ಬಿಜೆಪಿ-ಜೆಡಿಎಸ್ ನಡುವೆ ಯಾವ ಗೊಂದಲವೂ ಇಲ್ಲ, ಮಾತುಕತೆ ಮೂಲಕ ಸರಿಮಾಡಿಕೊಳ್ಳುತ್ತೇವೆ: ವಿಜಯೇಂದ್ರ
ಜೆಡಿಎಸ್ ಮತ್ತು ಬಿಜೆಪಿ ನಡುವೆ ಗೊಂದಲವೇನೂ ಇಲ್ಲ, ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಬೆಲೆಯೇರಿಕೆ ವಿರುದ್ಧ ಕೂಡಲೇ ಸ್ಪಂದಿಸಿ ಪ್ರತಿಭಟನೆ ನಡೆಸಬೇಕಿತ್ತು, ಜೆಡಿಎಸ್ ನಾಯಕರು ಗ್ರೇಟರ್ ಬೆಂಗಳೂರು ವಿರುದ್ಧ ತಮ್ಮದೇ ಆದ ಹೋರಾಟ ಮಾಡುತ್ತಿದ್ದಾರೆ, ತಮ್ಮ ತಕರಾರೇನೂ ಇಲ್ಲ, ವಿಧಾನ ಸಭೆಯಲ್ಲಿ ಎರಡೂ ಪಕ್ಷಗಳು ಜೊತೆಗೂಡಿ ಸರ್ಕಾರದ ವಿರುದ್ಧ ಹೋರಡುತ್ತಿವೆ ಎಂದು ವಿಜಯೇಂದ್ರ ಹೇಳಿದರು.
ಬೆಂಗಳೂರು, ಏಪ್ರಿಲ್ 3: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಇವತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಮುಡಾದಿಂದ ಹಂಚಿಕೆಯಾಗಿರುವ 14 ಸೈಟುಗಳು ಅಕ್ರಮ ಅಂತ ಬಿಜೆಪಿ ಪ್ರತಿಭಟನೆ ನಡೆಸಿ ಮೈಸೂರಿಗೆ ಪಾದಯಾತ್ರೆ ಮಾಡಿದಾಗ ಕಾಂಗ್ರೆಸ್ ನವರು ಮುಖ್ಯಮಂತ್ರಿಯ ತೇಜೋವಧೆಗೆ ಪ್ರಯತ್ನ ಅಂದರು. ಆದರೆ ಮುಖ್ಯಮಂತ್ರಿ ಮುಡಾಗೆ ಪತ್ರ ಬರೆದು ಸೈಟುಗಳನ್ನು ಹಿಂತಿರುಗಿಸಿದರು, ಅದರರ್ಥ ಅವರಿಂದ ಪ್ರಮಾದ ಜರುಗಿದೆ ಎಂದು ಹೇಳಿದರು.
ಇದನ್ನೂ ಓದಿ: ಸಭಾಧ್ಯಕ್ಷ ಯುಟಿ ಖಾದರ್ ಬಿಜೆಪಿ ಶಾಸಕರ ಸಸ್ಪೆನ್ಷನ್ ವಾಪಸ್ಸು ತೆಗೆದುಕೊಳ್ಳುವವರೆಗೆ ಪ್ರತಿಭಟನೆ: ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos