Post Covid: ದೀರ್ಘಕಾಲಿಕ ಕೊವಿಡ್ ಲಕ್ಷಣಗಳಿಂದ ಹೊರಬರಲು ಸರಳ ವಿಧಾನಗಳು
ಯಾವುದೇ ರೋಗದ ಲಕ್ಷಣದಿಂದ ಹೊರಬರಲು ಕೊಂಚ ಸಮಯ ಬೇಕೇಬೇಕು. ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ರೋಗದ ವೈರಾಣುವಿನ ವಿರುದ್ಧ ಪ್ರತಿಕಾಯಗಳು ಹೋರಾಡುತ್ತವೆ. ಈ ಮೂಲಕ ನಾವು ಎಷ್ಟು ಬೇಗ ಚೇತರಿಸಿಕೊಳ್ಳುತ್ತೇವೆ ಎಂಬುದು ನಿರ್ಧಾರವಾಗುತ್ತದೆ.
ಕೊವಿಡ್ ಸಕಾರಾತ್ಮಕ ಪರೀಕ್ಷೆಗೆ ಒಳಪಟ್ಟು ಗುಣಮುಖರಾಗಿ ಹೊರಬಂದರೂ ಸಹ ಕೊವಿಡ್ ಲಕ್ಷಣಗಳು ನಿಮ್ಮನ್ನು ಬಾಧಿಸುತ್ತಿರಬಹುದು. ದೇಹಕ್ಕೆ ಸುಸ್ತು (ಆಯಾಸ), ಒಳ್ಳೆಯ ನಿದ್ರೆಯ ಸಮಸ್ಯೆ, ನೆನಪಿನ ಶಕ್ತಿ ಕುಂಠಿತಗೊಳ್ಳುವಂತಹ ಸಮಸ್ಯೆಗಳು ಕಾಡಬಹುದು. ಹೀಗಿರುವಾಗ ಚಿಂತಿಸುವ ಅಗತ್ಯವಿಲ್ಲ. ಬಹುಬೇಗ ದೀರ್ಘ ಕಾಲಿಕ ಲಕ್ಷಣಗಳಿಂದ ಹೊರ ಬರುವ ಸರಳ ವಿಧಾನಗಳು ಇಲ್ಲಿವೆ. ಯಾವುದೇ ರೋಗದ ಲಕ್ಷಣದಿಂದ ಹೊರಬರಲು ಕೊಂಚ ಸಮಯ ಬೇಕೇಬೇಕು. ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ರೋಗದ ವೈರಾಣುವಿನ ವಿರುದ್ಧ ಪ್ರತಿಕಾಯಗಳು ಹೋರಾಡುತ್ತವೆ. ಈ ಮೂಲಕ ನಾವು ಎಷ್ಟು ಬೇಗ ಚೇತರಿಸಿಕೊಳ್ಳುತ್ತೇವೆ ಎಂಬುದು ನಿರ್ಧಾರವಾಗುತ್ತದೆ.
ಸ್ವಲ್ಪ ದಿನ ಪ್ರತ್ಯೇಕವಾಗಿರಿ ಕೊವಿಡ್ ಲಕ್ಷಣಗಳಿಂದ ಈಗ ತಾನೇ ಚೇತರಿಕೆ ಕಂಡಿದ್ದರಿಂದ ನಿಮ್ಮ ಮನಸ್ಸಿಗೆ ಮತ್ತು ದೇಹಕ್ಕೆ ವಿಶ್ರಾಂತಿ ಬೇಕು. ಜತೆಗೆ ಕೆಲವು ದಿನಗಳ ಕಾಲ ಸ್ವಯಂ ಪ್ರೇರಿತರಾಗಿ ಎಲ್ಲರಿಂದ ದೂರವಿರುವುದು ಒಳಿತು. ಕೊವಿಡ್ ಸಕಾರಾತ್ಮಕ ಪರೀಕ್ಷೆಯ ಬಳಿಕ ಗುಣಮುಖರಾಗಿದ್ದೇವೆ ಎಂಬ ಹುಮ್ಮಸ್ಸಿನಿಂದ ನಿಮ್ಮ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಬೇಡ.
ವಿಶ್ರಾಂತಿ ಕೊವಿಡ್ ಲಕ್ಷಣಗಳ ವಿರುದ್ಧ ಹೋರಾಡಿದ ನಿಮ್ಮ ದೇಹ ಹೆಚ್ಚು ಆಯಾಸಗೊಂಡಿರುತ್ತದೆ. ಹಾಗೂ ಮನಸ್ಸೂ ಕೂಡಾ ಅನಗತ್ಯ ಚಿಂತೆಗಳಲ್ಲಿ ಮುಳುಗಿರುತ್ತದೆ. ಹೀಗಿರುವಾಗ ನಿಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಅಗತ್ಯವಿದೆ. ಆದಷ್ಟು ಆರಾಮವಾಗಿ ಇರಲು ಪ್ರಯತ್ನಿಸಿ. ಹೆಚ್ಚು ಟಿವಿ ನೋಡುವುದು, ಸಾಮಾಜಿಕ ಜಾಲತಾಣ, ಮೊಬೈಲ್ಗಳಿಂದ ದೂರವಿರಿ. ಹೆಚ್ಚು ಯೋಗ, ವ್ಯಾಯಾಮ, ಧ್ಯಾನದ ಜತೆಗೆ ಉಸಿರಾಟಕ್ಕೆ ಸಂಬಂಧಿಸಿದಂತೆ ಪ್ರಾಣಾಯಾಮ ಮಾಡುವುದರಲ್ಲಿ ಹೆಚ್ಚು ಸಮಯ ಕಳೆಯಿರಿ. ಶುದ್ಧ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದು ಹಾಗೂ ಹಿತವೆನಿಸುವ ಸಂಗೀತವನ್ನು ಕೇಳುವುದರಲ್ಲಿ ನಿಮ್ಮ ಸಮಯವನ್ನು ಮೀಸಲಿಡಿ. ಮೊದಲೇ ನಿಮ್ಮ ದೇಹ ಆಯಾಸವಾಗಿರುತ್ತದೆ. ಈ ನಡುವೆ ದೇಹಕ್ಕೆ ಇನ್ನಷ್ಟು ಆಯಾಸ ನೀಡುವ ವರ್ಕ್ಔಟ್ ಮಾಡುವುದು ಬೇಡ.
ನಿದ್ರೆ ಒಳ್ಳೆಯ ನಿದ್ರೆ ನಿಮ್ಮ ಮಾನಸಿಕ ಸ್ಥಿತಿಯನ್ನು ಮತ್ತು ದೇಹವನ್ನು ಸದೃಢವಾಗಿರುವಂತೆ ನೋಡಿಕೊಳ್ಳುತ್ತದೆ. ಒಳ್ಳೆಯ ನಿದ್ರೆ ಅಭ್ಯಾಸ ರೂಢಿಯಲ್ಲಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ. ಮಲಗುವ ಮುನ್ನ ಚಹಾ ಕುಡಿದು ಮಲಗುವ ಅಭ್ಯಾಸವಿದ್ದರೆ ಆದಷ್ಟು ತಪ್ಪಿಸಿ. ರಾತ್ರಿಯ ಊಟವನ್ನು ಸರಿಯಾದ ಸಮಯಕ್ಕೆ ಸೇವಿಸಿ ಮತ್ತು ಮೊಬೈಲ್ ನೋಡುತ್ತಾ ಮಲಗುವ ಅಭ್ಯಾಸದಿಂದ ದೂರವಿರಿ.
ಪೋಷಣೆ ಆರೋಗ್ಯಕರ ಆಹಾರ ನಿಮ್ಮದಾಗಿರಲಿ. ಹೆಚ್ಚು ಪೋಷಕಾಂಶಯುಕ್ತ ಆಹಾರ, ಪ್ರೊಟೀನ್ ಭರಿತ ಆಹಾರ ಹಾಗೂ ಫೈಬರ್ ಯುಕ್ತ ಪದಾರ್ಥವನ್ನು ಸೇವಿಸಿ. ನಿಮ್ಮ ದೇಹದಲ್ಲಿ ಪೌಷ್ಟಿಕಾಂಶ ಇಲ್ಲದಿರುವುದು ನಿಮ್ಮ ದೇಹದ ಆಯಾಸಕ್ಕೆ ಮತ್ತು ಸುಸ್ತಿಗೆ ಕಾರಣವಾಗುತ್ತದೆ.
ದಿನನಿತ್ಯದ ಚಟುವಟಿಕೆ ನಿಧಾನವಾಗಿರಲಿ ದೇಹಕ್ಕೆ ಅತಿ ಹೆಚ್ಚು ಆಯಾಸ ನೀಡುವ ಮನೆಯ ಕೆಲಸದಲ್ಲಿ ತೊಡಗಬೇಡಿ. ರೋಗ ಲಕ್ಷಣದಿಂದ ಹೊರಬರುವವರೆಗೆ ಈ ಮಾತು ನೆನಪಿನಲ್ಲಿರಲಿ. ಗಡಿಬಿಡಿಯಿಂದ ಓಡಾಡುವುದು, ಹೆಚ್ಚು ಭಾರವಾದ ಸಾಮಗ್ರಿಗಳನ್ನು ಎತ್ತುವುದು, ದೈಹಿಕ ಮತ್ತು ಮಾನಸಿಕ ಸ್ಥಿತಿಗೆ ಒತ್ತಡ ನೀಡುವ ಕೆಲಸಗಳಿಂದ ದೂರವಿರಿ. ಹೆಚ್ಚು ವಿಶ್ರಾಂತಿಯ ಕಡೆಗೆ ನಿಮ್ಮ ಗಮನವಿರಲಿ ಮತ್ತು ಅನಗತ್ಯ ಚಿಂತೆಯಿಂದ ದೂರವಿರಿ.
ಸಂತೋಷವಾಗಿರಿ ನಿಮ್ಮ ಆರೋಗ್ಯದ ದೃಷ್ಟಿಯಿಂದ ಮಾನಸಿಕ ಒತ್ತಡಕ್ಕೆ ಸಿಲುಕದಿರಿ. ಎಲ್ಲವನ್ನೂ ಸಮಸ್ಯೆ ಎಂದು ಭಾವಿಸುವುದು ಹಾಗೂ ಅನಗತ್ಯ ಚಿಂತೆಯಿಂದ ನಿಮ್ಮಲ್ಲಿ ಮಾನಸಿಕ ಸ್ಥಿತಿ ಹದಗೆಡುತ್ತದೆ. ಇದರಿಂದ ರಕ್ತದೊತ್ತಡದಂತಹ ಸಮಸ್ಯೆ ಕಾಡತೊಡಗುತ್ತದೆ. ಹಾಗಾಗಿ ಕೊವಿಡ್ ಲಕ್ಷಣಗಳಿಂದ ಹೊರಬರಲು ಇನ್ನೂ ತಡವಾಗಬಹುದು.
ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚು ಪೌಷ್ಟಿಕ ಆಹಾರದ ಕುರಿತಾಗಿ ಗಮನವಿರಲಿ. ಹಾಗೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸದೃಢವಾಗಿರಲು ಪ್ರಯತ್ನಿಸಿ. ಬೇಡದ ಚಿಂತೆಗಳನ್ನು ಮಾಡುತ್ತಾ ಮನಸ್ಸಿನ ನೆಮ್ಮದಿ ಕೆಡಿಸುಕೊಳ್ಳುವರಿಂದ ಆರೋಗ್ಯ ಇನ್ನೂ ಹದಗೆಡುತ್ತದೆ. ಹಾಗಾಗಿ ನಿಮಗಿಷ್ಟವಾದ ಪುಸ್ತಕಗಳನ್ನು ಓದುವುದು, ಯೋಗಾಭ್ಯಾಸ ಮಾಡುವುದು ಮತ್ತು ಮನಸ್ಸಿಗೆ ಮುದ ನೀಡುವ ಸಂಗೀತವನ್ನು ಕೇಳುವುದರಲ್ಲಿ ನಿಮ್ಮ ಸಮಯವನ್ನು ಕಳೆಯಿರಿ.
ಇದನ್ನೂ ಓದಿ:
post covid syndrome: ದೀರ್ಘಕಾಲಿಕ ಕೊವಿಡ್ ಆತಂಕ ತರುತ್ತಿದೆಯೇ? ಚಿಂತೆಯಿಂದ ಹೊರಬರಲು ತಜ್ಞರ ಸಲಹೆಗಳೇನು?
Long Covid: ಕೊರೊನಾ ನೆಗೆಟಿವ್ ವರದಿಯಾದರೂ ನಿರ್ಲಕ್ಷಿಸದಿರಿ; ದೀರ್ಘಕಾಲದವರೆಗೆ ಲಕ್ಷಣಗಳಿರಬಹುದು