೆತ್ತವರಿಗೆ ಯಾಕಾದ್ರೂ ಮಕ್ಕಳಿಗೆ ಬೇಸಿಗೆ ರಜೆ ಶುರುವಾಯಿತು, ಈ ಮಕ್ಕಳ ಕಾಟ ಹೇಗಪ್ಪಾ ತಡೆದುಕೊಳ್ಳುವುದು ಎಂದು ಹೇಳುವುದನ್ನು ಕೇಳಿರುತ್ತೀರಿ. ರಜೆ ಶುರುವಾಗುತ್ತಿದ್ದಂತೆ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಮಕ್ಕಳನ್ನು ಕ್ಯಾಂಪ್ (camp) ಗಳಿಗೆ ಸೇರಿಸಿ ತಮ್ಮ ತಲೆಬಿಸಿಯನ್ನು ದೂರ ಮಾಡಿಕೊಳ್ಳುತ್ತಾರೆ ಈ ಹೆತ್ತವರು. ಆದರೆ ಈ ಪುಟಾಣಿಗಳು ಮಾತ್ರ ಮನೆಯಲ್ಲೇ ಯಕ್ಷಗಾನವನ್ನು ಮಾಡುತ್ತಿದ್ದಾರೆ. ಜನಪ್ರತಿನಿಧಿ (janaprathinidhi) ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.

ಹೌದು, ಈಗಿನ ಮಕ್ಕಳು ಬೇಸಿಗೆ ರಜೆಯಲ್ಲಿ ಶಿಬಿರ, ಸ್ವಿಮ್ಮಿಂಗ್, ಡ್ರಾಯಿಂಗ್ ಸೇರಿದಂತೆ ತಮ್ಮ ಆಸಕ್ತಿದಾಯಕ ವಿಷಯವನ್ನು ಕಲಿಯಲು ಕ್ಲಾಸ್ ಸೇರಿಕೊಳ್ಳುವುದನ್ನು ನೋಡಬಹುದು. ಕೆಲ ಪುಟಾಣಿಗಳು ಆಟ ಆಡುತ್ತಾ ಎಂದು ಬೇಸಿಗೆರಜೆಯನ್ನು ಎಂಜಾಯ್ ಮಾಡುತ್ತಾರೆ. ಆದರೆ ಕೆಲವು ಮಕ್ಕಳು ತಮ್ಮ ವಿಭಿನ್ನವಾದ ಆಸಕ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯೆನ್ನುವಂತೆ ಇಲ್ಲೊಂದು ಪುಟಾಣಿಗಳು ಆಟವಾಡುವುದನ್ನು ಬಿಟ್ಟು ಯಕ್ಷಗಾನವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ : Basava Jayanti 2025: ʼಕಾಯಕವೇ ಕೈಲಾಸʼ ಎಂದು ಮನುಕುಲಕ್ಕೆ ಸಂದೇಶ ಸಾರಿದ ಮಹಾನ್‌ ಸಮಾಜ ಸುಧಾರಕ ಬಸವೇಶ್ವರರು

ಇದನ್ನೂ ಓದಿ
Image
ಮನುಕುಲಕ್ಕೆ ಸಂದೇಶ ಸಾರಿದ ಮಹಾನ್‌ ಸಮಾಜ ಸುಧಾರಕ ಬಸವೇಶ್ವರರು
Image
ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು
Image
8 ಗಂಟೆ ಕೆಲಸವನ್ನು 4 ಗಂಟೆಯಲ್ಲಿ ಮುಗಿಸಬಹುದು, ಹೇಗೆ?
Image
ಮಲದಲ್ಲಿ ಈ ಆಹಾರ ಕಣಗಳು ಕಾಣಿಸಿಕೊಂಡರೆ ಏನರ್ಥ?

ಆಟ ಎಂದು ಬ್ಯುಸಿಯಾಗಿರುವ ಮಕ್ಕಳ ನಡುವೆ ಈ ಪುಟಾಣಿಗಳು ಕರಾವಳಿ ಗಂಡುಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಒಂದನೇ ತರಗತಿ ಶಾಶ್ವತ ಭಾಗವತಿ ಹಾಡನ್ನು ಹಾಡಿದ್ದು, ಮತ್ತೊಬ್ಬ ಪುಟಾಣಿಯೂ ಚಂಡೆ ನುಡಿಸುವುದರಲ್ಲಿ ಬ್ಯುಸಿಯಾಗಿದ್ದಾನೆ. ಇನ್ನೊಬ್ಬನು ಭಾಗವತಿಕೆ ಹಾಡಿಗೆ ಯಕ್ಷಗಾನ ನೃತ್ಯವನ್ನು ಮಾಡಿರುತ್ತಿರುವುದನ್ನು ನೋಡಬಹುದು. ಈ ಪುಟಾಣಿಗಳಿಗೆ ಯಕ್ಷಗಾನದ ಮೇಲೆ ಆಸಕ್ತಿ ಎಷ್ಟಿದೆ ಎನ್ನುವುದಕ್ಕೆ ಇದುವೇ ಸಾಕ್ಷಿಯಾಗಿದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ