ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಂಬಂಧಿಸಿದಂತೆ ಯಾವ ಗೊಂದಲವೂ ಇಲ್ಲ: ಬಿವೈ ವಿಜಯೇಂದ್ರ
ಬಿಜೆಪಿಯ ಪೇಮೆಂಟ್ ಸೀಟು ರಾಜ್ಯಾದ್ಯಕ್ಷ ತಮ್ಮ ವಿರುದ್ಧ ಪಕ್ಷದಲ್ಲಿ ಎದ್ದಿರುವ ಆಂತರಿಕ ಆಕ್ರೋಶವನ್ನು ಮುಚ್ಚಿ ಹಾಕಲು ಪ್ರತಿಭಟನೆಯ ಬೀದಿ ನಾಟಕ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿರುವುದಕ್ಕೆ ವಿಜಯೇಂದ್ರ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ ವನ್ ಎಂದು ಅವರ ಆರ್ಥಿಕ ಸಲಹೆಗಾರರೇ ಹೇಳಿದ್ದಾರೆ, ಸಿಎಂ ಅದಕ್ಕೆ ಮೊದಲು ಉತ್ತರ ಕೊಡಲಿ ಎಂದರು.
ಹಾಸನ, ಏಪ್ರಿಲ್ 9: ಹಾಸನದಲ್ಲಿ ನಮ್ಮ ವರದಿಗಾರನೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ಬೆಲೆಯೇರಿಕೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟದಿಂದ ಜೆಡಿಎಸ್ ಪಕ್ಷವನ್ನು (JDS party) ಹೊರಗಿಟ್ಟಿಲ್ಲ, ಸದನದೊಳಗೆ ಎರಡೂ ಪಕ್ಷಗಳು ಸರ್ಕಾರದ ವಿರುದ್ಧ ಒಟ್ಟಿಗೆ ಹೋರಾಟ ನಡೆಸುತ್ತಿವೆ, ಅದರೆ ಒಂದು ರಾಷ್ಟ್ರೀಯ ಮತ್ತು ವಿರೋಧ ಪಕ್ಷವಾಗಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹೆಚ್ಚಳದ ವಿರುದ್ಧ ಕೂಡಲೇ ಸ್ಪಂದಿಸಬೇಕಾಗಿದ್ದರಿಂದ ಬಿಜೆಪಿ ಒಬ್ಬಂಟಿಯಾಗಿ ಹೋರಾಟಕ್ಕಿಳಿದಿದೆ, ಎರಡು ಪಕ್ಷಗಳ ನಡುವಿನ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ನಡುವೆ ಯಾವ ಗೊಂದಲವೂ ಇಲ್ಲ, ಮಾತುಕತೆ ಮೂಲಕ ಸರಿಮಾಡಿಕೊಳ್ಳುತ್ತೇವೆ: ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ