ಪೆರೋಲ್ ಮೇಲೆ ಹೊರಬಂದ ರೌಡಿ ಶೀಟರ್​ ದರ್ಬಾರ್​ ಕಂಡು ಪೊಲೀಸರೇ ಕಂಗಾಲು!

ಪೆರೋಲ್ ಮೇಲೆ ಹೊರಬಂದ ರೌಡಿ ಶೀಟರ್​ ದರ್ಬಾರ್​ ಕಂಡು ಪೊಲೀಸರೇ ಕಂಗಾಲು!

ರಾಮನಗರ: ಪೆರೋಲ್ ಮೇಲೆ ಹೊರಬಂದಿರುವ ರೌಡಿ ಶೀಟರ್​ ಒಬ್ಬನಿಗೆ ಆತನ ಚೇಲಾಗಳು ಪಟಾಕಿ ಸಿಡಿಸಿ, ಹಾರ ಹಾಕಿ, ಹೂವಿನ ಸುರಿಮಳೆ ಸುರಿಸಿ ಸ್ವಾಗತಕೋರಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ನಡೆದಿದೆ. ಈ ಬಿಟ್ಟಿ ಸ್ವಾಗತ ಪಡೆದ ರೌಡಿ ಶೀಟರ್ ಮತ್ತ್ಯಾರು ಅಲ್ಲಾ, ನಟೋರಿಯಸ್ ಆಟೋ ರಾಮ. 2003ರಲ್ಲಿ ನಡೆದಿದ್ದ ಪ್ರಭಾಕರ್ ಕೊಲೆ ಕೇಸ್​ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಮ, ಪೆರೋಲ್ ಮೇಲೆ ಹೊರಬಂದು ಈ ದರ್ಬಾರ್ ನಡೆಸಿದ್ದಾನೆ. ರಾಮನ ಶಿಷ್ಯ ಶಿವ ಎಂಬ […]

pruthvi Shankar

| Edited By: sadhu srinath

Nov 19, 2020 | 12:59 PM

ರಾಮನಗರ: ಪೆರೋಲ್ ಮೇಲೆ ಹೊರಬಂದಿರುವ ರೌಡಿ ಶೀಟರ್​ ಒಬ್ಬನಿಗೆ ಆತನ ಚೇಲಾಗಳು ಪಟಾಕಿ ಸಿಡಿಸಿ, ಹಾರ ಹಾಕಿ, ಹೂವಿನ ಸುರಿಮಳೆ ಸುರಿಸಿ ಸ್ವಾಗತಕೋರಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ನಡೆದಿದೆ.

ಈ ಬಿಟ್ಟಿ ಸ್ವಾಗತ ಪಡೆದ ರೌಡಿ ಶೀಟರ್ ಮತ್ತ್ಯಾರು ಅಲ್ಲಾ, ನಟೋರಿಯಸ್ ಆಟೋ ರಾಮ. 2003ರಲ್ಲಿ ನಡೆದಿದ್ದ ಪ್ರಭಾಕರ್ ಕೊಲೆ ಕೇಸ್​ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ರಾಮ, ಪೆರೋಲ್ ಮೇಲೆ ಹೊರಬಂದು ಈ ದರ್ಬಾರ್ ನಡೆಸಿದ್ದಾನೆ. ರಾಮನ ಶಿಷ್ಯ ಶಿವ ಎಂಬ ವ್ಯಕ್ತಿಯ ಮಗನ ಬರ್ತೆಡೆ ಹಿನ್ನೆಲೆಯಲ್ಲಿ ಬೌನ್ಸರ್ ಗಳ ಜೊತೆ ಇವತ್ತು ಕಾರಿನಲ್ಲಿ ಕಬ್ಬಾಳು ದೇವಸ್ಥಾನಕ್ಕೆ ಭೇಟಿ ನೀಡಿದ್ದ.

ಈ ವೇಳೆ ಆಟೋ ರಾಮನ ಚೇಲಾಗಳು ಪಟಾಕಿ ಸಿಡಿಸಿ, ಹಾರ ಹಾಕಿ, ಹೂವಿನ ಸುರಿಮಳೆ ಸುರಿಸಿ ಸ್ವಾಗತಕೋರಿದ್ದಾರೆ. ಈ ವಿಡಿಯೋ ರಾಮನಗರದಾದ್ಯಂತ ಬಾರಿ ವೈರಲ್ ಆಗಿದ್ದು, ಆಟೋ ರಾಮನ ದರ್ಬಾರ್ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಪೆರೊಲ್ ಮುಗಿಸಿ ನವೆಂಬರ್​ 9 ರಂದು ಆಟೋರಾಮ ಮತ್ತೆ ಜೈಲು ಸೇರಿದ್ದಾನೆ.

Follow us on

Related Stories

Most Read Stories

Click on your DTH Provider to Add TV9 Kannada