Viral Video: ಕಿಕ್ಕಿರಿದು ನಿಂತ ಮೆಟ್ರೋ ರೈಲಿನಲ್ಲಿ ಸೀಟು ಪಡೆಯಲು ಯುವಕನ ಸಕತ್​ ಪ್ಲಾನ್​! ವಿಡಿಯೋ ವೈರಲ್​

ಯುಟ್ಯೂಬ್​ ಇಂಡಿಯನ್​ ಎಂಬ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಾರು ಕಾಮೆಂಟ್​ಗಳು ಕೂಡಾ ಲಭ್ಯವಾಗಿದೆ.

Viral Video: ಕಿಕ್ಕಿರಿದು ನಿಂತ ಮೆಟ್ರೋ ರೈಲಿನಲ್ಲಿ ಸೀಟು ಪಡೆಯಲು ಯುವಕನ ಸಕತ್​ ಪ್ಲಾನ್​! ವಿಡಿಯೋ ವೈರಲ್​
ಜನಜಂಗುಳಿಯಲ್ಲಿ ಸೀಟು ಪಡೆಯಲು ಯುವಕನ ಪ್ಲಾನ್​!
Follow us
TV9 Web
| Updated By: shruti hegde

Updated on:Jun 13, 2021 | 5:11 PM

ಬಸ್​, ರೈಲುಗಳಲ್ಲಿ ಜನಸಾಗರ. ಸೀಟು ಇಲ್ಲದೇ ಅದೆಷ್ಟೋ ದಿನ ನಿಂತೆ ಸಾಗಿದ್ದಿದೆ. ಕುಳಿತುಕೊಳ್ಳಲು ಒಂದು ಸೀಟು ಸಹ ಇರುವುದಿಲ್ಲ. ಅಷ್ಟೊಂದು ಜನಜಂಗುಳಿ ಎಂದು ಕೆಲವು ಬಾರಿ ಹೇಳಿರುವುದೂ ಇದೆ. ಹಾಗಿರುವಾಗ ಮುಂದಿನ ನಿಲ್ದಾಣದಲ್ಲಿ ಯಾರು ಇಳಿಯುತ್ತಾರೆ ಎಂದು ಕಾಯುತ್ತಾ ನಿಂತಿರುತ್ತೇವೆ. ಹಾಗೆಯೇ ಈ ಯುವಕನ ಪರಿಸ್ಥಿತಿ ಕೂಡಾ! ಕುಳಿತುಕೊಳ್ಳಲು ಮಾತ್ರ ಆಸನವೇ ಸಿಕ್ಕಿರುವುದಿಲ್ಲ. ಹಾಗಾಗಿ ಸೀಟು ಪಡೆದುಕೊಳ್ಳಲು ಯುವಕ ಸಕ್ಕತ್​​ ಪ್ಲಾನ್​ ಮಾಡಿ ಯಶಸ್ವಿಯಾಗಿದ್ದಾನೆ. ಈತನ ಪ್ಲಾನ್​ ನೋಡಿದ ನೆಟ್ಟಿಗರು ಬಾರೀ ಚಾಣಾಕಿ ಈತ ಎಂದು ತಮಾಷೆಯಾಗಿ ಹೇಳಿದ್ದಾರೆ.

ಸೋಷಿಯಲ್​ ಮಿಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಯುವಕನ ಪರ ಮತ್ತು ವಿರೋಧ ಚರ್ಚೆಗಳು ಕೇಳಿಬಂದಿವೆ. ಕೆಲವರು ಈತನ ಪ್ಲಾನ್​ ಸಕತ್ತಾಗಿದೆ ಎಂದು ಹೇಳಿದರೆ, ಇನ್ನು ಕೆಲವರು ಈತ ಮೋಸ ಮಾಡಿದಂತೆ ಆಗಿಲ್ವೇ? ಎಂದು ಪ್ರಶ್ನೆ ಮಾಡಿದ್ದಾರೆ. ಅದೇನೇ ಆಗಿದ್ದರೂ ಸಹ ಕಾಮೆಂಟ್ಸ್​ ವಿಭಾಗದಲ್ಲಿ ಹೆಚ್ಚು ಉಲ್ಲಾಸದ ಪ್ರತಿಕ್ರಿಯೆಗಳೇ ಬಂದಿವೆ.

ಈ ಯುವಕ ಮಾಡಿ ಪ್ಲಾನ್​ ಆದ್ರೂ ಏನು? ಎಂಬ ಕುತೂಹಲ ಕೆಣಕಿರಬೇಕಲ್ವೆ? ವಿಡಿಯೋದಲ್ಲಿ ನೀವು ನೋಡುವಂತೆ ಸುತ್ತಲೂ ಜನರು. ಕುಳಿತುಕೊಳ್ಳಲು ಒಂದು ಸೀಟ್​ ಕೂಡಾ ಇಲ್ಲ. ಪಕ್ಕದಲ್ಲಿ ಮಹಿಳೆಯರ ದಂಡೇ ನಿಂತಿದೆ. ತುಂಬಾ ಹೊತ್ತಿನಿಂದ ನಿಂತೇ ಇದ್ದ ಆ ಯುವಕ ಇದ್ದಕ್ಕಿದ್ದಂತೆಯೇ ನಡುಗಲು ಪ್ರಾರಂಭಿಸುತ್ತಾನೆ. ಆತನ ತಲೆಯ ಮೇಲಿರುವ ಟೋಪಿ ಕೆಳಗೆ ಬೀಳುತ್ತದೆ. ಇದನ್ನು ನೋಡಿದ ಸುತ್ತಮುತ್ತ ಕೂತ ಜನ ಕಂಗಾಲಾಗುತ್ತಾರೆ. ಎದುರಿಗೆ ಕೂತಿದ್ದ ಮಹಿಳೆಯೋರ್ವರು ಆತನನ್ನು ನೋಡಿ ಭಯಗೊಂಡು ದೂರ ಹೋಗುತ್ತಾರೆ.

ಯುಟ್ಯೂಬ್​ ಇಂಡಿಯನ್​ ಎಂಬ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೂರಾರು ಕಾಮೆಂಟ್​ಗಳು ಕೂಡಾ ಲಭ್ಯವಾಗಿದೆ. ಕೆಲವರು ಯುವಕನ ಪ್ಲಾನ್​ ನೋಡಿದ್ರೆ ನಗುಬರುತ್ತಿದೆ ಎಂದು ಪ್ರತಿಕ್ರಿಯೆ ಹಂಚಿಕೊಂಡಿದ್ದರೆ, ಇನ್ನು ಕೆಲವರು ಜನರಿಗೆ ಮೋಸಮಾಡಿದ್ದಾನೆ ಎಂದು ಅಭಿಪ್ರಾಯ ಕೇಳಿಬಂದಿದೆ.

ಇದನ್ನೂ ಓದಿ: 

Viral Video: ಮನೆ ಮುಂದೆ ನಿಲ್ಲಿಸಿದ ಕಾರು ನೋಡನೋಡುತ್ತಿದ್ದಂತೆಯೇ ಮಾಯ!

Viral Video: ನೀರು ತುಂಬಿ ಹರಿಯುತ್ತಿರುವ ರಸ್ತೆ ಮೇಲೆ ಗುತ್ತಿಗೆದಾರನ ಕೂರಿಸಿ, ತಲೆ ಮೇಲೆ ಕಸ ಸುರಿಸಿದ ಶಾಸಕ !

Published On - 5:09 pm, Sun, 13 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ