China Gas Explosion ಚೀನಾದಲ್ಲಿ ಅನಿಲ ಸ್ಫೋಟ; 12 ಮಂದಿ ಸಾವು, 37 ಮಂದಿಗೆ ಗಂಭೀರ ಗಾಯ

China Gas Explosion ಚೀನಾದಲ್ಲಿ ಅನಿಲ ಸ್ಫೋಟ; 12 ಮಂದಿ ಸಾವು, 37 ಮಂದಿಗೆ ಗಂಭೀರ ಗಾಯ
ಪ್ರಾತಿನಿಧಿಕ ಚಿತ್ರ

China Gas Explosion: ಹುಬೇ ಪ್ರಾಂತ್ಯದಲ್ಲಿ ಈ ಭೀಕರ ಸ್ಫೋಟ ನಡೆದಿದ್ದು  ಸುಮಾರು 140 ಮಂದಿಯನ್ನು  ರಕ್ಷಿಸಲಾಗಿದೆ. 37 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಚೀನಾದ ಮಾಧ್ಯಮ ಸಿಸಿಟಿವಿ ವರದಿ ಮಾಡಿದೆ.

TV9kannada Web Team

| Edited By: Rashmi Kallakatta

Jun 13, 2021 | 2:09 PM

 ಹಾಂಗ್ ಕಾಂಗ್: ಚೀನಾದ ಝಂಗ್ ವಾನ್ ಜಿಲ್ಲೆಯ ಶಿಯಾನ್  ನಗರದಲ್ಲಿ ಭಾನುವಾರ ಬೆಳಗ್ಗೆ 6.30ಕ್ಕೆ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಹುಬೇ ಪ್ರಾಂತ್ಯದಲ್ಲಿ ಈ ಭೀಕರ ಸ್ಫೋಟ ನಡೆದಿದ್ದು  ಸುಮಾರು 140 ಮಂದಿಯನ್ನು  ರಕ್ಷಿಸಲಾಗಿದೆ. 37 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಚೀನಾದ ಮಾಧ್ಯಮ ಸಿಸಿಟಿವಿ ವರದಿ ಮಾಡಿದೆ.

“ಅನೇಕ” ಜನರು ಒಳಗೆ ಸಿಲುಕಿದ್ದಾರೆ ಎಂದು ನಗರದ ಮುನ್ಸಿಪಲ್ ಕಚೇರಿ ಹೇಳಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಚಿತ್ರಗಳು, ದೃಶ್ಯಗಳನ್ನು ನೋಡಿದರೆ ಕಿತ್ತಳೆ ಬಣ್ಣದ ಜಂಪ್‌ಸೂಟ್‌ಗಳಲ್ಲಿ ರಕ್ಷಣಾ ಕಾರ್ಯಕರ್ತರು ಮನೆಗಳ ಭಗ್ನಾವಶೇಷದಲ್ಲಿ ಕೆಲಸ ಮಾಡುತ್ತಿರುವುದು ಕಾಣುತ್ತದೆ.

ಈ ಘಟನೆಗೆ ಕಾರಣ  ಏನು ಎಂಬುದು ತನಿಖೆ ನಡೆಯುತ್ತಿದೆ ಎಂದು ಸರ್ಕಾರ ತಿಳಿಸಿದೆ. ಚೀನಾದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ವೀಬೊದಲ್ಲಿ ರಕ್ಷಣಾ ಕಾರ್ಯಗಳ ವಿಡಿಯೊ ಹರಿದಾಡುತ್ತಿದೆ.

ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗಳೊಂದಿಗೆ 39 ಮಂದಿ ಸೇರಿದಂತೆ ಸುಮಾರು 150 ಜನರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ ಎಂದು  ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಶೋಧ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿರುವುದರಿಂದ  ಸಾವುನೋವುಗಳನ್ನು ನಿಖರ ಸಂಖ್ಯೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:  ಚೀನಾದ ಅಲೆಮಾರಿ ಆನೆಗಳ ವಿಶ್ವ ದಾಖಲೆ ನಡಿಗೆ; ಈ ಗಜಪಡೆಯ ಮಹಾಪ್ರವಾಸ ಎಷ್ಟು ಗಮ್ಮತ್ತಾಗಿದೆ ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada