Sign In

By signing in or creating an account, you agree with Associated Broadcasting Company's Terms & Conditions and Privacy Policy.

India Pak: ಭಾರತ ಪಾಕಿಸ್ತಾನದ ನಡುವೆ ಶುರುವಾಗಿದೆ ಅಕ್ಕಿಯ ಕಲಹ; ಇಲ್ಲಿದೆ ವಿವರ

Basmati Rice: ಈಗಾಗಲೇ ಬಾಸ್ಮತಿ ಅಕ್ಕಿಯ ಪ್ರಬೇಧಗಳಾದ ಕಾಸ್ಮತಿ, ಟೆಕ್ಸ್​ಮತಿ, ಜಾಸ್ಮತಿಗಳಿಗೆ ಪೇಟೆಂಟ್ ಪಡೆದಿದೆ ಭಾರತ. ಇದೇ ದಾರಿಯಲ್ಲಿ ಮುಂದುವರೆದು ಬಾಸ್ಮತಿ ಅಕ್ಕಿಯ ಜಿಐ ಟ್ಯಾಗ್ ಪಡೆಯುವತ್ತ ಭಾರತ ಹೆಜ್ಜೆಯಿಟ್ಟಿದೆ.

India Pak: ಭಾರತ ಪಾಕಿಸ್ತಾನದ ನಡುವೆ ಶುರುವಾಗಿದೆ ಅಕ್ಕಿಯ ಕಲಹ; ಇಲ್ಲಿದೆ ವಿವರ
ಬಾಸ್ಮತಿ ಅಕ್ಕಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 13, 2021 | 8:52 PM

ಇಡೀ ಜಗತ್ತಿನಲ್ಲಿ ಅತ್ಯಂತ ಉತ್ಕೃಷ್ಟ ಅಕ್ಕಿ ಎಂದು ಹೆಸರು ಹೊಂದಿರುವ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುವ ದೇಶಗಳು ಎರಡೇ ಎರಡು. ಅವೇ ಭಾರತ ಮತ್ತು ಪಾಕಿಸ್ತಾನ. ದೇಶ ವಿಭಜನೆಯ ನಂತರ ಪರಸ್ಪರ ಆಳವಾದ ಅಭಿಪ್ರಾಯ ಬೇಧ ಮತ್ತು ಪೈಪೋಟಿ ಹೊಂದಿರುವ ಭಾರತ ಪಾಕಿಸ್ತಾನಗಳ ನಡುವೆ ಈಗ ಇನ್ನೊಂದು ಹಣಾಹಣಿ ಆರಂಭವಾಗಿದೆ. ಈ ಪೈಪೋಟಿಗೆ ಕಾರಣ ಬಾಸ್ಮತಿ ಅಕ್ಕಿ. ಯೂರೋಪಿಯನ್ ಯೂನಿಯನ್​ ರಾಷ್ಟ್ರಗಳಿಗೆ ಬಾಸ್ಮತಿ ಅಕ್ಕಿ ರಫ್ತು ಮಾಡುವ ಭಾರತ ಅಲ್ಲಿ ತನ್ನ ಬಾಸ್ಮತಿ ಅಕ್ಕಿಗೆ ಜಿಐ ಮಾನ್ಯತೆ ಪಡೆಯಲು ಅರ್ಜಿ ಹಾಕಿದೆ. ಭಾರತದ ಈ ನಡೆ ಪಾಕಿಸ್ತಾನಕ್ಕೆ ಆತಂಕ ಮೂಡಿಸಿದೆ.

ತಾನು ಬಾಸ್ಮತಿ ಅಕ್ಕಿಯನ್ನು ತನ್ನ ಭೌಗೋಳಿಕ ಪ್ರದೇಶದಲ್ಲಿ ಬೆಳೆಯುತ್ತಿದ್ದೇನೆ. ಹೀಗಾಗಿ ಬಾಸ್ಮತಿ ಅಕ್ಕಿಯ ಭೌಗೋಳಿಕ ಮಾನ್ಯತೆ ಪಡೆಯಬೇಕೆಂಬುದೇ ಜಿಐ ಟ್ಯಾಗ್​ನ ಹಿಂದಿನ ಉದ್ದೇಶ. ಕೃಷಿ ಉತ್ಪನ್ನ ಮತ್ತು ಹಣ್ಣು ಹಂಪಲುಗಳಿವೆ ಜಿಐ ಮಾನ್ಯತೆ ನೀಡಲಾಗುತ್ತದೆ. ಒಂದಾವೇಳೆ ಜಿಐ ಟ್ಯಾಗ್ ಸಿಕ್ಕಿದ್ದೇ ಆದಲ್ಲಿ ಯೂರೋಪಿಯನ್ ಯೂನಿಯನ್​ಗಳಲ್ಲಿ ಬಾಸ್ಮತಿ ಅಕ್ಕಿ ರಫ್ತಿನ ಸಂಪೂರ್ಣ ಮಾನ್ಯತೆ ಭಾರತದ್ದಾಗಲಿದೆ. ಹೀಗಾಗಿ ಪಾಕಿಸ್ತಾನಕ್ಕೆ ಆತಂಕ.

ಎಲ್ಲೆಲ್ಲಿ ಬೆಳೆಯುತ್ತದೆ ಬಾಸ್ಮತಿ? ಭಾರತ ಉಪಖಂಡದಲ್ಲಿ ಬಹುಮುಂಚಿನಿಂದಲೂ ಬಾಸ್ಮತಿ ಅಕ್ಕಿಯ ಕೃಷಿ ಮಾಡಲಾಗುತ್ತದೆ. ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಪಂಜಾಬ್, ಹರ್ಯಾಣ, ಉತ್ತರಾಖಂಡ್, ಉತ್ತರ ಪ್ರದೇಶ, ದೆಹಲಿ ಮತ್ತು ಜಮ್ಮು ಕಾಶ್ಮೀರದಲ್ಲಿ ಸಮೃದ್ಧ ಬಾಸ್ಮತಿ ಬೆಳೆ ತೆಗೆಯಲಾಗುತ್ತದೆ. ಅದೇ ರೀತಿ ಪಾಕಿಸ್ತಾನ ರಾವಿ ಮತ್ತು ಚೀನಾಬ್ ನದಿಗಳ ಇಕ್ಕೆಲಗಳಲ್ಲೂ ಬಾಸ್ಮತಿ ಅಕ್ಕಿಯನ್ನು ಬೆಳೆಯಲಾಗುತ್ತದೆ.

ಜಿಐ ಟ್ಯಾಗ್ ಪಡೆಯುವುದರಿಂದ ಏನು ಲಾಭ? ಜಿಐ ಟ್ಯಾಗ್ ಯಾವುದೇ ಒಂದು ಉತ್ಪನ್ನಕ್ಕೆ ಪ್ರಾದೇಶಿಕ ಅಸ್ಮಿತೆಯ ಮಾನ್ಯತೆ ಒದಗಿಸುತ್ತದೆ. ಅಂದರೆ, ಭಾರತದ ಬಾಸ್ಮತಿ ಅಕ್ಕಿ ಜಿಐ ಟ್ಯಾಗ್ ಪಡೆದ ನಂತರೂ ಪಾಕಿಸ್ತಾನದಲ್ಲಿ ಬಾಸ್ಮತಿ ಅಕ್ಕಿ ಬೆಳೆಯಲು ತೊಂದರೆಯಿಲ್ಲ. ಆದರೆ ಭಾರತದ ಬಾಸ್ಮತಿ ಅಕ್ಕಿಗೆ ಇರುವ ಮಾನ್ಯತೆ ಪಾಕಿಸ್ತಾನದಲ್ಲಿ ಬೆಳೆದ ಬಾಸ್ಮತಿ ಅಕ್ಕಿಗಿಂತ ಒಂದು ಹೆಜ್ಜೆ ಮೇಲಿರುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆ ಜಿಐ ಟ್ಯಾಗ್ ಪಡೆದ ಉತ್ಪನ್ನಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ. ಇತರ ದೇಶಗಳು, ಅಂತರಾಷ್ಟ್ರೀಯ ಕಂಪನಿಗಳು ವಾಣಿಜ್ಯದ ದೃಷ್ಟಿಯಿಂದ ಪ್ರಾದೇಶಿಕ ಅಸ್ಮಿತೆ ಹೊಂದಿರುವ ಉತ್ಪನ್ನಗಳನ್ನು ಬಳಸುವುದನ್ನು ಜಿಐ ಮಾನ್ಯತೆ ತಡೆಯುತ್ತದೆ.

ಭಾರತದೊಳಗೂ ಇದೆ  ಪೈಪೋಟಿ ಭಾರತದಲ್ಲೂ ಬಾಸ್ಮತಿ ಅಕ್ಕಿಗೆ ಜಿಐ ಟ್ಯಾಗ್ ಪಡೆಯಲು ಪೈಪೋಟಿಯಿದೆ. ದೇಶದೊಳಗೆ ಬಾಸ್ಮತಿ ಅಕ್ಕಿಯ ಜಿಐ ಟ್ಯಾಗ್ ಪಡೆಯಲು ಮಧ್ಯ ಪ್ರದೇಶ ಸರ್ಕಾರ ಈಗಾಗಲೇ ಅರ್ಜಿ ಗುಜರಾಯಿಸಿದೆ. ಆದರೆ ಅಖಿಲ ಭಾರತ ಅಕ್ಕಿ ರಫ್ತಿನ ಸಂಘ ಮಧ್ಯ ಪ್ರದೇಶ ಸರ್ಕಾರದ ನಡೆಯನ್ನು ವಿರೋಧಿಸಿದೆ. 1990 ದಶಕದಲ್ಲಿ ಅಮೆರಿಕದ ರೈಸ್​ಟೆಕ್ ಎಂಬ ಕಂಪೆನಿಯ ಜತೆ ನಡೆದ ಸಮರದಿಂದಾಗಿ ಭಾರತ ತನ್ನಲ್ಲಿ ಬೆಳೆಯುವ ಉತ್ಪನ್ನಗಳಿಗೆ ಪ್ರಾದೇಶಿಕ ಮಾನ್ಯತೆ ಪಡೆಯುವತ್ತ ಮುಖಮಾಡಿದೆ. ಈಗಾಗಲೇ ಬಾಸ್ಮತಿ ಅಕ್ಕಿಯ ಪ್ರಬೇಧಗಳಾದ ಕಾಸ್ಮತಿ, ಟೆಕ್ಸ್​ಮತಿ, ಜಾಸ್ಮತಿಗಳಿಗೆ ಪೇಟೆಂಟ್ ಪಡೆದಿದೆ ಭಾರತ. ಇದೇ ದಾರಿಯಲ್ಲಿ ಮುಂದುವರೆದು ಬಾಸ್ಮತಿ ಅಕ್ಕಿಯ ಜಿಐ ಟ್ಯಾಗ್ ಪಡೆಯುವತ್ತ ಭಾರತ ಹೆಜ್ಜೆಯಿಟ್ಟಿದೆ.

ಇದನ್ನೂ ಓದಿ: ಕೊವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಲ್ಯಾನ್ಸೆಟ್ ವರದಿ

ಇದನ್ನೂ ಓದಿ: Post Covid: ದೀರ್ಘಕಾಲಿಕ ಕೊವಿಡ್​ ಲಕ್ಷಣಗಳಿಂದ ಹೊರಬರಲು ಸರಳ ವಿಧಾನಗಳು

(India Pakistan have battle about Basmati rice to get GI Tag in EU)

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್