Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯವರಿಗೆ ಹೂಡಿಕೆಯ ಮೇಲೆ ಪೂರ್ಣ ವಿಶ್ವಾಸ ಬರಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ತ್ರಯೋದಶೀ ತಿಥಿ, ಗುರುವಾರ ಮಕ್ಕಳ ವರ್ತನೆಯಿಂದ ತಲ್ಲಣ, ಸ್ಥಾನ ಮಾನಕ್ಕೆ ಪ್ರಯತ್ನ, ಯೋಗದ ಬಳಕೆ ಇವೆಲ್ಲ ಈ ದಿನ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಈ ರಾಶಿಯವರಿಗೆ ಹೂಡಿಕೆಯ ಮೇಲೆ ಪೂರ್ಣ ವಿಶ್ವಾಸ ಬರಬಹುದು
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 10, 2025 | 1:13 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ: ಗಂಡ, ಕರಣ : ವಣಿಜ, ಸೂರ್ಯೋದಯ – 06:23 am, ಸೂರ್ಯಾಸ್ತ – 06:44 pm, ಇಂದಿನ ಶುಭಾಶುಭಕಾಲ: ರಾಹು ಕಾಲ 14:07 – 15:39, ಯಮಘಂಡ ಕಾಲ 06:23 – 07:56, ಗುಳಿಕ ಕಾಲ 09:29 – 11:01

ತುಲಾ ರಾಶಿ: ನಿಮ್ಮ ಫಲವತ್ತಾದ ಭೂಮಿಯನ್ನು ಸರಿಯಾಗಿ ರಕ್ಷಿಸಿ. ಅನ್ಯರ ಪ್ರವೇಶವಾಗಬಹುದು. ಇಂದು ನೀವು ಮಾಡುವ ಕಾರ್ಯವನ್ನು ಬಹಳ ಗೊಂದಲದಿಂದ ಅಲಕ್ಷ್ಯದಿಂದ ಮಾಡುವಿರಿ.‌ ಎಲ್ಲದೂ ಗೊತ್ತು ಎಂಬ ಗತ್ತು ಎದ್ದು ತೋರುತ್ತದೆ. ಶ್ರಮದ ಸಾಧನೆಗೆ ತೃಪ್ತಿ ಇರುವುದು. ಇಂದು ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಕಾರ್ಯವು ಸಿಗಲಿದೆ. ಗುರಿಯ ನಿರ್ಧಾರವಾಗದೇ ಇದ್ದರೆ ಇಂದು ನಿರ್ಧರಿಸಿ. ನಿಮ್ಮ ಬಹುಕಾಲ ಬಾಕಿಯಿರುವ ಕೆಲಸಗಳ ಬಗ್ಗೆ ನೆಮ್ಮದಿ ಇರದು. ಸಣ್ಣ ವಿಚಾರಕ್ಕೆ ಯಾರದ್ದಾದರೂ ವಿರೋಧ ಮಾಡುವಿರಿ. ಅವಕಾಶಗಳು ಮತ್ತೆ ಬಾರದು. ಇರುವುದನ್ನು ಸದುಪಯೋಗ ಮಾಡಿಕೊಳ್ಳಬೇಕು. ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಹಣ ಬಂದರೂ ಸಂತೋಷ ಇರುವುದಿಲ್ಲ. ಬಹಳ ಕಾರ್ಯವೂ ಇದರಿಂದ ಅನಾಯಸವೆನಿಸಬಹುದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದಾದರೆ ನಿಮ್ಮದೇ ಒಂದು ದಾರಿಯಾಗಲಿದೆ. ಬಿಟ್ಟು ಬಿಟ್ಟು ಬರುವ ಅನಾರೋಗ್ಯದಿಂದ ನಿಮಗೆ ಮಾನಸಿಕ ಹಿಂಸೆ ಆಗುವುದು.

ವೃಶ್ಚಿಕ ರಾಶಿ: ಆರ್ಥಿಕ ವ್ಯವಹಾರದಲ್ಲಿ ವ್ಯತ್ಯಾಸ. ಅಧಿಕಾರಿಗಳ ಮಧ್ಯಪ್ರವೇಶದಿಂದ ಜವಾಬ್ದಾರಿ ಸ್ಥಾನದಿಂದ ಉಚ್ಚಾಟನೆ ಸಾಧ್ಯತೆ. ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆಗಳು ಅವಶ್ಯವಾಗಿ ಬೇಕಾಗವುದು. ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಇಂದಿನ ನಿಮ್ಮ ಘಟನೆಯು ಯಾರನ್ನೂ ಇಷ್ಟಪಡಲು ಆಗದು. ನಿಮ್ಮ ಸ್ವಭಾವವು ಇತರರಿಗೆ ಕಿರಿಕಿರಿಯನ್ನು ತಂದೀತು. ಹೊಸ ಆವಿಷ್ಕಾರಗಳ‌ ಕಡೆ ನಿಮ್ಮ ಮನಸ್ಸಿರುವುದು. ಸಂಸಾರದಲ್ಲಿ ಯಾವುದೋ ವಿಚಾರಕ್ಕೆ ಜಗಳಕ್ಕೆ ಇಳಿಯಬೇಡಿ. ದೃಢವಾದ ಮನಸ್ಸಿನಿಂದ ಮುಂದುವರಿಯಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳೇ ಹೆಚ್ಚು ಕೇಳಿಬರಬಹುದು. ವಿದ್ಯಾರ್ಥಿಗಳು ಮನೆಯಿಂದ ದೂರ ಇರಬೇಕಾದ ಸ್ಥಿತಿ ಬರಬಹುದು. ಶ್ರಮ ವಹಿಸಿ ಮಾಡಿದ ಕಾರ್ಯಕ್ಕೆ ಉತ್ತಮ ಫಲವು ಸಿಗಲಿದೆ. ನಿಮ್ಮವರನ್ನು ಸಂತೋಷಗೊಳಿಸುವಿರಿ. ಇಂದು ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ.

ಧನು ರಾಶಿ: ಕಾಮಗಾರಿ ವಹಿಸಿಕೊಂಡು ಅನಂತರ ಸುಮ್ಮನಾಗುವಿರಿ. ಜನರಿಂದ ಆಕ್ರೋಶ ಬರಲಿದೆ. ನೀವು ಇನ್ನೊಬ್ಬರ ತಪ್ಪಿನಿಂದ ಕಲಿಯುವಿರಿ. ಮನೆಯ ಕಾರಣಕ್ಕೆ ಉದ್ಯೋಗದ ಕಿರಿಕಿರಿಯು ನಿಮ್ಮನ್ನು ಬಾಧಿಸದೇ ಇರದು. ಮನಸ್ಸಿನೊಳಗೆ ಹಲವು ಗೊಂದಲಗಳನ್ನು ಇಟ್ಟುಕೊಂಡು ಚಡಪಡಿಸುವಿರಿ. ಬಂಗಾರದ ಉದ್ಯಮದ ವಿಸ್ತರಣೆ ಸಾಧ್ಯವಾಗಲಿದೆ. ಇಂದು ನಿಮಗೆ ಏನಾದರೂ ವಿಶೇಷವಾದ ವಸ್ತುವು ಸಿಗಬಹುದು. ಪ್ರೇಮದಿಂದ ವಂಚನೆಯಾಗಬಹುದು. ಹಣವನ್ನು ಸಾಲವಾಗಿ ಯಾರಿಂದಲೂ ಪಡೆಯಲು ಹೋಗುವುದು ಬೇಡ. ನಿಮ್ಮ ಸಂಕಷ್ಟಕ್ಕೆ ಯಾರಿಂದಲಾದರೂ ಪರಿಹಾರ ಲಭ್ಯ. ಸರ್ಕಾರದ ಮುಖವನ್ನು ನೋಡದೇ ನಿಮ್ಮ ಕೆಲಸವನ್ನು ನೀವು ಮಾಡಿ. ಚಂಚಲವಾದ ಮನಸ್ಸನ್ನು ನೀವು ಒಂದೇ ಕಡೆ ನಿಲ್ಲಿಸುವುದು ಕಷ್ಡವಾದೀತು. ಇಂದು ಸ್ತ್ರೀಯರ ತಾಳ್ಮೆಗೆ ಪರೀಕ್ಷೆಯಾಗಬಹುದು. ಸಾಮಾಜಿಕ ವಲಯದಲ್ಲಿ ಯಶಸ್ವಿಯಾಗಿ ಮುನ್ನಡೆಯುವಿರಿ. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು.

ಮಕರ ರಾಶಿ: ಸ್ನೇಹಿತರಿಂದಲೇ ನಿಮಗೆ ಆಪತ್ತು ಬರಬಹುದು.‌ ಭೂವಿಚಾರಕ್ಕೆ ಯಾರದೂ ಹಸ್ತಕ್ಷೇಪವನ್ನು ಬಯಸಬೇಡಿ. ಹಳೆಯ ದಾಯಾದಿ ಕಲಹವು ಪುನಃ ಆರಂಭವಾಗಬಹುದು. ಆಕಸ್ಮಿಕ ಧನಲಾಭ ಹಾಗೂ ಖರ್ಚುಗಳು ಒಟ್ಟಿಗೇ ಆಗಲಿವೆ. ವಿವಾಹ ಯೋಗವು ಕೂಡಿಬರಲಿದ್ದು, ಅಲ್ಲಗಳೆಯುವುದು ಬೇಡ. ಕಳ್ಳರ ಭೀತಿಯಿಂದ ನಿಮಗೆ ಚಿಂತೆಯಾಗಬಹುದು. ಕ್ಷಣಕಾಲದ ಕೋಪವನ್ನು ನೀವು ನಿಯಂತ್ರಣವನ್ನು ಇಟ್ಟುಕೊಳ್ಳುವುದು ಅನಿವಾರ್ಯ. ನೀವು ನಿಮ್ಮದೇ ಕಲ್ಪನಾ ಲೋಕದಲ್ಲಿ ಹೆಚ್ಚು ಇರುವಿರಿ. ವ್ಯಾಪಾರದಲ್ಲಿ ಹೊಸ ಹೂಡಿಕೆ ಮಾಡಲು ಮನಸ್ಸಿರುವುದು. ನಿಮ್ಮ ಖಾಸಗಿ ಬದುಕು ಸಮಾಜಕ್ಕೆ ಗೊತ್ತಾಗುವುದು. ಸ್ಥಿರಾಸ್ತಿಯನ್ನು ಹೆಚ್ಚು ಮಾಡಿಕೊಳ್ಳುವ ಬಯಕೆ ಅತಿಯಾದೀತು. ಹಿರಿಯರ ಮಾತನ್ನು ಧಿಕ್ಕರಿಸಿ ಏನನ್ನಾದರೂ ಮಾಡಲು ಹೋಗುವುದು ಬೇಡ. ಇಂದು ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು. ಆಹಾರಕ್ಕಾಗಿ ಅಧಿಕ ಖರ್ಚು.

ಕುಂಭ ರಾಶಿ: ವಿವಾಹದಲ್ಲಿ ವಂಚನೆಯಾಗುವ ಸಂಭವವಿದೆ. ಪೂರ್ವಾಪರ ಜ್ಞಾನವಿಲ್ಲದೇ ವ್ಯವಹಾರ ಬೇಡ. ಇಂದು ಅಧಿಕಾರಗಳ ಜೊತೆ ವಾಗ್ವಾದ ಮಾಡುವ ಸ್ಥಿತಿ ಬರಬಹುದು. ಇಂದಿನ ಹಣಕಾಸಿನ‌ ಬಿಕ್ಕಟ್ಟು ಮನಸ್ಸಿನ ವೇಗವನ್ನು ಹೆಚ್ಚಿಸುವುದು. ವಾಹನ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಳ್ಳುವಿರಿ. ಸಣ್ಣ ವಿಚಾರಗಳೂ ನಿಮಗೆ ಸಮಸ್ಯೆಯಂತೆ ತೋರುವುದು. ನೀವು ಭಾವೋದ್ವೇಗದಲ್ಲಿ ನಿರ್ಧಾರ ತೆಗೆದುಕೊಂಡು ಅನಂತರ ಪಶ್ಚಾತ್ತಾಪಪಡುವಿರಿ. ನಿಮ್ಮ ಸಂಗಾತಿಯಿಂದ ಇಂದು ಹಲವು ವಿಚಾರಕ್ಕೆ ಬೆಂಬಲವನ್ನು ಪಡೆಯುವಿರಿ. ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಗತಿಯು ಆಗಬೇಕಾಗಿದೆ. ಸಹೋದ್ಯೋಗಿಗಳ ಜೊತೆ ನಿಮ್ಮ ಅಸಹಜ ಪ್ರವೃತ್ತಿಯನ್ನು ತೋರಿಸುವಿರಿ. ಅಮೂಲ್ಯ ವಸ್ತುಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಪ್ರಯೋಜನವಿಲ್ಲದೇ ನೀವು ಯಾರನ್ನೂ ಇಂದು ಮಾತನಾಡಿಸಲಾರಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ತಂದೆಯ ಜೊತೆ ಸಂಬಂಧವು ಚೆನ್ನಾಗಿರುವುದು.

ಮೀನ ರಾಶಿ: ಮಹಿಳೆಯರಿಗೆ ಶ್ರಮದಿಂದ ಆತ್ಮತೃಪ್ತಿ. ಸ್ಪರ್ಧೆಯಲ್ಲಿ ಜಯ. ಇಂದು ನೀವೊಬ್ಬರೇ ಯತ್ನಿಸುವ ಕಾರ್ಯಗಳಲ್ಲಿ ಜಯವು ಪೂರ್ಣ ಪ್ರಮಾಣದಲ್ಲಿ ಸಿಗದು. ಹಿತೈಷಿಗಳ ಬೆಂಬಲವೂ ನಿಮಗೆ ಅತ್ಯವಶ್ಯವಾಗಿ ಬೇಕು. ಇಂದು ಅಧಿಕ ಬಾಯಾರಿಕೆ ನಿಮಗಾಗಲಿದೆ. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ನೀವು ಒಪ್ಪಿಕೊಳ್ಳಬೇಕಾಗುವುದು. ಇಂದು ನೀವು ನಿಮ್ಮವರಿಗೆ ಹೆಚ್ಚು ಖರ್ಚನ್ನು ಮಾಡಬೇಕಾದೀತು. ನಿಮ್ಮ ಅನಗತ್ಯ ಖರ್ಚುಗಳನ್ನು ನೀವು ನಿಗ್ರಹಿಸಬೇಕು. ವ್ಯಾಪಾರ ಮಾಡುವವರು ಬಯಸಿದ ಅನುಕೂಲಗಳು ಸಿಗದಿದ್ದರೆ ಸ್ವಲ್ಪ ಕಸಿವಿಸಿಗೊಳ್ಳಬಹುದು. ಕುಟುಂಬದ ಯಾವುದಾದರೂ ಸದಸ್ಯರಿಂದ ನೀವು ಮನ ನೋಯುವ ಸಾಧ್ಯತೆ ಇದೆ. ಹಿರಿಯ ವ್ಯಕ್ತಿಗಳ ಜೊತೆ ಇಂದು ಪ್ರಯಾಣ ಮಾಡುವಿರಿ. ಯಾರದೋ ಕಾರ್ಯಕ್ಕೆ ನೀವು ಶ್ರಮಿಸಬೇಕಾದೀತು. ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಬಹುದು. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು.

ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ