post covid syndrome: ದೀರ್ಘಕಾಲಿಕ​ ಕೊವಿಡ್​ ಆತಂಕ ತರುತ್ತಿದೆಯೇ? ಚಿಂತೆಯಿಂದ ಹೊರಬರಲು ತಜ್ಞರ ಸಲಹೆಗಳೇನು?

ದೀರ್ಘಕಾಲಿಕ ಕೊವಿಡ್​ನಿಂದ ಹೊರಬರಲು ಹಾಗೂ ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತಾಗಿ ಕೆಲವೊಂದಿಷ್ಟು ಸಲಹೆಗಳನ್ನು ತಿಳಿಯಿರಿ.

post covid syndrome: ದೀರ್ಘಕಾಲಿಕ​ ಕೊವಿಡ್​ ಆತಂಕ ತರುತ್ತಿದೆಯೇ? ಚಿಂತೆಯಿಂದ ಹೊರಬರಲು ತಜ್ಞರ ಸಲಹೆಗಳೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jun 09, 2021 | 1:16 PM

ಕೊವಿಡ್​ ಸಾಂಕ್ರಾಮಿಕ ಕಾಯಿಲೆಯಿಂದ ಹೊರಬಂದ ಮೇಲೂ ಕೊವಿಡ್​ ಲಕ್ಷಣಗಳು ನಿಮ್ಮನ್ನು ಕಾಡುತ್ತಿರಬಹುದು. ದೀರ್ಘಕಾಲಿಕ ಕೊವಿಡ್​ ಲಕ್ಷಣಗಳು ನಿಮ್ಮನ್ನು ಹೆಚ್ಚು ಚಿಂತೆಗೀಡು ಮಾಡುತ್ತಿರಬಹುದು. ಇದರಿಂದ ಮಾನವರಲ್ಲಿ ರಕ್ತದೊತ್ತಡದಂತಹ ಸಮಸ್ಯೆಗಳು ಕಾಡತೊಡಗಬಹುದು. ಹೀಗಿರುವಾಗ ಮನಸ್ಸಿನ ಸ್ಥಿತಿಯ ಬದಲಾವಣೆ ಅವಶ್ಯಕವಾಗಿರುತ್ತದೆ. ಈ ಕುರಿತಂತೆ ವೈದ್ಯರು ಕೆಲವೊಂದಿಷ್ಟು ಟಿಪ್ಸ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪೌಷ್ಠಿಕ ಹಾಗೂ ಫಿಟ್ನೆಸ್​ ತಜ್ಞ ಮುನ್​ಮುನ್​ ಗನೆರಿವಾಲ್​ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದಾರೆ. ದೀರ್ಘಕಾಲಿಕ ಕೊವಿಡ್​ನಿಂದ ಹೊರಬರಲು ಹಾಗೂ ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತಾಗಿ ಕೆಲವೊಂದಿಷ್ಟು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ದೀರ್ಘಕಾಲಿಕ ಕೊವಿಡ್​ನಿಂದ ಯಾರ್ಯಾರು ಕಡಿಮೆ ನಿದ್ರೆ, ಮನಸ್ಥಿತಿಯಲ್ಲಿ ಒತ್ತಡ, ಡಿಪ್ರೆಶನ್​ಗೆ ಒಳಗಾಗುತ್ತಿದ್ದೀರಿ. ನೀವು ಚಿಂತೆಗೀಡಾಗುವ ಅವಶ್ಯಕತೆ ಇಲ್ಲ. ಇದು ಸಾಮಾನ್ಯವಾದುದು. ಮುಖ್ಯವಾಗಿ ನೀವು ನೆನಪಿಟ್ಟುಕೊಳ್ಳುವ ಅಂಶವೆಂದರೆ, ಯಾವುದೇ ರೋಗ ಲಕ್ಷಣದಿಂದ ಹೊರಬರಲು ಅಥವಾ ಸುಧಾರಿಸಿಕೊಳ್ಳಲು ಸಮಯ ಹಿಡಿಯುತ್ತದೆ ಎಂದು ಧೈರ್ಯ ಹೇಳಿದ್ದಾರೆ.

 ದೀರ್ಘಕಾಲಿಕ ಕೊವಿಡ್​ನಿಂದ ಚೇತರಿಸಿಕೊಳ್ಳಲು ಒಂದುಷ್ಟು ಸಲಹೆಗಳು * ಸಮಯಕ್ಕೆ ಸರಿಯಾಗಿ ಆಹಾರ * ನಿಮ್ಮ ಆಹಾರ ಕ್ರಮ ಸಮತೋಲನದಲ್ಲಿರಬೇಕು. ಜತೆಗೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು * ಪ್ರತಿನಿತ್ಯವೂ ವ್ಯಾಯಾಮ ಮಾಡಿ * ಶುದ್ಧ ಗಾಳಿಯನ್ನು ಪಡೆಯಿರಿ. ಹೆಚ್ಚು ವಾತಾವಣದಲ್ಲಿ ಪ್ರಕೃತಿಯ ನಡುವೆ ಸಮಯ ಕಳೆಯುವ ಮೂಲಕ ಶುದ್ಧ ಗಾಳಿಯನ್ನು ಸೇವಿಸಬಹುದು * ದೇಹಕ್ಕೆ ವಿಶ್ರಾಂತಿ ಮತ್ತು ನಿದ್ರೆಗೆ ಸಮಯ ಕೊಡಿ * ಪ್ರತಿನಿತ್ಯವೂ ಧ್ಯಾನ ಅಭ್ಯಾಸ ರೂಢಿಯಲ್ಲಿರಲಿ * ಮನಸ್ಸಿಗೆ ಕಿರಿ-ಕಿರಿ ಉಂಟುಮಾಡುವ ಗೊಂದಲದ ಸುದ್ದಿಗಳಿಂದ ದೂರವಿರಿ * ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ

ಇದನ್ನೂ ಓದಿ:

Health Tips: ಎಳನೀರು ಕುಡಿದು ಹಾಗೇ ಬರುವ ಅಭ್ಯಾಸ ಬಿಟ್ಟು ಬಿಡಿ; ಒಳಗಿನ ಗಂಜಿ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

Health Tips: ಕಿಡ್ನಿ ಸ್ಟೋನ್​ ಸಮಸ್ಯೆಯ ಲಕ್ಷಣಗಳೇನು? ಪರಿಹಾರಗಳಿವೆಯಾ?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್