ಹಿಮಾಚಲಕ್ಕೆ ಪ್ರವಾಸಿಗರ ದಂಡು.. ಸಾಲುಸಾಲಾಗಿ ನಿಂತ ಕಾರುಗಳಿಂದ ಟ್ರಾಫಿಕ್​ ಫುಲ್ ಜಾಮ್​

TV9 Digital Desk

| Edited By: shruti hegde

Updated on:Jun 14, 2021 | 12:19 PM

ಆಗಮಿಸುತ್ತಿರುವ ಪ್ರವಾಸಿಗರಿಗೆ ಕೊವಿಡ್​ ನಿಂಯಂತ್ರಣ ಕ್ರಮಗಳನ್ನು ಕಟ್ಟು-ನಿಟ್ಟಾಗಿ ಪಾಲಿಸುವಂತೆ ಪೊಲೀಸರು ಎಚ್ಚರಿಸಿದ್ದಾರೆ. ಹಾಗೆಯೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಮುಖಗವಸನ್ನು ತಪ್ಪದೇ ಧರಿಸಲು ಸೂಚನೆ ನೀಡಿದ್ದಾರೆ.

ಹಿಮಾಚಲಕ್ಕೆ ಪ್ರವಾಸಿಗರ ದಂಡು.. ಸಾಲುಸಾಲಾಗಿ ನಿಂತ ಕಾರುಗಳಿಂದ ಟ್ರಾಫಿಕ್​ ಫುಲ್ ಜಾಮ್​
ಹಿಮಾಚಲಕ್ಕೆ ಪ್ರವಾಸಿಗರ ದಂಡು..

ದೆಹಲಿ: ಕೊವಿಡ್​19 ಆರ್​ಟಿ-ಪಿಸಿಆರ್​ ನೆಗೆಟಿವ್​ ಪರೀಕ್ಷೆಯ ವರದಿಯನ್ನು ಇನ್ನು ಮುಂದೆ ರಾಜ್ಯಕ್ಕೆ ತೋರಿಸುವ ಅಗತ್ಯವಿಲ್ಲ ಎಂದು ಹಿಮಾಚಲ ಪ್ರದೇಶ ಘೋಷಿಸಿದೆ. ಈ ಕೂಡಲೇ ಹಿಮಾಚಲಕ್ಕೆ ಹೋಗುವ ರಸ್ತೆಯಲ್ಲಿ ನೂರಾರು ಕಾರಗಳು ಸಾಲು ಸಾಲಾಗಿ ನಿಂತಿದ್ದು, ಭಾರೀ ದಟ್ಟಣೆ ಉಂಟಾಗಿದೆ. ಜತೆಗೆ ಪ್ರವಾಸಿಗರಿಗೂ ಕೂಡಾ ಅನುಮತಿ ನೀಡಲಾದ್ದರಿಂದ ರಸ್ತೆಯಲ್ಲಿ ಕೆಲ ಸಮಯ ಸಂಚಾರ ಸ್ಥಗಿತಗೊಂಡಿದೆ.

ಹಿಮಾಚಲ ಪ್ರದೇಶದ ಸೋಲನ್​ ಜಿಲ್ಲೆಯ ಪರ್ವಾನೂ ಬಳಿ ಭಾನುವಾರ ನೂರಾರು ಕಾರುಗಳು ರಸ್ತೆಯಲ್ಲಿ ಉದ್ದ ಸಾಲು ಹಚ್ಚಿ ನಿಂತಿರುವುದು ಕಂಡು ಬಂದವು. ಇತರ ರಾಜ್ಯಗಳಿಂದ ಆಗಮಿಸುವವರಿಗೆ ಪ್ರವೇಶಕ್ಕೆ ಅನುಮತಿ ಇದ್ದರೂ ಕೂಡಾ ಕೊವಿಡ್​ ಇ-ಪಾಸ್​ ಇನ್ನೂ ಅಗತ್ಯವಿದೆ.

ಕಳೆದ 36 ಗಂಟೆಗಳಲ್ಲಿ ಸುಮಾರು 5,000ಕ್ಕಿಂತಲೂ ಹೆಚ್ಚು ವಾಹನಗಳು ಶಿಮ್ಲಾಕ್ಕೆ ಪ್ರವೇಶಿಸಿದವು. ಪ್ರವಾಸಿಗರ ಆಗಮನವು ಹೆಚ್ಚಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಆಗಮಿಸುತ್ತಿರುವ ಪ್ರವಾಸಿಗರಿಗೆ ಕೊವಿಡ್​ ನಿಂಯಂತ್ರಣ ಕ್ರಮಗಳನ್ನು ಕಟ್ಟು-ನಿಟ್ಟಾಗಿ ಪಾಲಿಸುವಂತೆ ಪೊಲೀಸರು ಎಚ್ಚರಿಸಿದ್ದಾರೆ. ಹಾಗೆಯೇ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಮುಖಗವಸನ್ನು ತಪ್ಪದೇ ಧರಿಸಲು ಸೂಚನೆ ನೀಡಿದ್ದಾರೆ. ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಎಚ್ಚರಿಸಲಾಗಿದೆ ಎಂದು ಶಿಮ್ಲಾ ಪೊಲೀಸ್​ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಶೇ. 50ರಷ್ಟು ಬಸ್​ಸಂಚಾರಕ್ಕೆ ಅವಕಾಶಕ್ಕೆ ಅನುಮತಿ ನೀಡಲಾಗಿದೆ.

ಇದನ್ನೂ ಓದಿ:

Viral Video: ಹಿಮಾಚಲ ಪ್ರದೇಶದ ಮಹಾದೇವ ದೇವಾಲಯಕ್ಕೆ ಬಂದೆರಗಿದ ಸಿಡಿಲು! ವಿಡಿಯೋ ನೋಡಿ

ಇದೇ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಕಿಂಗ್​ ಕೋಬ್ರಾ ಪತ್ತೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada