GDP: ಭಾರತದ ಮೊದಲನೇ ತ್ರೈಮಾಸಿಕ ಜಿಡಿಪಿ ಶೇ 20ರಷ್ಟು ಬೆಳವಣಿಗೆ

2021-22ನೇ ಆರ್ಥಿಕ ವರ್ಷದಲ್ಲಿ ಏಪ್ರಿಲ್​ನಿಂದ ಜೂನ್​​ವರೆಗಿಗಿನ  ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 20.1ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ ಕಡಿಮೆ ಮೂಲಾಂಶ ಹಿನ್ನೆಲೆಯಲ್ಲಿ ಈ ತ್ರೈಮಾಸಿಕದಲ್ಲಿ ದಾಖಲೆಯ ಬೆಳವಣಿಗೆ ಆಗಿದೆ ಎಂಬುದು ಆಗಸ್ಟ್ 31ರಂದು ಬಿಡುಗಡೆಯಾದ ದತ್ತಾಂಶದಿಂದ ತಿಳಿದುಬಂದಿದೆ. ಕೊವಿಡ್-19 ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಹೇರಿದ್ದರಿಂದ ಕಳೆದ ವರ್ಷದ, ಅಂದರೆ FY21ರ ಏಪ್ರಿಲ್​ನಿಂದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 24.4ರಷ್ಟು ಕುಗ್ಗಿತ್ತು. ಭಾರತ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಇದು ಭಾರೀ ಪ್ರಮಾಣದ ಕುಸಿತ ಆಗಿತ್ತು. 41 […]

GDP: ಭಾರತದ ಮೊದಲನೇ ತ್ರೈಮಾಸಿಕ ಜಿಡಿಪಿ ಶೇ 20ರಷ್ಟು ಬೆಳವಣಿಗೆ
ಪ್ರಾತಿನಿಧಿಕ ಚಿತ್ರ
Follow us
| Updated By: Srinivas Mata

Updated on:Aug 31, 2021 | 7:02 PM

2021-22ನೇ ಆರ್ಥಿಕ ವರ್ಷದಲ್ಲಿ ಏಪ್ರಿಲ್​ನಿಂದ ಜೂನ್​​ವರೆಗಿಗಿನ  ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 20.1ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ ಕಡಿಮೆ ಮೂಲಾಂಶ ಹಿನ್ನೆಲೆಯಲ್ಲಿ ಈ ತ್ರೈಮಾಸಿಕದಲ್ಲಿ ದಾಖಲೆಯ ಬೆಳವಣಿಗೆ ಆಗಿದೆ ಎಂಬುದು ಆಗಸ್ಟ್ 31ರಂದು ಬಿಡುಗಡೆಯಾದ ದತ್ತಾಂಶದಿಂದ ತಿಳಿದುಬಂದಿದೆ. ಕೊವಿಡ್-19 ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಹೇರಿದ್ದರಿಂದ ಕಳೆದ ವರ್ಷದ, ಅಂದರೆ FY21ರ ಏಪ್ರಿಲ್​ನಿಂದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 24.4ರಷ್ಟು ಕುಗ್ಗಿತ್ತು. ಭಾರತ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಇದು ಭಾರೀ ಪ್ರಮಾಣದ ಕುಸಿತ ಆಗಿತ್ತು.

41 ಆರ್ಥಶಾಸ್ತ್ರಜ್ಞರ ಅಭಿಮತದ ಪ್ರಕಾರ, ಏಪ್ರಿಲ್​ನಿಂದ ಜೂನ್​ ತ್ರೈಮಾಸಿಕಕ್ಕೆ ಶೇ 20ರಷ್ಟು ಜಿಡಿಪಿ ಬೆಳವಣಿಗೆ ಆಗಬಹುದು ಎನ್ನಲಾಗಿತ್ತು. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇ 21.4ರಷ್ಟಿ ಬೆಳವಣಿಗೆ ಆಗಬಹುದು ಎಂದು ಅಂದಾಜು ಮಾಡಲಾಗಿತ್ತು. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯಿಂದ ಆಗಸ್ಟ್ 31ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ರಿಯಲ್ ಗ್ರಾಸ್ ವ್ಯಾಲ್ಯೂ ಮೊದಲ ತ್ರೈಮಾಸಿಕದಲ್ಲಿ ಶೇ 18.8ರಷ್ಟು ಸೇರಿದೆ. ವ್ಯಾಪಾರ, ಹೋಟೆಲ್​ಗಳು, ಟ್ರಾನ್ಸ್​ಪೋರ್ಟ್ ಮತ್ತು ಸಂವಹನ ಸೇವೆಗಳು ವರ್ಷದಿಂದ ವರ್ಷಕ್ಕೆ ಶೇ 68.3ರಷ್ಟು ಏರಿಕೆ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಭಾರೀ ಇಳಿಕೆ ಆಗಿ, ಶೇ 48.1ರಷ್ಟು ಕ್ರಮವಾಗಿ ಇಳಿಕೆಯಾಗಿದೆ. ಉತ್ಪಾದನೆಯು ಕಳೆದ ವರ್ಷ ಏಪ್ರಿಲ್​ನಿಂದ ಜೂನ್​ನಲ್ಲಿ ಶೇ 36ರಷ್ಟು ಇಳಿಕೆ ಆಗಿದ್ದು, ಈ ಬಾರಿ ಶೇ 49.6ರಷ್ಟು ಬೆಳವಣಿಗೆ ಆಗಿದೆ.

ಎರಡನೇ ಅಲೆಯ ಪ್ರಭಾವ ವಲಯವಾರು ಬೆಳವಣಿಗೆ ಕಂಡಿದ್ದು, ಈ ಹಿಂದಿನ ವರ್ಷಗಳಷ್ಟು ಕುಸಿತ ಕಂಡಷ್ಟು ತೀಕ್ಷ್ಣವಾಗಿ ಚೇತರಿಕೆ ಕಂಡಿಲ್ಲ. ಕಳೆದ ಮೇ ತಿಂಗಳಲ್ಲಿ ಕೊವಿಡ್ ಎರಡನೇ ಅಲೆ ಗರಿಷ್ಠ ಮಟ್ಟದಲ್ಲಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಅತ್ಯುತ್ತಮ ಉದಾಹರಣೆ ಅಂದರೆ ಮನೆಯ ಬಳಕೆ ಖರ್ಚುಗಳು, ಖಾಸಗಿ ಅಂತಿಮ ಬಳಕೆ ವೆಚ್ಚಗಳಾಗಿದೆ. ಜಿಡಿಪಿಯ ದರದಂತೆ, ತ್ರೈಮಾಸಿಕದಲ್ಲಿ ಲಾಕ್​ಡೌನ್​ನಲ್ಲಿ ಶೇ ಇದ್ದದ್ದು ಈಗ ಶೇಕಡಾ 55.1ರಷ್ಟಿದೆ. ಮೋದಿ ಸರ್ಕಾರದ ಮೂಲಸೌಕರ್ಯ ಮತ್ತು ಸಾರ್ವಜನಿಕ ಬಂಡವಾಳ ಹೂಡಿಕೆಯು ಒಟ್ಟು ಫಿಕ್ಸೆಡ್ ಬಂಡವಾಳದ ರಚನೆಯ ಅಂಕಿಅಂಶಗಳಲ್ಲಿ ತೋರಿಸಿದೆ. ಇದು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇಕಡಾ 24.4ಕ್ಕೆ ಹೋಲಿಸಿದರೆ ಈಗ ಶೇ 31.6ರಷ್ಟಿದೆ.

ಇದನ್ನೂ ಓದಿ: India GDP Contraction: ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಜಿಡಿಪಿ ಐತಿಹಾಸಿಕ ಕುಸಿತ; ದೇಶದ ಮುಂದಿನ ಹಾದಿ ಏನು?

(India GDP Growth On FY22 First Quarter Of April To June At 20 Percent)

Published On - 5:56 pm, Tue, 31 August 21

ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ