ಕೂರ್ಗ್, ಚಿಕ್ಕಮಗಳೂರು ಕಾಫಿ, ಮೈಸೂರು ಸೋಪ್, ಸಿಲ್ಕ್, ಅಗರಬತ್ತಿ ಸೇರಿ ಕರ್ನಾಟಕದ 10 ವಿಶೇಷ ಅಂಚೆ ಲಕೋಟೆ ಬಿಡುಗಡೆ

ಈ-ಪೋಸ್ಟ್ ಆಫೀಸ್​ಗಳಲ್ಲಿ (www.indiapost.gov.in) ಕರ್ನಾಟಕದ 10 ವಿಶೇಷ ಭೌಗೋಳಿಕ ಉತ್ಪನ್ನಗಳ ವಿಶೇಷ ಅಂಚೆ ಲಕೋಟೆ ಲಭ್ಯವಿರುತ್ತದೆ.

ಕೂರ್ಗ್, ಚಿಕ್ಕಮಗಳೂರು ಕಾಫಿ, ಮೈಸೂರು ಸೋಪ್, ಸಿಲ್ಕ್, ಅಗರಬತ್ತಿ ಸೇರಿ ಕರ್ನಾಟಕದ 10 ವಿಶೇಷ ಅಂಚೆ ಲಕೋಟೆ ಬಿಡುಗಡೆ
ಭಾರತೀಯ ಅಂಚೆ
Follow us
| Updated By: guruganesh bhat

Updated on:Aug 31, 2021 | 9:58 PM

ಬೆಂಗಳೂರು: ಕರ್ನಾಟಕದ ವಿವಿಧ ಪ್ರಾದೇಶಿಕತೆ  ಮತ್ತು ಭೌಗೋಳಿಕತೆಗೆ ಸಂಬಂಧಿಸಿ ವಿಶೇಷತೆಗಳನ್ನು ಹೊಂದಿರುವ (ಪ್ರಾದೇಶಿಕ ಸೂಚ್ಯಂಕ)  ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸಲು ಹತ್ತು ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಾಗಿದೆ. ಕೂರ್ಗ್ ಅರೇಬಿಕಾ ಕಾಫಿ, ಚಿಕ್ಕಮಗಳೂರು ಅರೇಬಿಕಾ ಕಾಫಿ, ಬಾಬಾಬುಡನ್​ಗಿರಿ ಕಾಫಿ, ಮೈಸೂರು ಸಿಲ್ಕ್, ದೇವನಹಳ್ಳಿ ಪೊಮೆಲೊ, ಬೆಂಗಳೂರು ಬ್ಲೂ ಗ್ರೇಪ್ಸ್, ಬೆಂಗಳೂರು ರೋಜ್ ಆನಿಯನ್, ಮೈಸೂರು ಸ್ಯಾಂಡಲ್ ಸೋಪ್, ಕೊಲ್ಹಾಪುರಿ ಚಪ್ಪಲ್, ಮೈಸೂರು ಅಗರಬತ್ತಿಗಳ ವಿಶೇಷ ಅಂಚೆ ಲಕೋಟೆಗಳನ್ನು ಇಂದು (ಆಗಸ್ಟ್ 31) ಬಿಡುಗಡೆ ಮಾಡಲಾಗಿದೆ.

ಈ ಅಂಚೆ ಲಕೋಟೆಗಳು ಫಿಲಾಟೆಲಿ ಬ್ಯೂರೋ ಬೆಂಗಳೂರು, ಜಿ.ಪಿ.ಓ, ಮಂಗಳೂರು ಮುಖ್ಯ ಅಂಚೆ ಕಚೇರಿ, ಮೈಸೂರು ಅಂಚೆ ಕಚೇರಿ, ಬೆಳಗಾವಿ ಮುಖ್ಯ ಅಂಚೆ ಕಚೇರಿ ಮತ್ತು ಈ-ಪೋಸ್ಟ್ ಆಫೀಸ್​ಗಳಲ್ಲಿ (www.indiapost.gov.in) ಕರ್ನಾಟಕದ 10 ವಿಶೇಷ ಭೌಗೋಳಿಕ ಉತ್ಪನ್ನಗಳ ವಿಶೇಷ ಅಂಚೆ ಲಕೋಟೆ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಶಾರದಾ ಸಂಪತ್, ಕರ್ನಾಟಕ ಸರ್ಕಾರದ ತೋಟಗಾರಿಕಾ ಸಚಿವ ಮುನಿರತ್ನ ನಾಯ್ಡು ಅವರು ಈ ಅಂಚೆ ಲಕೋಟೆಗಳನ್ನುಇಂದಷ್ಟೇ (ಆಗಸ್ಟ್ 31) ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಉತ್ಪನ್ನಗಳಿಗೆ ಸಂಬಂಧಿಸಿದ 10 ವಿಶೇಷ ಲಕೋಟೆಗಳನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಅಲ್ಲದೇ ಕರ್ನಾಟಕದ ವಿಶಿಷ್ಟ ಉತ್ಪನ್ನಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೆ ಬರಲು ಈ ಅಂಚೆ ಲಕೋಟೆಗಳು ಸಹಕಾರಿಯಾಗಲಿವೆ

ಇದನ್ನೂ ಓದಿ: 

India Pak: ಭಾರತ ಪಾಕಿಸ್ತಾನದ ನಡುವೆ ಶುರುವಾಗಿದೆ ಅಕ್ಕಿಯ ಕಲಹ; ಇಲ್ಲಿದೆ ವಿವರ

ಕೊರೊನಾ ಕಾಲದಲ್ಲಿ ರೈತರಿಗೆ ಅಂಚೆ ಇಲಾಖೆ ಸಾಥ್​​; ಕೋಲಾರದ ಮಾವಿನ ಹಣ್ಣನ್ನು ಆನ್​ಲೈನ್ ಮೂಲಕ ಕೊಳ್ಳಲು ಅವಕಾಶ

(Indian Postal Department releases 10 special Postal envelope including Coorg and Chikkamagaluru Coffee Mysore Soap Silk Agarbatti)

Published On - 5:09 pm, Tue, 31 August 21