Mumbai Rain: ನೋಡನೋಡುತ್ತಿದ್ದಂತೆಯೇ ಮಾಯವಾದ ಕಾರು! ಮುಂಬೈ ಮಳೆ ಸೃಷ್ಟಿಸಿದ ಅವಾಂತರ ನೀವೂ ನೋಡಿ

ನೋಡನೋಡುತ್ತಿದ್ದಂತೆಯೇ ಕಾರು ಹೊಂಡದಲ್ಲಿ ಮುಳುಗಿ ಕಣ್ಣಿಗೆ ಕಾಣಿಸದಂತಾಗಿದೆ. ಮನೆ ಎದುರಿಗೆ ಕಾರ್​ ಪಾರ್ಕ್ ಮಾಡಿದ್ದೇನೆ, ಇನ್ಯಾವ ಭಯ ಇಲ್ಲ ಎಂದುಕೊಂಡ ಕಾರಿನ ಮಾಲೀಕ ಮಾತ್ರ ತಲೆ ಮೇಲೆ ಕೈ ಹೊತ್ತು ಕೂತಿದ್ದಾನಂತೆ.

Mumbai Rain: ನೋಡನೋಡುತ್ತಿದ್ದಂತೆಯೇ ಮಾಯವಾದ ಕಾರು! ಮುಂಬೈ ಮಳೆ ಸೃಷ್ಟಿಸಿದ ಅವಾಂತರ ನೀವೂ ನೋಡಿ
ಮನೆ ಮುಂದೆ ನಿಂತ ಕಾರು ನೋಡನೋಡುತ್ತಿದ್ದಂತೆಯೇ ಮಾಯ!
Follow us
TV9 Web
| Updated By: guruganesh bhat

Updated on:Jun 13, 2021 | 11:35 PM

ಮುಂಬೈಯಲ್ಲಿ ಈಗ ಮಳೆಯ ಅಬ್ಬರ ಜೋರಾಗಿದೆ.  ಮಳೆಯ ಅಬ್ಬರಕ್ಕೆ ನೂರಾರು ಮರಗಳು ನೆಲಕ್ಕುರುಳಿವೆ. ರಸ್ತೆಗಳು ಹಾನಿಗೊಳಗಾಗಿವೆ. ಈ ಮುನ್ನವೂ ಮಳೆಯಿಂದ ರೈಲ್ವೆ ಹಳಿಗಳ ಮೇಲೆ ನೀರು ತುಂಬಿಹೋಗಿತ್ತು. ಮಳೆಯ ಅಬ್ಬರಕ್ಕೆ ಕೊವಿಡ್​ ನ ನಡುವೆಯೂ ಮುಂಬೈ ನಾಗರಿಕರು ಸ್ವಲ್ಪ ಹೆಚ್ಚೇ ಕಳವಳಗೊಂಡಿದ್ದರು. ಏಕೆಂದರೆ ಆ ಪ್ರಮಾಣದ ಮಳೆ ಮುಂಬೈನಲ್ಲಿ ಸುರಿದಿತ್ತು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಡಿದಾಡುತ್ತಿರುವ ಮಳೆಯ ನಂತರದ ಮುಂಬೈನ ವಿಡಿಯೋವೊಂದು ಆಘಾತ ಮೂಡಿಸುವಂತಿದೆ.

ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ನಡೆದಿದ್ದು ಎಂದು ಹೇಳಲಾಗಿದೆ. ಮನೆಯ ಮುಂದೆ ಕಾರನ್ನು ನಿಲ್ಲಿಸಲಾಗಿತ್ತು. ಆದರೆ, ಧಾರಾಕಾರ ಮಳೆಯಿಂದಾಗಿ ಈ ಪ್ರದೇಶದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿತ್ತು. ರಸ್ತೆಯಲ್ಲಿ ನಿಂತ ನೀರು ಹರಿದುಹೋಗಿರಲೇ ಇಲ್ಲ. ಕಾರಿನ ಮುಂಭಾಗದಲ್ಲೇ ರಸ್ತೆಯೊಳಗಿನ ಹೊಂಡ ನೀರು ನಿಂತದ್ದೇ ನೆವವಾಗಿ ಬಾಯ್ತೆರೆದುಬಿಟ್ಟಿದೆ. ಅಷ್ಟೇ, ಆ ಹೊಂಡ ಕಾರನ್ನು ನುಂಗಿಬಿಟ್ಟಿದೆ. ದೂರದಿಂದ ಇದನ್ನೆಲ್ಲ ನೋಡುತ್ತಿರುವವರು ಆಕ್ಷಣ ಏನನ್ನೂ ಮಾಡಲಾರದೇ ದಂಗಾಗಿಬಿಟ್ಟಿದ್ದಾರೆ. ಯಾರೋ ಮಹಾನುಭಾವರು ಈ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿದ್ದಾರೆ.

ನೋಡನೋಡುತ್ತಿದ್ದಂತೆಯೇ ಕಾರು ಹೊಂಡದಲ್ಲಿ ಮುಳುಗಿ ಕಣ್ಣಿಗೆ ಕಾಣಿಸದಂತಾಗಿದೆ. ದೂರದಲ್ಲಿ ನಿಂತು ನೋಡುತ್ತಿದ್ದವರು ಆಘಾತಕ್ಕೊಳಗಾಗಿ ಉದ್ಘಾರವೆತ್ತುವುದನ್ನು ಸಹ ವಿಡಿಯೊದಲ್ಲಿ ಕೇಳಿಸಿಕೊಳ್ಳಬಹುದಾಗಿದೆ. ಮನೆ ಎದುರಿಗೆ ಕಾರ್​ ಪಾರ್ಕ್ ಮಾಡಿದ್ದೇನೆ, ಇನ್ಯಾವ ಭಯ ಇಲ್ಲ ಎಂದುಕೊಂಡ ಕಾರಿನ ಮಾಲೀಕ ಮಾತ್ರ ತಲೆ ಮೇಲೆ ಕೈ ಹೊತ್ತು ಕೂತಿದ್ದಾನಂತೆ.

ಇದನ್ನೂ ಓದಿ: Happy birthday Disha Patani: 19ನೇ ವಯಸ್ಸಿಗೆ ದಿಶಾ ಕೊಟ್ಟ ಮೊದಲ ಆಡಿಷನ್​ ವಿಡಿಯೋ ವೈರಲ್​

Viral Video: ಮಾಸ್ಕ್ ಧರಿಸದೆ ಓಡಾಡಿದವರಿಗೆ ಮಂಗಳಾರತಿ ಬೆಳಗಿ ಹಾಡು ಹೇಳಿದ ಮಹಿಳಾ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್

(Car sunk in ditch in Mumbai due to heavy rain video viral)

Published On - 5:01 pm, Sun, 13 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ