ನೈಸರ್ಗಿಕಕ್ಕೆ ಸಡ್ಡು ಹೊಡೆದು, ಕೃತಕವಾಗಿಯೂ ಕೂಡ ಅತ್ಯಮೂಲ್ಯ ವಜ್ರವನ್ನು ತಯಾರಿಸಬಹುದು ಎಂಬುದು ಸಾಬೀತಾಗಿದೆ. 1,000 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನದಲ್ಲಿ ನೈಸರ್ಗಿಕ ವಜ್ರಗಳು ರೂಪುಗೊಳ್ಳಲು ಸಾಮಾನ್ಯವಾಗಿ ಶತಕೋಟಿ ವರ್ಷಗಳೇ ಬೇಕಾಗುತ್ತವೆ! ಆದರೆ ಈಗ ವಿಜ್ಞಾನಿಗಳ ಸಂಶೋಧನಾ ತಂಡವೊಂದು ಸಾಮಾನ್ಯ ಕೋಣೆಯ ತಾಪಮಾನದಲ್ಲಿ ವಜ್ರವನ್ನು ತಯಾರಿಸುವ ಮೂಲಕ ಸಾಧನೆಯನ್ನೇ ಮಾಡಿದೆ.
ಯುನೈಟೆಡ್ ಸ್ಟೇಟ್ನ ಸಿಡ್ನಿ ವಿಶ್ವವಿದ್ಯಾಲಯ ಮತ್ತು ಓಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಾಲಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಆಎಂಟಿ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯ ನ್ಯಾಷನಲ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಎರಡು ರೀತಿಯ ವಜ್ರಗಳನ್ನು ತಯಾರಿಸಿ ಹೆಮ್ಮೆಗೆ ಪಾತ್ರವಾಗಿದೆ. ಈ ವಿಜ್ಞಾನಿಗಳು 100 ಜಿಪಿಎ ಒತ್ತಡ ಮೂಲಕ ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ‘ಲಾನ್ಸ್ ಡೇಲೈಟ್’ ಮತ್ತು ‘ಸಾಮಾನ್ಯ ವಜ್ರ’(ಸಾಮಾನ್ಯವಾಗಿ ಉಂಗುರದಲ್ಲಿ ಕಂಡುಬರುವ) ತಯಾರಿಸಿ ಹುಬ್ಬೇರುವಂತೆ ಮಾಡಿದ್ದಾರೆ.
ಸ್ಫಟಿಕ ಶಾಸ್ತ್ರಜ್ಞೆ ಡೇಮ್ ಕ್ಯಾಥ್ಲೀನ್ ಲಾನ್ಸ್ಡೇಲ್ ಅವರ ಹೆಸರಿನ ‘ಲಾನ್ಸ್ ಡೇಲೈಟ್’ ಮತ್ತು ‘ಸಾಮಾನ್ಯ ವಜ್ರ’ವು ವಿಭಿನ್ನ ಸ್ಫಟಿಕ ರಚನೆಯನ್ನು ಹೊಂದಿದ್ದು, ಇದು ಶೇ. 50ರಷ್ಟು ಕಠಿಣವಾಗಿರುತ್ತದೆ ಎಂದು ಊಹಿಸಲಾಗಿದೆ.