ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಡಿಜಿಯಾಗಿ ಸಂಜಯ್ ಅಧಿಕಾರ ಸ್ವೀಕಾರ
ಡಿಜಿ ಸ್ಥಾನಕ್ಕೆ ಏರಿದ ಸಂಜಯ್ ಅರೋರಾ, ಸಿಆರ್ಪಿಎಫ್ (ಕೇಂದ್ರೀಯ ಮೀಸಲು ಪಡೆ)ನ ವಿಶೇಷ ಮಹಾ ನಿರ್ದೇಶಕರಾಗಿದ್ದು. 1997ರಿಂದ 2002ರವರೆಗೆ ಕಮಾಂಡಂಟ್ ಆಗಿ ಐಟಿಬಿಪಿಯಲ್ಲಿ ಸೇವೆ ಸಲ್ಲಿಸಿದ್ದರು.
ಐಪಿಎಸ್ ಅಧಿಕಾರಿ ಸಂಜಯ್ ಅರೋರಾ ಇಂದು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ (ITBP) ಮಹಾ ನಿರ್ದೇಶಕ (Director General-DG)ಯಾಗಿ ಅಧಿಕಾರ ವಹಿಸಿಕೊಂಡರು. ಈ ಹಿಂದಿದ್ದ ಎಸ್.ಎಸ್.ದೇಸ್ವಾಲ್ ನಿವೃತ್ತಿ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಸಂಜಯ್ ಅರೋರಾ ಏರಿದ್ದಾರೆ. 31ನೇ ಡಿಜಿಯಾಗಿ ನೇಮಕಗೊಂಡ ಸಂಜಯ್ ಅರೋರಾರಿಗೆ, ನಿರ್ಗಮಿತ ಡಿಜಿ ದೇಸ್ವಾಲ್, ಐಟಿಬಿಪಿ ಪ್ರಧಾನ ಕಚೇರಿಯಲ್ಲಿ ಅಧಿಕಾರ ದಂಡವನ್ನು ಹಸ್ತಾಂತರ ಮಾಡಿದ್ದಾರೆ.
ದೇಸ್ವಾಲ್ ಹರ್ಯಾಣ ಕೇಡರ್ನ ಐಪಿಎಸ್ ಅಧಿಕಾರಿಯಾಗಿದ್ದವರು, 2018ರ ಅಕ್ಟೋಬರ್ 31ರಂದು ಐಟಿಬಿಪಿ ಡಿಜಿಯಾಗಿ ನೇಮಕಗೊಂಡಿದ್ದರು. ಸಶಸ್ತ್ರ ಸೀಮಾ ಬಲದ ಡಿಜಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಇದೀಗ ಡಿಜಿ ಸ್ಥಾನಕ್ಕೆ ಏರಿದ ಸಂಜಯ್ ಅರೋರಾ, ಸಿಆರ್ಪಿಎಫ್ (ಕೇಂದ್ರೀಯ ಮೀಸಲು ಪಡೆ)ನ ವಿಶೇಷ ಮಹಾ ನಿರ್ದೇಶಕರಾಗಿದ್ದು. 1997ರಿಂದ 2002ರವರೆಗೆ ಕಮಾಂಡಂಟ್ ಆಗಿ ಐಟಿಬಿಪಿಯಲ್ಲಿ ಸೇವೆ ಸಲ್ಲಿಸಿದ್ದರು. ತರಬೇತಿ ಕ್ಷೇತ್ರದಲ್ಲಿ ಬೋಧಕರಾಗಿ ಮಹತ್ವದ ಸಾಧನೆ ಮಾಡಿದ್ದಾರೆ. ಹಾಗೇ, 2000-2002ರವರೆಗೆ ಉತ್ತರಾಖಂಡ್ನ ಮಸ್ಸೂರಿಯಲ್ಲಿರುವ ಐಟಿಬಿಪಿ ಅಕಾಡೆಮಿಯ ತರಬೇತಿ ವಿಭಾಗದಲ್ಲಿ ಕಮಾಂಡಂಟ್ ಆಗಿ ಕೆಲಸ ಮಾಡಿದ್ದರು.
Delhi: Sanjay Arora (on left in pics) takes charge as new DG of Indo-Tibetan Border Police (ITBP).
Outgoing ITBP DG SS Deswal was also present pic.twitter.com/gQC1KnImXK
— ANI (@ANI) August 31, 2021
ಇದನ್ನೂ ಓದಿ: ಹಿಂದೂಗಳ ಜನಸಂಖ್ಯೆ ಹೆಚ್ಚಾಗಿರುವವರೆಗೆ ಮಾತ್ರ ಸಂವಿಧಾನ ಉಳಿಯಲಿದೆ: ಸಿ ಟಿ ರವಿ
Published On - 6:19 pm, Tue, 31 August 21