AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali: ರೈತರಿಗೆ ಬಲ ನೀಡುತ್ತಿರುವ ಪತಂಜಲಿ ‘ಕಿಸಾನ್ ಸಮೃದ್ಧಿ ಯೋಜನೆ’

Patanjali's Impact on Indian MSMEs: ಪತಂಜಲಿ ಸಂಸ್ಥೆಯು ಸ್ಥಳೀಯ ರೈತರಿಂದ ನೇರವಾಗಿ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ಮತ್ತು 'ಕಿಸಾನ್ ಸಮೃದ್ಧಿ ಯೋಜನೆ' ಮೂಲಕ ರೈತರನ್ನು ಡಿಜಿಟಲ್‌ ರೀತಿಯಲ್ಲಿ ಸಬಲೀಕರಣಗೊಳಿಸುವ ಮೂಲಕ MSME ವಲಯವನ್ನು ಬಲಪಡಿಸುತ್ತಿದೆ. ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುವ ಮೂಲಕ ಮತ್ತು ಗ್ರಾಮೀಣ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ.

Patanjali: ರೈತರಿಗೆ ಬಲ ನೀಡುತ್ತಿರುವ ಪತಂಜಲಿ ‘ಕಿಸಾನ್ ಸಮೃದ್ಧಿ ಯೋಜನೆ’
ಪತಂಜಲಿ ಆಯುರ್ವೇದ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 25, 2025 | 5:23 PM

Share

ಪತಂಜಲಿ ಸಂಸ್ಥೆ (Patanjali) ಸ್ಥಳೀಯ ರೈತರಿಂದ ನೇರವಾಗಿ ಕಚ್ಚಾ ವಸ್ತುಗಳನ್ನು ಖರೀದಿ ಮಾಡುತ್ತಿದೆ. ‘ಕಿಸಾನ್ ಸಮೃದ್ಧಿ ಯೋಜನೆ’ ಮೂಲಕ ರೈತರನ್ನು ಡಿಜಿಟಲ್ ರೂಪದಲ್ಲಿ ಸಬಲೀಕರಣಗೊಳಿಸುತ್ತಿದೆ. ದೇಶಾದ್ಯಂತ ಮಹಿಳಾ ಉದ್ದಿಮೆದಾರರನ್ನು ಬೆಂಬಲಿಸುತ್ತಿದೆ. ಈ ಮೂಲಕ ಪತಂಜಲಿ ಸಂಸ್ಥೆಯು ಸ್ವಾವಲಂಬಿ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡುತ್ತಿರುವುದಾಗಿ ಹೇಳಿಕೊಂಡಿದೆ. ಪತಂಜಲಿ ಬೆಳೆದಂತೆ ಅದು ಎಂಎಸ್​ಎಂಇ ವಲಯಕ್ಕೆ ಪುಷ್ಟಿ ಸಿಕ್ಕಿದಂತೆ. MSME ವಲಯವು ಭಾರತೀಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶದ GDP ಯ ಶೇಕಡಾ 30 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ ಮತ್ತು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ.

ಪತಂಜಲಿ ಆಯುರ್ವೇದ ಸಂಸ್ಥೆಯ ಪ್ರಕಾರ, ಕಂಪನಿಯು ಈ ಕ್ಷೇತ್ರವನ್ನು ಬಲಪಡಿಸುವ ಮತ್ತು ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ತನ್ನ ವಿವಿಧ ಉಪಕ್ರಮಗಳ ಮೂಲಕ, ಪತಂಜಲಿ ಗ್ರಾಮೀಣ ಮತ್ತು ನಗರ ಉದ್ದಿಮೆದಾರರನ್ನು ಸಬಲೀಕರಣಗೊಳಿಸುತ್ತಿದೆ ಮತ್ತು ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದೆ.

“ಪತಂಜಲಿ ಸಂಸ್ಥೆಯು ಸ್ಥಳೀಯ ರೈತರು ಮತ್ತು ಕೃಷಿ ಉತ್ಪಾದಕರಿಂದ ನೇರವಾಗಿ ಕಚ್ಚಾ ವಸ್ತುಗಳನ್ನು ಖರೀದಿಸುತ್ತದೆ. ರೈತರಿಂದ ಗಿಡಮೂಲಿಕೆಗಳು, ಧಾನ್ಯಗಳು, ಎಣ್ಣೆಗಳು ಮತ್ತು ಇತರ ಕಚ್ಚಾ ವಸ್ತುಗಳನ್ನು ಪಡೆಯುತ್ತದೆ. ಇದರಿಂದಾಗಿ ಅವರ ಆದಾಯ ಹೆಚ್ಚಾಗುತ್ತದೆ. ಈ ಕ್ರಮವು MSME ಗಳಿಗೆ ಆರ್ಥಿಕ ನೆರವು ನೀಡುವುದಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ” ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಗ್ರಾಮೀಣ ಭಾಗವನ್ನೂ ಬಲಪಡಿಸುತ್ತಿರುವ ಪತಂಜಲಿ; ಸಂಸ್ಥೆ ಮಾಡುತ್ತಿರುವ ಕಾರ್ಯಗಳಿವು

ಹರಿದ್ವಾರ ಮೂಲದ ಪತಂಜಲಿ ಫುಡ್ ಅಂಡ್ ಹರ್ಬಲ್ ಪಾರ್ಕ್ ಸ್ಥಳೀಯ ಸಮುದಾಯಗಳಿಗೆ ಪ್ರಮುಖ ಕೇಂದ್ರವಾಗಿದೆ. ಅಲ್ಲಿ ರೈತ ಗುಂಪುಗಳು, ಪಂಚಾಯತ್‌ಗಳು ಮತ್ತು ಸ್ವ-ಸಹಾಯ ಗುಂಪುಗಳು ಸಹಕಾರಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಇದು ನೂರಾರು ಜನರಿಗೆ ಉದ್ಯೋಗವನ್ನು ಸೃಷ್ಟಿಸಿದೆ ಮತ್ತು ಗ್ರಾಮೀಣ ಮೂಲಸೌಕರ್ಯವನ್ನು ಸುಧಾರಿಸಿದೆ.

ಕಿಸಾನ್ ಸಮೃದ್ಧಿ ಯೋಜನೆ ಎಂದರೇನು?

ರೈತರನ್ನು ಡಿಜಿಟಲ್ ರೂಪದಲ್ಲಿ ಸಬಲೀಕರಣಗೊಳಿಸಲು ಪತಂಜಲಿ ‘ಕಿಸಾನ್ ಸಮೃದ್ಧಿ ಯೋಜನೆ’ಯನ್ನು ಪ್ರಾರಂಭಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಯೋಜನೆಯಡಿಯಲ್ಲಿ, ರೈತರು ಸ್ಮಾರ್ಟ್ ಅನಾಲಿಸಿಸ್, ಹವಾಮಾನ ಮುನ್ಸೂಚನೆ ಮತ್ತು ರಿಯಲ್ ಟೈಮ್ ಮಾರುಕಟ್ಟೆ ಬೆಲೆ ಮಾಹಿತಿಯನ್ನು ಒದಗಿಸುವ ಮೊಬೈಲ್ ಅಪ್ಲಿಕೇಶನ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಈ ಉಪಕರಣಗಳು ಅವರಿಗೆ ಮಾಹಿತಿಯುಕ್ತ ಮತ್ತು ಲಾಭದಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ. ಇದರ ಹೊರತಾಗಿ, ಇನ್‌ವಾಯ್ಸ್ ಆಧಾರಿತ ಹಣಕಾಸು ಒದಗಿಸಲು ಫಿನ್‌ಟೆಕ್ ಕಂಪನಿಗಳೊಂದಿಗೆ ಪತಂಜಲಿ ಪಾಲುದಾರಿಕೆ ಹೊಂದಿದೆ. ಇದು MSME ಗಳಿಗೆ ತಕ್ಷಣದ ಕಾರ್ಯನಿರತ ಬಂಡವಾಳವನ್ನು ಪಡೆಯಲು ಸಹಾಯ ಮಾಡುತ್ತದೆ. ಸಣ್ಣ ವ್ಯವಹಾರಗಳಿಗೆ ದಾಸ್ತಾನು ಮತ್ತು ನಗದು ಹರಿವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಮಹಿಳಾ ಉದ್ಯಮಿಗಳ ಮೇಲೆ ಗಮನ

ಸಾವಯವ ಕೃಷಿಯಲ್ಲಿ ತರಬೇತಿ ಮತ್ತು ಡಿಜಿಟಲ್ ಪರಿಕರ ಸೌಲಭ್ಯ ಮೂಲಕ ಮಹಿಳಾ ಉದ್ಯಮಿಗಳಿಗೆ ವಿಶೇಷ ಬೆಂಬಲವನ್ನು ನೀಡುವುದಾಗಿ ಪತಂಜಲಿ ಹೇಳಿಕೊಂಡಿದೆ. ಇದು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಸ್ವ-ಉದ್ಯೋಗ ಅವಕಾಶಗಳನ್ನು ತೆರೆದಿಟ್ಟಿದೆ. ಸ್ವದೇಶಿ ಕೇಂದ್ರಗಳು ಮತ್ತು ಆಯುರ್ವೇದ ಚಿಕಿತ್ಸಾಲಯಗಳಂತಹ ಪತಂಜಲಿಯ ಉಪಕ್ರಮಗಳು ಸ್ಥಳೀಯ ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ಮತ್ತು ಬೆಳೆಸಲು ಸಹಾಯ ಮಾಡುತ್ತವೆ. ಕಂಪನಿಯ ಕಾರ್ಯತಂತ್ರವು ಹೇಳಿದಂತೆ, ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಆದರೆ ಸ್ಥಳೀಯ ಸಮುದಾಯಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವತ್ತ ಗಮನಹರಿಸುತ್ತದೆ.

ಇದನ್ನೂ ಓದಿ: ತೂಕ ನಿರ್ವಹಣೆಗೆ ಆಯುರ್ವೇದ: ಬಾಬಾ ರಾಮದೇವ್ ಅವರ ಯೋಗ ಮತ್ತು ಆಹಾರ ಕ್ರಮಗಳು

MSMEಗಳು ಮತ್ತು ಸ್ಥಳೀಯ ವ್ಯವಹಾರಗಳಿಗೆ ಪತಂಜಲಿ ಉತ್ತೇಜನ

ಈ ಉಪಕ್ರಮಗಳು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂದು ಪತಂಜಲಿ ಹೇಳುತ್ತದೆ. ಕಂಪನಿಯ ‘ಪ್ರಕೃತಿ ಕಾ ಆಶೀರ್ವಾದ್’ ಎಂಬ ಘೋಷಣೆಯು ಭಾರತೀಯ ಸಂಸ್ಕೃತಿ ಮತ್ತು ಆಯುರ್ವೇದ ಮೌಲ್ಯಗಳನ್ನು ಉತ್ತೇಜಿಸುವ ತನ್ನ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ. ಪತಂಜಲಿಯ ಕಾರ್ಯತಂತ್ರವು ಅದನ್ನು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ FMCG ಬ್ರ್ಯಾಂಡ್‌ಗಳಲ್ಲಿ ಒಂದನ್ನಾಗಿ ಮಾಡಿದೆ. ಮತ್ತು MSMEಗಳು ಮತ್ತು ಸ್ಥಳೀಯ ವ್ಯವಹಾರಗಳಿಗೆ ಸ್ಫೂರ್ತಿಯ ಮೂಲವನ್ನಾಗಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ