AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಮಧ್ಯಾಹ್ನದ ಹೊತ್ತಿಗೇ 72 ಲಕ್ಷಕ್ಕೂ ಅಧಿಕ ಡೋಸ್​ ಲಸಿಕೆ ವಿತರಣೆ; 1 ಕೋಟಿಯ ಗುರಿಯತ್ತ ದಾಪುಗಾಲು

Covid 19 Vaccine: ಆಗಸ್ಟ್ ತಿಂಗಳಲ್ಲಿ​ 21-27ರವರೆಗೆ ಅತ್ಯಂತ ಹೆಚ್ಚು ಡೋಸ್​ ಲಸಿಕೆ ನೀಡಲಾಗಿದೆ. ಇದನ್ನು ಅತಿ ಹೆಚ್ಚು ಡೋಸ್​ ಲಸಿಕೆ ನೀಡಿದ ವಾರ ಎಂದು ಪರಿಗಣಿಸಲಾಗಿದ್ದು, ಈ ಅವಧಿಯಲ್ಲಿ ಬರೋಬ್ಬರಿ 4.5 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.

ಇಂದು ಮಧ್ಯಾಹ್ನದ ಹೊತ್ತಿಗೇ 72 ಲಕ್ಷಕ್ಕೂ ಅಧಿಕ ಡೋಸ್​ ಲಸಿಕೆ ವಿತರಣೆ; 1 ಕೋಟಿಯ ಗುರಿಯತ್ತ ದಾಪುಗಾಲು
ಕೊವಿಡ್ ಲಸಿಕೆ ಪಡೆಯುತ್ತಿರುವ ಮಹಿಳೆ
TV9 Web
| Edited By: |

Updated on: Aug 31, 2021 | 6:02 PM

Share

ಆಗಸ್ಟ್​ 27 (ಶುಕ್ರವಾರ) ಭಾರತದಲ್ಲಿ 1 ಕೋಟಿ ಡೋಸ್​ ಲಸಿಕೆ ( Covid 19 Vaccine) ನೀಡಿ, ದಾಖಲೆ ಮಾಡಲಾಗಿದೆ. 138 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಪ್ರತಿದಿನ ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಲಸಿಕಾ ಅಭಿಯಾನದ ವೇಗ ಹೆಚ್ಚಿಸಬೇಕು ಎಂಬುದು ಕೇಂದ್ರ ಸರ್ಕಾರ(Central Government)ದ ಉದ್ದೇಶ. ಅದನ್ನು ಸಾಧಿಸುವತ್ತ ಮುಂದಡಿ ಇಡಲಾಗುತ್ತಿದೆ. ಹಾಗೇ, ಇಂದು (ಮಂಗಳವಾರ) ಕೂಡ ಮಧ್ಯಾಹ್ನ 3 ಗಂಟೆಯ ಹೊತ್ತಿಗೇ 72 ಲಕ್ಷಕ್ಕೂ ಅಧಿಕ ಡೋಸ್​ ಲಸಿಕೆ ನೀಡಲಾಗಿದ್ದು, 1 ಕೋಟಿ ಡೋಸ್​ ತಲುಪುವ ನಿರೀಕ್ಷೆ ಇದೆ.

ಇಲ್ಲಿಯವರೆಗೆ ಅತಿಹೆಚ್ಚು ಅಂದರೆ 1,00,64,032ಗಳಷ್ಟು ಡೋಸ್​ ಲಸಿಕೆಯನ್ನು ಶುಕ್ರವಾರ ನೀಡಲಾಗಿತ್ತು. ಉತ್ತರಪ್ರದೇಶದಲ್ಲಿ 29 ಲಕ್ಷಕ್ಕೂ ಅಧಿಕ ಡೋಸ್​ ಲಸಿಕೆ ನೀಡಲಾಗಿತ್ತು. ಭಾರತ ಶುಕ್ರವಾರ ಮಾಡಿದ ದಾಖಲೆಯನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಸೇರಿ ಹಲವು ಗಣ್ಯರು ಶ್ಲಾಘಿಸಿದ್ದರು. ಡಬ್ಲ್ಯೂಎಚ್​ಒ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಕೂಡ ಈ ಪ್ರಯತ್ನವನ್ನು ಹೊಗಳಿದ್ದರು.

ಆಗಸ್ಟ್ ತಿಂಗಳಲ್ಲಿ​ 21-27ರವರೆಗೆ ಅತ್ಯಂತ ಹೆಚ್ಚು ಡೋಸ್​ ಲಸಿಕೆ ನೀಡಲಾಗಿದೆ. ಇದನ್ನು ಅತಿ ಹೆಚ್ಚು ಡೋಸ್​ ಲಸಿಕೆ ನೀಡಿದ ವಾರ ಎಂದು ಪರಿಗಣಿಸಲಾಗಿದ್ದು, ಈ ಅವಧಿಯಲ್ಲಿ ಬರೋಬ್ಬರಿ 4.5 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದನ್ನು ಬಿಟ್ಟರೆ ಜೂನ್​ ಮೂರನೇ ವಾರದಲ್ಲಿ 4.12 ಡೋಸ್​ ಲಸಿಕೆ ನೀಡಲಾಗಿತ್ತು. ಆಗಸ್ಟ್​ ತಿಂಗಳಲ್ಲಿ ಪ್ರತಿ ವಾರವೂ ಸಾಮಾನ್ಯವಾಗಿ 3.5 ಕೋಟಿ ಡೋಸ್​ಗೂ ಅಧಿಕ ಲಸಿಕೆ ನೀಡಲಾಗಿದೆ.

ಆಗಸ್ಟ್​​ನಲ್ಲಿ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳು  ಅತಿ ಹೆಚ್ಚು ಜನರಿಗೆ ಲಸಿಕೆ ಕೊಟ್ಟಿವೆ. ಆಗಸ್ಟ್​ ಡಾಟಾ ಪ್ರಕಾರ ಈ ಉತ್ತರ ಪ್ರದೇಶ 2.15 ಕೋಟಿ ಡೋಸ್​, ಮಧ್ಯಪ್ರದೇಶ 1.3 ಕೋಟಿ ಡೋಸ್​ ಮತ್ತು ಮಹಾರಾಷ್ಟ್ರ 1.1 ಕೋಟಿ ಡೋಸ್​ ಲಸಿಕೆ ವಿತರಿಸಿದೆ.

ಇದನ್ನೂ ಓದಿ: Aadhaar Link: ಆಧಾರ್ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ ಅಡಚಣೆಯಿಲ್ಲ; ಯುಐಡಿಎಐ ಸ್ಪಷ್ಟನೆ

ಕೂರ್ಗ್, ಚಿಕ್ಕಮಗಳೂರು ಕಾಫಿ, ಮೈಸೂರು ಸೋಪ್, ಸಿಲ್ಕ್, ಅಗರಬತ್ತಿ ಸೇರಿ ಕರ್ನಾಟಕದ 10 ವಿಶೇಷ ಅಂಚೆ ಲಕೋಟೆ ಬಿಡುಗಡೆ