ಕೊಡಗಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ; ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ

ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಕಾಳಿಂಗವನ್ನು ಮಾಕುಟ್ಟ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

ಕೊಡಗಿನಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ; ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ
ಕಾಳಿಂಗ ಸರ್ಪವನ್ನು ಸೆರೆಹಿಡಿಯುತ್ತಿರುವ ದೃಶ್ಯ
Follow us
preethi shettigar
|

Updated on: May 03, 2021 | 8:30 AM

ಕೊಡಗು: 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪೊನ್ನೀರ ಸ್ನೇಕ್ ಗಗನ್ ಸೆರೆ ಹಿಡಿದ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ನಡೆದಿದೆ. ತಮ್ಮಯ್ಯ ಎಂಬವರ ಮನೆಯಲ್ಲಿ 15 ಅಡಿ ಉದ್ದದ ಕಾಳಿಂಗ ಕಂಡು ಬಂದಿದ್ದು, ಮನೆಯ ಆವರಣದಲ್ಲಿ ತೀವ್ರ ಆತಂಕ‌ಸೃಷ್ಟಿಯಾಗಿತ್ತು. ನಂತರ ಉರಗ ತಜ್ಞರಿಗೆ ಕರೆ ಮಾಡಿದ್ದು, ಸದ್ಯ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಕಾಳಿಂಗವನ್ನು ಮಾಕುಟ್ಟ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

ಮನೆ ಹಿಂಬದಿಯಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಮನೆ ಹಿಂಬದಿಯಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದ ರಾಜನ್ ನಗರದಲ್ಲಿ ನಡೆದಿದೆ. ಶೃಂಗೇರಿ ಪಟ್ಟಣದ ರಾಜನ್ ನಗರದ ಮನೆಯೊಂದರ ಬಳಿ ಕಾಳಿಂಗ ಸರ್ಪ ಮೊಕ್ಕಾಂ ಹೂಡಿತ್ತು. ಇದನ್ನು ಕಂಡ ಅಲ್ಲಿನ ನಿವಾಸಿಗಳನ್ನು ಈ ವಿಚಾರವನ್ನು ಉರಗ ಪ್ರೇಮಿ ಸ್ನೇಕ್ ಅರ್ಜುನ್ ಎಂಬುವವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್ ಅರ್ಜುನ್​ ಕಿಂಗ್ ಕೋಬ್ರಾವನ್ನು ರಕ್ಷಣೆ ಮಾಡಿದ್ದಾರೆ.

ಕಿಂಗ್ ಕೋಬ್ರಾವನ್ನು ಸ್ನೇಕ್ ಅರ್ಜುನ್ ಸೆರೆ ಹಿಡಿದ ಕೂಡಲೇ ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ. ಸೆರೆಯಾಗಿರುವ ಕಾಳಿಂಗ ಸರ್ಪ 10 ಅಡಿ ಉದ್ದವಿದೆ. ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಸ್ನೇಕ್ ಅರ್ಜುನ್ ಕೆರೆಕಟ್ಟೆ ಅರಣ್ಯಕ್ಕೆ ಬಿಟ್ಟುಬಂದಿದ್ದಾರೆ.

ಇದನ್ನೂ ಓದಿ:

ನಾಡಿಗೆ ಬಂದಿದ್ದ 10 ಅಡಿ ಕಾಳಿಂಗ ಸರ್ಪ ರಕ್ಷಣೆ, ಯಾವೂರಲ್ಲಿ?

ರಸ್ತೆ ದಾಟಲು ಪರದಾಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪ, ಅರಣ್ಯಕ್ಕೆ ಶಿಫ್ಟ್​

(Huge Black Cobra captured in Kodagu and Handed over to Forest Department staff)