ಕೋವಿಡ್​-19 ಲಸಿಕೆ ಬರುವ ಹೊತ್ತಲ್ಲಿ ಪುರುಷರಿಗೆ ‘ಸಿಹಿ-ಕಹಿ’ ನ್ಯೂಸ್​; ಏನದು?

ಕೋವಿಡ್​-19 ಲಸಿಕೆ ಬರುವ ಹೊತ್ತಲ್ಲಿ ಪುರುಷರಿಗೆ ‘ಸಿಹಿ-ಕಹಿ’ ನ್ಯೂಸ್​; ಏನದು?

ವಿಶ್ವಾದ್ಯಂತ ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿದೆ. ಹಲವು ಲಸಿಕೆಗಳೂ ಹೊರಬರುವ ಹಂತದಲ್ಲಿ ಇವೆ. ಹಾಗೆ..ಜಗತ್ತಿನಾದ್ಯಂತ ಅನೇಕ ಸಂಶೋಧಕರ ತಂಡ ಕೊರೊನಾ ಬಗ್ಗೆ ವಿವಿಧ ಆಯಾಮಗಳಲ್ಲಿ ಸಂಶೋಧನೆ, ಪ್ರಯೋಗಗಳನ್ನು ಮಾಡುತ್ತಲೇ ಇದೆ. ಹೀಗಿರುವಾಗ ಇದೀಗ ಹೊಸದೊಂದು, ಲಸಿಕೆ ಸಂಶೋಧನೆಯ ಮೇಲೆ ಪ್ರಭಾವ ಬೀರುವ ಅಧ್ಯಯನ ವರದಿಯೊಂದು ಹೊರಬಿದ್ದಿದೆ. ರೋಗ ನಿರೋಧಕ ಶಕ್ತಿ ಯಾರಲ್ಲಿ ಬೇಗ ಉತ್ಪತ್ತಿಯಾಗುತ್ತದೆ? ಕೋವಿಡ್​-19 ವೈರಸ್​ ವಿರುದ್ಧ ಹೋರಾಡುವ ಪ್ರತಿಕಾಯ ಮಟ್ಟ (ಆ್ಯಂಟಿಬಾಡಿ Antibody) ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ, ವೇಗವಾಗಿ ಉತ್ಪತ್ತಿಯಾಗುತ್ತದೆ. ಆದರೆ ಅದು ಅಷ್ಟೇ […]

pruthvi Shankar

| Edited By: sadhu srinath

Nov 19, 2020 | 4:11 PM

ವಿಶ್ವಾದ್ಯಂತ ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿದೆ. ಹಲವು ಲಸಿಕೆಗಳೂ ಹೊರಬರುವ ಹಂತದಲ್ಲಿ ಇವೆ. ಹಾಗೆ..ಜಗತ್ತಿನಾದ್ಯಂತ ಅನೇಕ ಸಂಶೋಧಕರ ತಂಡ ಕೊರೊನಾ ಬಗ್ಗೆ ವಿವಿಧ ಆಯಾಮಗಳಲ್ಲಿ ಸಂಶೋಧನೆ, ಪ್ರಯೋಗಗಳನ್ನು ಮಾಡುತ್ತಲೇ ಇದೆ. ಹೀಗಿರುವಾಗ ಇದೀಗ ಹೊಸದೊಂದು, ಲಸಿಕೆ ಸಂಶೋಧನೆಯ ಮೇಲೆ ಪ್ರಭಾವ ಬೀರುವ ಅಧ್ಯಯನ ವರದಿಯೊಂದು ಹೊರಬಿದ್ದಿದೆ.

ರೋಗ ನಿರೋಧಕ ಶಕ್ತಿ ಯಾರಲ್ಲಿ ಬೇಗ ಉತ್ಪತ್ತಿಯಾಗುತ್ತದೆ? ಕೋವಿಡ್​-19 ವೈರಸ್​ ವಿರುದ್ಧ ಹೋರಾಡುವ ಪ್ರತಿಕಾಯ ಮಟ್ಟ (ಆ್ಯಂಟಿಬಾಡಿ Antibody) ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ, ವೇಗವಾಗಿ ಉತ್ಪತ್ತಿಯಾಗುತ್ತದೆ. ಆದರೆ ಅದು ಅಷ್ಟೇ ವೇಗವಾಗಿ ಕುಸಿಯುತ್ತದೆ ಎಂಬುದು ಹೊಸ ಅಧ್ಯಯನದ ವರದಿ. ಪುರುಷರ ದೇಹದಲ್ಲಿ ಮಹಿಳೆಯರಿಗಿಂತಲೂ ವೇಗವಾಗಿ ಪ್ರತಿಕಾಯಗಳು ಸೃಷ್ಟಿಯಾಗುವುದರಿಂದ ಅವರು, ಬೇಗನೇ ಸೋಂಕಿನಿಂದ ಚೇತರಿಸಿಕೊಳ್ಳುತ್ತಾರೆ.

ಆದರೆ, ಅದು ಬಹುಬೇಗನೇ ಕಡಿಮೆಯಾಗುತ್ತದೆ. ಹಾಗೇ ಸ್ತ್ರೀಯರ ದೇಹದಲ್ಲಿ ಆ್ಯಂಟಿಬಾಡಿ ಸೃಷ್ಟಿಯಾಗುವ ವೇಗದ ಮಟ್ಟ ಕಡಿಮೆ ಇದ್ದರೂ, ಅದು ಬಹುಕಾಲ ಸ್ಥಿರವಾಗಿ ಉಳಿಯುತ್ತದೆ ಎಂಬ ವರದಿಯನ್ನು ಫ್ರಾನ್ಸ್ ಸ್ಟ್ರಾಸ್​ಬರ್ಗ್ ವಿಶ್ವವಿದ್ಯಾಲಯದ ಆಸ್ಪತ್ರೆ ತನ್ನ ಅಧ್ಯಯನದ ಮೂಲಕ ಬಹಿರಂಗಗೊಳಿಸಿದೆ.   ಈ ಹಿಂದೆಯೂ ಕೂಡ ಹೆಣ್ಣು-ಗಂಡು ಎಂಬ ಲಿಂಗ ಪ್ರತ್ಯೇಕತೆ ಆಧರಿಸಿ ಕೋವಿಡ್​-19ಗೆ ಸಂಬಂಧಪಟ್ಟ ಹಲವು ಅಧ್ಯಯನಗಳನ್ನು ನಡೆಸಲಾಗಿದೆ. ಮಹಿಳೆಯರು ಅತ್ಯಂತ ಬೇಗನೇ ಕೋವಿಡ್ ಸೋಂಕಿಗೆ ಒಳಗಾಗುತ್ತಾರೆ. ಆದರೆ ಕೊರೊನಾದಿಂದ ಹೆಚ್ಚಾಗಿ ಸಾಯುವವರು ಪುರುಷರೇ ಎಂದು ಬಹುತೇಕ ಸಂಶೋಧನೆಗಳು ವರದಿ ನೀಡಿದ್ದವು. ಆದರೆ ಇದೀಗ ಫ್ರಾನ್ಸ್​  ಸ್ಟ್ರಾಸ್​ಬರ್ಗ್ ವಿಶ್ವವಿದ್ಯಾಲಯ ಮತ್ತೊಂದು ಹೊಸ ಮಾಹಿತಿಯನ್ನು ನೀಡಿದೆ. 

ಮೂರು ವಿಭಿನ್ನ ಪರೀಕ್ಷೆಗಳ್ನು ನಡೆಸಲಾಗಿತ್ತು.. ಸ್ಟ್ರಾಸ್​ಬರ್ಗ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ 308 ಕರೊನಾ ಸೋಂಕಿತ ಸಿಬ್ಬಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 172 ದಿನಗಳಲ್ಲಿ ಎರಡು ಹಂತಗಳಲ್ಲಿ ರಕ್ತದ ಮಾದರಿಯ ಮೊದಲ ಪರೀಕ್ಷೆಯಲ್ಲಿ, 50 ವರ್ಷಕ್ಕಿಂತ ಹೆಚ್ಚಿನ ಪುರುಷರು ಮತ್ತು Body Mass Index (BMI-ಭೌತಿಕ ದ್ರವ್ಯರಾಶಿ ಸೂಚಿ) ಹೊಂದಿರುವ 25ಕ್ಕೂ ಹೆಚ್ಚು ಜನರಲ್ಲಿ ಹೆಚ್ಚಿನ ಪ್ರತಿಕಾಯ ಇರುವುದು ಪತ್ತೆಯಾಯಿತು.

ಅದಾದ ಬಳಿಕ ಎರಡನೇ ಹಂತದ ಪರೀಕ್ಷೆಯನ್ನು ವಯಸ್ಸು ಮತ್ತು ಬಿಎಂಐಗಳನ್ನು ಪರಿಗಣಿಸದೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಪುರುಷರ ಪ್ರತಿಕಾಯ ಮಟ್ಟ, ಮಹಿಳೆಯರಿಗಿಂತ ಹೆಚ್ಚಾಗಿ ಕುಸಿದಿದ್ದು ಕಂಡುಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.    ಈ ಮೊದಲಿನ ಕೆಲವು ಅಧ್ಯಯನಗಳು ಪುರುಷರಲ್ಲಿ  ಆ್ಯಂಟಿಬಾಡಿ ಪ್ರಮಾಣ ಹೆಚ್ಚು ಎಂದು ತೋರಿಸಿದ್ದವು. ಆದರೆ ನಮ್ಮ ಸಂಶೋಧನೆಯಿಂದ ಹೊಸ ವಿಷಯ ಬೆಳಕಿಗೆ ಬಂದಿವೆ. ಪುರುಷರಲ್ಲಿ ಪ್ರತಿಕಾಯ ಪ್ರಮಾಣ ಅಧಿಕವಾಗಿದ್ದರೂ, ಕಾಲಾನಂತರದಲ್ಲಿ ಅದು ಕುಸಿತವಾಗುತ್ತದೆ. ಆದರೆ ಮಹಿಳೆಯರಲ್ಲಿ ಒಮ್ಮೆ ಉತ್ಪತ್ತಿಯಾದ ಪ್ರತಿಕಾಯ ಬಹುಕಾಲದವರೆಗೆ ಸ್ಥಿರತೆ ಕಾಯ್ದುಕೊಳ್ಳುತ್ತದೆ ಎಂದು ಸ್ಟ್ರಾಸ್​ಬರ್ಗ್ ವಿಶ್ವವಿದ್ಯಾಲಯದ ಆಸ್ಪತ್ರೆಯ ವೈರಾಲಜಿ ವಿಭಾಗದ ಮುಖ್ಯಸ್ಥ ಸಮೀರಾ ಹೇಳಿದ್ದಾರೆ.

ರೋಗನಿರೋಧಕ ತೀವ್ರತೆಯಲ್ಲಿ ವ್ಯತ್ಯಾಸ ಸಹಜ. ಅದರ ಬಗ್ಗೆ ಆಶ್ಚರ್ಯವಿಲ್ಲ. ಇದು ಇತರ ಸೋಂಕುಗಳಿಗೂ ಅನುಗುಣವಾಗಿರುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ನೆದರ್​​​ಲ್ಯಾಂಡ್​​ನ ರಾಡ್​​ಬೌಡ್​ ವಿಶ್ವವಿದ್ಯಾಲಯದ ಸೆಕ್ಸ್​ ಆ್ಯಂಡ್​ ಜಂಡರ್​​ ಸೆನ್ಸಿಟಿವ್​ ಮೆಡಿಸಿನ್​ ಅಧ್ಯಕ್ಷ ಡಾ.ಸಬೈನ್ ಒರ್ಟೆಲ್ಟ್-ಪ್ರಿಗಿಯೋನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada