ಐವತ್ತಕ್ಕಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾದ ಅಲಿಗಡ ಕಳ್ಳಭಟ್ಟಿ ದುರಂತ ಪ್ರಕರಣದ ಆರೋಪಿ, ಬಿಜೆಪಿ ನಾಯಕ ರಿಷಿ ಶರ್ಮಾ ಬಂಧನ

Aligarh Hooch Tragedy: 50ಕ್ಕಿಂತಲೂ ಹೆಚ್ಚು  ಮಂದಿಯ ಸಾವಿಗೆ ಕಾರಣವಾದ ಈ ಕಳ್ಳಭಟ್ಟಿ ದುರಂತ ನಂತರ ಸುಮಾರು 10 ದಿನಗಳ ಕಾಲ ರಿಷಿ ಶರ್ಮಾ ತಲೆ ಮರೆಸಿಕೊಂಡಿದ್ದು, ಈತನನ್ನು ಪತ್ತೆ ಹಚ್ಚಿದವರಿಗೆ 1 ಲಕ್ಷ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು.

ಐವತ್ತಕ್ಕಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾದ ಅಲಿಗಡ ಕಳ್ಳಭಟ್ಟಿ ದುರಂತ ಪ್ರಕರಣದ ಆರೋಪಿ, ಬಿಜೆಪಿ ನಾಯಕ ರಿಷಿ ಶರ್ಮಾ ಬಂಧನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 06, 2021 | 2:13 PM

ದೆಹಲಿ: ಅಲಿಗಡ ಕಳ್ಳಭಟ್ಟಿ ದುರಂತ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ನಾಯಕ ರಿಷಿ ಶರ್ಮಾನನ್ನು ಪೊಲೀಸರು ಭಾನುವಾರ ಬೆಳಗ್ಗೆ ಬುಲಂದ್‌ಶಹರ್ ಗಡಿಭಾಗದಿಂದ ಬಂಧಿಸಿದ್ದಾರೆ. 50ಕ್ಕಿಂತಲೂ ಹೆಚ್ಚು  ಮಂದಿಯ ಸಾವಿಗೆ ಕಾರಣವಾದ ಈ ಕಳ್ಳಭಟ್ಟಿ ದುರಂತ ನಂತರ ಸುಮಾರು 10 ದಿನಗಳ ಕಾಲ ರಿಷಿ ಶರ್ಮಾ ತಲೆ ಮರೆಸಿಕೊಂಡಿದ್ದು, ಈತನನ್ನು ಪತ್ತೆ ಹಚ್ಚಿದವರಿಗೆ 1 ಲಕ್ಷ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದರು. ಕಳೆದ 10 ದಿನಗಳಿಂದ ಉತ್ತರಾಖಂಡ, ರಾಜಸ್ಥಾನ, ದೆಹಲಿ, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ಪೊಲೀಸ್ ಶೋಧ ನಡೆಸಿದ್ದಾರೆ. ಪೊಲೀಸರು 500 ಕರೆ ವಿವರಗಳನ್ನು ಮೇಲ್ವಿಚಾರಣೆ ಮಾಡಿದ್ದರು, ಸುಮಾರು 100 ಮಾಹಿತಿದಾರರನ್ನು ಸಕ್ರಿಯಗೊಳಿಸಲಾಗಿದೆ ಮತ್ತು ರಿಷಿ ಶರ್ಮಾ ಅವರನ್ನು ಬಂಧಿಸಲು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ “ಎಂದು ಅಲಿಗಡದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಲಾನಿಧಿ ನೈಥಾನಿ ಭಾನುವಾರ ತಿಳಿಸಿದ್ದಾರೆ.

“ನಾವು ಈಗಾಗಲೇ ವಿಪಿನ್ ಯಾದವ್ ಅವರನ್ನು ಬಂಧಿಸಿದ್ದೇವೆ, ಆತನನ್ನು ಪತ್ತೆ ಹಚ್ಚಿದರೆ ₹ 50,000 ಬಹುಮಾನ, ಅನಿಲ್ ಚೌಧರಿ ಮತ್ತು ಅವರ ಸೋದರ ಮಾವ ನೀರಜ್ ಚೌಧರಿ ಅವರನ್ನು ಪತ್ತೆ ಹಚ್ಚಿದರೆ ₹ 25,000 ಬಹುಮಾನ, ಮುನಿಶ್ ಶರ್ಮಾ (ರಿಷಿ ಶರ್ಮಾ ಅವರ ಸಹೋದರ) ಮತ್ತು ಶಿವ ಕುಮಾರ್ ಪತ್ತೆ ಹಚ್ಚಿದರೆ ₹ 25,000 ಬಹುಮಾನ ಘೋಷಿಸಲಾಗಿತ್ತು. ರಿಷಿ ಶರ್ಮಾ ಅವರ ಪತ್ನಿ ಮತ್ತು ಮಗನನ್ನು ಈ ಹಿಂದೆ ಬಂಧಿಸಲಾಗಿತ್ತು.

ಅಲಿಗಡದ ವಿವಿಧ ಪೊಲೀಸ್ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ ಮತ್ತು 61 ಜನರನ್ನು ಬಂಧಿಸಲಾಗಿದೆ ಎಂದು ನೈಥಾನಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ₹ 5 ಕೋಟಿ ಮೌಲ್ಯದ ಆಸ್ತಿಯನ್ನು ಅಲಿಗಡ ಆಡಳಿತವು ನೆಲಸಮಗೊಳಿಸಿದೆ ಮತ್ತು 100 ಕೋಟಿ ಮೌಲ್ಯದ ಹೆಚ್ಚಿನ ಆಸ್ತಿಗಳನ್ನು ಗುರುತಿಸಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಇದು ಕಳ್ಳಭಟ್ಟಿ ಎಂದು ಅಧಿಕಾರಿಗಳು ಘೋಷಿಸಿದ ಬೆನ್ನಲ್ಲೇ ಮದ್ಯವನ್ನು ಮಾರುಕಟ್ಟೆಯಿಂದ ತೆಗೆದ ನಂತರ, ಅಲಿಗಡದಾದ್ಯಂತ 50ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿಗಳು ಹೊರಬಂದವು. ಪೊಲೀಸರು ದಾಳಿ ಪ್ರಾರಂಭಿಸಿದ ನಂತರ ಅದನ್ನು ಹೊಂದಿದ್ದವರು ಈ ಮದ್ಯವನ್ನು ಕಾಲುವೆಗಳಲ್ಲಿ ಮತ್ತು ದೂರದ ಸ್ಥಳಗಳಲ್ಲಿ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ಮದ್ಯದ ಬಾಟಲಿಗಳನ್ನು ಹುಡುಕಲು ಮೇಲಿನ ಗಂಗಾ ಕಾಲುವೆಯಲ್ಲಿ ನೀರಿನ ಹರಿವನ್ನು ನಿಲ್ಲಿಸುವಂತೆ ನೀರಾವರಿ ಇಲಾಖೆಗೆ ತಿಳಿಸಲಾಯಿತು. ಹತ್ತಿರದ ಜಿಲ್ಲೆಗಳಾದ ಹಾಥರಸ್, ಮಥುರಾ ಮತ್ತು ಇಟಾಗಳ ಪೊಲೀಸರಿಗೂ ಮಾಹಿತಿ ನೀಡಲಾಯಿತು. ಕಳೆದ ಶನಿವಾರ ಹಥಾರಸ್ ಜಿಲ್ಲೆಯ ಕಾಲುವೆಯಿಂದ 530 ಕ್ವಾರ್ಟರ್ ಮದ್ಯ ಪತ್ತೆಯಾಗಿದೆ.

ಈ ಸಂಬಂಧ ಕೆಲವು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರನ್ನು ಅಮಾನತುಗೊಳಿಸಿದ ನಂತರ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತವರ ಸೋದರನ ವಿರುದ್ಧ ಕಳ್ಳತನದ ಆರೋಪ; ಠಾಣೆಯಲ್ಲಿ ದೂರು ದಾಖಲು

Published On - 2:08 pm, Sun, 6 June 21