ಇದೇ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಕಿಂಗ್​ ಕೋಬ್ರಾ ಪತ್ತೆ

ಸ್ಥಳೀಯ ನಿವಾಸಿ ಪ್ರವೀಣ್​ ಠಾಕೂರ್​ ಅವರು ತಮ್ಮ ಮೊಬೈಲ್​ನಲ್ಲಿ ಹಾವಿನ ಚಿತ್ರವನ್ನು ಸೆರೆ ಹಿಡಿದು ಅರಣ್ಯ ಮತ್ತು ವನ್ಯಜೀವಿ ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ. ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಾವಿನ ಕುರುಹುಗಳು ಪತ್ತೆಯಾಗಿದೆ.

ಇದೇ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಕಿಂಗ್​ ಕೋಬ್ರಾ ಪತ್ತೆ
ಸಾಂದರ್ಭಿಕ ಚಿತ್ರ
Follow us
shruti hegde
|

Updated on: Jun 06, 2021 | 3:43 PM

ವಿಶ್ವದ ಅತಿ ಉದ್ದದ ವಿಷಕಾರಿ ಹಾವು ಕಿಂಗ್​ಕೋಬ್ರಾ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದೆ. ಅರಣ್ಯ ಮತ್ತು ವನ್ಯವಿಭಾಗದಲ್ಲಿ ನಿನ್ನೆ (ಶನಿವಾರ) ಕಿಂಗ್​ ಕೊಬ್ರಾ ಪತ್ತೆಯಾಗಿರುವುದು ದಾಖಲಾಗಿದೆ. ವಿಶ್ವದ ಅತಿ ಉದ್ದದ ಹಾವು ಮತ್ತು ವಿಷಕಾರಿ ಹಾವು ಎಂದು ಗುರುತಿಸಲ್ಪಡುವ ಈ ಹಾವು ಹಲ್ಲಿಗಳಂತಹ ಕೀಟಗಳನ್ನು ಹಿಡಿದು ತಿನ್ನುತ್ತವೆ. ಹಿಮಾಚಲದ ಸಿರ್ಮೌರ್​ ಜಿಲ್ಲೆಯ​ ಅರಣ್ಯದ ಪಕ್ಕದಲ್ಲಿರುವ  ಶಿವಾಲಿಕ್​ ಬೆಟ್ಟದಲ್ಲಿ ಹಾವನ್ನು ಗುರುತಿಸಲಾಗಿದೆ.

ಸ್ಥಳೀಯ ನಿವಾಸಿ ಪ್ರವೀಣ್​ ಠಾಕೂರ್​ ಅವರು ತಮ್ಮ ಮೊಬೈಲ್​ನಲ್ಲಿ ಹಾವಿನ ಚಿತ್ರವನ್ನು ಸೆರೆ ಹಿಡಿದು ಅರಣ್ಯ ಮತ್ತು ವನ್ಯಜೀವಿ ಇಲಾಖೆಯೊಂದಿಗೆ ಹಂಚಿಕೊಂಡಿದ್ದಾರೆ. ಸಿಬ್ಬಂದಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಾವಿನ ಕುರುಹುಗಳು ಪತ್ತೆಯಾಗಿದೆ.

ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ಕಿಂಗ್​ ಕೋಬ್ರಾವನ್ನು ಹಿಂದೆಂದೂ ಹಿಮಾಚಲ ಪ್ರದೇಶದಲ್ಲಿ ನೋಡಿಲ್ಲ. ಮತ್ತು ಇಲಾಖೆಯಲ್ಲಿ ದಾಖಲಾಗಿಲ್ಲ. ಹಿಮಾಚಲದ ಶಿವಾಲಿಕ್​ ಬೆಟ್ಟಗಳಲ್ಲಿ ಮೊದಲ ಬಾರಿಗೆ ಹಾವನ್ನು ಗುರುತಿಸಲಾಗಿದೆ. ಈಗ ಹಿಮಾಚಲ ಪ್ರದೇಶದಲ್ಲಿ ನೋಡುತ್ತಿರುವುದು ಮಹತ್ವದ್ದಾಗಿದೆ ಎಂದು ಹಿಮಾಚಲದ ಪ್ರಧಾನ ಸಂರಕ್ಷಣಾಧಿಕಾರಿ ಅರ್ಚನಾ ಶರ್ಮಾ ಹೇಳಿದ್ದಾರೆ. ಈ ಕುರಿತಾಗಿ ದಿ ಇಂಡಿಯನ್​ ಎಕ್ಸ್​ಪ್ರೆಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸ್ಥಳೀಯ ನಿವಾಸಿ ಪ್ರವೀಣ್​​ ಠಾಕೂರ್​ ಅವರು ಈ ವಿಷಪೂರಿತ ಹಾವಿನ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅವರಿಗೆ ಈ ಹಾವು ಕಿಂಗ್​ ಕೋಬ್ರಾ ಎಂಬುದು ತಿಳಿದಿರಲಿಲ್ಲ. ತಮ್ಮ ಸ್ನೇಹಿತರೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರಲ್ಲಿ ಯಾರೋ ಅರಣ್ಯ ಮತ್ತು ವನ್ಯಜೀವಿ ವಿಭಾಗಕ್ಕೆ ಫೋಟೋ ಕಳುಕಿಸಿದ್ದಾರೆ.

ಪರಿಶೀಲನೆಯ ಬಳಿಕ ಹಾವು ಕಿಂಗ್ ಕೋಬ್ರಾ ಎಂಬುದು ತಿಳಿದು ಬಂದಿದೆ. ನಾವು ಸ್ಥಳೀಯ ನಿವಾಸಿ ಪ್ರವೀಣ್​ ಠಾಕೂರ್​ ಅವರ ಸಂಪರ್ಕದಲ್ಲಿದ್ದೇವೆ. ಕಾಡುಗಳಲ್ಲಿರುವ ಪ್ರದೇಶವನ್ನು ಪರಿಶೀಲಿಸುತ್ತಿದ್ದೇವೆ ಎಂದು ಡಿಎಫ್​ಒ ಕುನಾಲ್​ ಆಂಗ್ರಿಶ್​ ಹೇಳಿದ್ದಾರೆ.

ಇದನ್ನೂ ಓದಿ: 

15 ದಿನಗಳಿಂದ ಕಾಫಿ ತೋಟಕ್ಕೆ ಬರುತ್ತಿದ್ದ ಕಿಂಗ್ ಕೋಬ್ರಾ ಕೊನೆಗೂ ಸೆರೆ!

ಕೊಡಗಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ; ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ