ನಾಡಿಗೆ ಬಂದಿದ್ದ 10 ಅಡಿ ಕಾಳಿಂಗ ಸರ್ಪ ರಕ್ಷಣೆ, ಯಾವೂರಲ್ಲಿ?
ಚಿಕ್ಕಮಗಳೂರು: ಮನೆ ಹಿಂಬದಿಯಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದ ರಾಜನ್ ನಗರದಲ್ಲಿ ನಡೆದಿದೆ. ಶೃಂಗೇರಿ ಪಟ್ಟಣದ ರಾಜನ್ ನಗರದ ಮನೆಯೊಂದರ ಬಳಿ ಎರಡು ದಿನದಿಂದ ಕಾಳಿಂಗ ಸರ್ಪ ಮೊಕ್ಕಾಂ ಹೂಡಿತ್ತು. ಇದನ್ನು ಕಂಡ ಅಲ್ಲಿನ ನಿವಾಸಿಗಳನ್ನು ಈ ವಿಚಾರವನ್ನು ಉರಗ ಪ್ರೇಮಿ ಸ್ನೇಕ್ ಅರ್ಜುನ್ ಎಂಬುವವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್ ಅರ್ಜುನ್ ಕಿಂಗ್ ಕೋಬ್ರಾವನ್ನು ರಕ್ಷಣೆ ಮಾಡಿದ್ದಾರೆ. ಕಿಂಗ್ ಕೋಬ್ರಾವನ್ನು ಸ್ನೇಕ್ ಅರ್ಜುನ್ ಸೆರೆ ಹಿಡಿದ […]
ಚಿಕ್ಕಮಗಳೂರು: ಮನೆ ಹಿಂಬದಿಯಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಪಟ್ಟಣದ ರಾಜನ್ ನಗರದಲ್ಲಿ ನಡೆದಿದೆ.
ಶೃಂಗೇರಿ ಪಟ್ಟಣದ ರಾಜನ್ ನಗರದ ಮನೆಯೊಂದರ ಬಳಿ ಎರಡು ದಿನದಿಂದ ಕಾಳಿಂಗ ಸರ್ಪ ಮೊಕ್ಕಾಂ ಹೂಡಿತ್ತು. ಇದನ್ನು ಕಂಡ ಅಲ್ಲಿನ ನಿವಾಸಿಗಳನ್ನು ಈ ವಿಚಾರವನ್ನು ಉರಗ ಪ್ರೇಮಿ ಸ್ನೇಕ್ ಅರ್ಜುನ್ ಎಂಬುವವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ನೇಕ್ ಅರ್ಜುನ್ ಕಿಂಗ್ ಕೋಬ್ರಾವನ್ನು ರಕ್ಷಣೆ ಮಾಡಿದ್ದಾರೆ.
ಕಿಂಗ್ ಕೋಬ್ರಾವನ್ನು ಸ್ನೇಕ್ ಅರ್ಜುನ್ ಸೆರೆ ಹಿಡಿದ ಕೂಡಲೇ ಸ್ಥಳೀಯರು ನಿಟ್ಟುಸಿರುಬಿಟ್ಟಿದ್ದಾರೆ. ಸೆರೆಯಾಗಿರುವ ಕಾಳಿಂಗ ಸರ್ಪ 10 ಅಡಿ ಉದ್ದವಿದೆ. ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಸ್ನೇಕ್ ಅರ್ಜುನ್ ಕೆರೆಕಟ್ಟೆ ಅರಣ್ಯಕ್ಕೆ ಬಿಟ್ಟುಬಂದಿದ್ದಾರೆ.
ಇದನ್ನೂ ಓದಿ: ಮೈಸೂರು: ನಿಜದ ನಾಗರ ಕಂಡರೆ ಪೂಜೆ ಮಾಡುವರಯ್ಯಾ, ಕೇರೆ ಹಾವು ಕಂಡರೆ?
Published On - 1:04 pm, Thu, 19 November 20