Rohit Sharma: ಪುಲ್ ಪುಲ್ ಪುಲ್… ಹಿಟ್ಮ್ಯಾನ್ ಸ್ಪೆಷಲ್ ವಿಡಿಯೋ
Rohit Sharma Birthday: ರೋಹಿತ್ ಶರ್ಮಾ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಭಾರತದ ಪರ ಈವರೆಗೆ 532 ಇನಿಂಗ್ಸ್ ಆಡಿರುವ ಹಿಟ್ಮ್ಯಾನ್ ಒಟ್ಟು 19700 ರನ್ ಕಲೆಹಾಕಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಬ್ಯಾಟ್ನಿಂದ 49 ಶತಕ ಹಾಗೂ 108 ಅರ್ಧಶತಕಗಳು ಮೂಡಿಬಂದಿವೆ. ಇದೀಗ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆದಿರುವ ಹಿಟ್ಮ್ಯಾನ್ ಬ್ಯಾಟ್ನಿಂದ ಮತ್ತಷ್ಟು ದಾಖಲೆಗಳನ್ನು ನಿರೀಕ್ಷಿಸಬಹುದು.
ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಇಂದು 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1987, ಏಪ್ರಿಲ್ 30 ರಂದು ಮಹಾರಾಷ್ಟ್ರದ ನಾಗ್ಪುರದ ಬನ್ಸೋಡ್ನಲ್ಲಿ ಜನಿಸಿದ ರೋಹಿತ್ ಶರ್ಮಾ ಈಗ ಗುರುತಿಸಿಕೊಳ್ಳುತ್ತಿರುವುದು ಹಿಟ್ಮ್ಯಾನ್ ಎಂಬ ಬಿರುದಿನೊಂದಿಗೆ ಎಂಬುದು ವಿಶೇಷ. ಅದರಲ್ಲೂ ಪುಲ್ ಶಾಟ್ ಹೊಡೆತಗಳಿಗೆ ಹೊಸ ಭಾಷ್ಯ ಬರೆದಿದ್ದ ಹಿಟ್ಮ್ಯಾನ್ ಅವರ ಜನ್ಮದಿನದ ಪ್ರಯುಕ್ತ ಐಸಿಸಿ ವಿಶೇಷ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಟೀಮ್ ಇಂಡಿಯಾ ಪರ 499 ಪಂದ್ಯಗಳಲ್ಲಿ 532 ಇನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಈವರೆಗೆ 19700 ರನ್ ಕಲೆಹಾಕಿದ್ದಾರೆ. ಈ ವೇಳೆ 49 ಶತಕ ಹಾಗೂ 108 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಮುಂಬರುವ ಸರಣಿಗಳ ಮೂಲಕ ಹಿಟ್ಮ್ಯಾನ್ 300 ರನ್ ಕಲೆಹಾಕಿದರೆ, ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಹೀಗಾಗಿ ನಿವೃತ್ತಿಗೂ ಮುನ್ನ ರೋಹಿತ್ ಶರ್ಮಾ ಬ್ಯಾಟ್ನಿಂದ 20 ಸಾವಿರ ರನ್ ಹಾಗೂ 50 ಅಂತಾರಾಷ್ಟ್ರೀಯ ಶತಕಗಳನ್ನು ನಿರೀಕ್ಷಿಸಬಹುದು.
Published on: Apr 30, 2025 10:46 AM
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ

