ಮಂಗಳೂರಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಸಾವಿರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿ!
ಸಿದ್ದರಾಮಯ್ಯ ಸರ್ಕಾರದಿಂದ ಬೆಲೆ ಏರಿಕೆ, ಭ್ರಷ್ಟಾಚಾರವನ್ನು ಅರೋಪಿಸಿ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ನಡೆಸುತ್ತಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಮಂಗಳೂರಲ್ಲಿ ನಡೆದ ಯಾತ್ರೆಯಲ್ಲಿ ವಿಜಯೇಂದ್ರ ಅವರು ವಾಹನವನ್ನು ಹತ್ತದೆ ಕಾರ್ಯಕರ್ತರೊಂದಿಗೆ ನಡೆದು ಬಂದಿದ್ದು ವಿಶೇಷವೆನಿಸಿತು.
ಮಂಗಳೂರು, ಏಪ್ರಿಲ್ 9: ಕರ್ನಾಟಕದ ಬಂದರು ನಗರ ಮಂಗಳೂರಲ್ಲಿ (port city Mangaluru) ಬಿಜೆಪಿ ಜನಾಕ್ರೋಶ ರ‍್ಯಾಲಿ ಭಾರೀ ಯಶ ಕಂಡಿತು. ನಗರದ ಜ್ಯೋತಿ ಸರ್ಕಲ್ ನಿಂದ ಹಂಪನಕಟ್ಟೆ ಕ್ಲಾಕ್ ಟವರ್ ನಡೆದ ರ‍್ಯಾಲಿಯಲ್ಲಿ ಸಾವಿರಾರು ಬಿಜೆಪಿ ಕಾರ್ಉಕರ್ತರು ಭಾಗಿಯಾಗಿದ್ದರು. ರಸ್ತೆಯೆಲ್ಲ ಕೇಸರಿಮಯವಾಗಿ ಕಾಣುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಕರಾವಳಿ ಭಾಗದ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಮಾಜಿ ಸಚಿವರು ಮತ್ತು ಶಾಸಕರು ಭಾಗಿಯಾಗಿದ್ದರು.
ಇದನ್ನೂ ಓದಿ: ರಾಜಿನಾಮೆ ಕೊಟ್ಟ ಚುನಾವಣೆಗೆ ಬಾ, ನಾನು ಸಿದ್ದ: ವಿಜಯೇಂದ್ರಗೆ ಯತ್ನಾಳ್ ಸವಾಲು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos