ದೇವರ ಕೋಪದಿಂದ ಕೊರೊನಾ ವೈರಸ್ ಸೃಷ್ಟಿಯಾಗಿದೆಯಂತೆ.. ಇದು ಉಗ್ರರ ‘ಭಯೋತ್ಪಾದಕತೆ’

ಕೊರೊನಾ ವೈರಸ್ ಎಂಬುದು ದೇವರ ಕೋಪದಿಂದ ಸೃಷ್ಟಿಯಾದಂತದ್ದು. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂರನ್ನು ನಾಶಪಡಿಸಿದವರಿಗೆ ದೇವರು ಶಿಕ್ಷೆ ವಿಧಿಸುತ್ತಿದ್ದಾರೆ ಎಂದು ಐಎಸ್ಐಎಲ್ ಮತ್ತು ಅಲ್-ಖೈದಾ ಭಯೋತ್ಪಾದಕ ಸಂಘಟನೆಗಳು ತನ್ನ ಅವೈಜ್ಞಾನಿಕ ಪಿತೂರಿ ಸಿದ್ದಾಂತಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಡಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಯೋತ್ಪಾದಕ ಸಂಘಟನೆಗಳು ಹೀಗೆ ಸಾಮಾಜಿಕ ಮಾಧ್ಯಮವನ್ನು ದುರುದ್ದೇಶಪೂರಕವಾಗಿ ಬಳಸಿಕೊಳ್ಳುತ್ತಿವೆ ಎಂದು ವಿಶ್ವಸಂಸ್ಥೆಯ ಅಂತರ್ಜಾಲ ಅಪರಾಧ ಮತ್ತು ನ್ಯಾಯ ಸಂಶೋಧನಾ ಸಂಸ್ಥೆ ಯುನಿಕ್ರಿ (UNICRI) ವರದಿ ಮಾಡಿದೆ. ಉಗ್ರಗಾಮಿಗಳು ತಮ್ಮ ಜಾಲವನ್ನು ಹೆಚ್ಚಿಸಲು, ಜನರಿಗಿರುವ ಸರ್ಕಾರದ ಮೇಲಿನ […]

ದೇವರ ಕೋಪದಿಂದ ಕೊರೊನಾ ವೈರಸ್ ಸೃಷ್ಟಿಯಾಗಿದೆಯಂತೆ.. ಇದು ಉಗ್ರರ ‘ಭಯೋತ್ಪಾದಕತೆ’
Follow us
ಸಾಧು ಶ್ರೀನಾಥ್​
|

Updated on: Nov 19, 2020 | 5:56 PM

ಕೊರೊನಾ ವೈರಸ್ ಎಂಬುದು ದೇವರ ಕೋಪದಿಂದ ಸೃಷ್ಟಿಯಾದಂತದ್ದು. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂರನ್ನು ನಾಶಪಡಿಸಿದವರಿಗೆ ದೇವರು ಶಿಕ್ಷೆ ವಿಧಿಸುತ್ತಿದ್ದಾರೆ ಎಂದು ಐಎಸ್ಐಎಲ್ ಮತ್ತು ಅಲ್-ಖೈದಾ ಭಯೋತ್ಪಾದಕ ಸಂಘಟನೆಗಳು ತನ್ನ ಅವೈಜ್ಞಾನಿಕ ಪಿತೂರಿ ಸಿದ್ದಾಂತಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರಡಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಭಯೋತ್ಪಾದಕ ಸಂಘಟನೆಗಳು ಹೀಗೆ ಸಾಮಾಜಿಕ ಮಾಧ್ಯಮವನ್ನು ದುರುದ್ದೇಶಪೂರಕವಾಗಿ ಬಳಸಿಕೊಳ್ಳುತ್ತಿವೆ ಎಂದು ವಿಶ್ವಸಂಸ್ಥೆಯ ಅಂತರ್ಜಾಲ ಅಪರಾಧ ಮತ್ತು ನ್ಯಾಯ ಸಂಶೋಧನಾ ಸಂಸ್ಥೆ ಯುನಿಕ್ರಿ (UNICRI) ವರದಿ ಮಾಡಿದೆ.

ಉಗ್ರಗಾಮಿಗಳು ತಮ್ಮ ಜಾಲವನ್ನು ಹೆಚ್ಚಿಸಲು, ಜನರಿಗಿರುವ ಸರ್ಕಾರದ ಮೇಲಿನ ನಂಬಿಕೆಯನ್ನು ಹಾಳು ಮಾಡಲು, ದೇವರ ಕೋಪದಿಂದ ಈ ಸಾಂಕ್ರಾಮಿಕ ರೋಗ ಹರಡುತ್ತಿದೆ ಎಂಬ ದುರುದ್ದೇಶದ ಸಂದೇಶವನ್ನು ಬಿತ್ತುವ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದೆ ಎಂದು ವರದಿ ತಿಳಿಸಿದೆ.

ಐಸಿಸ್ ಅಥವಾ ದಾಶ್ ಭಯೋತ್ಪಾದಕ ಗುಂಪು, ಅಲ್-ಖೈದಾದೊಂದಿಗೆ ಸಂಬಂಧಿಸಿದ ಗುಂಪು ಮತ್ತು ಸಂಘಟಿತ ಅಪರಾಧ ಗುಂಪು ಎಂಬುದಾಗಿ ಮೂರು ಭಯೋತ್ಪಾದಕರ ಗುಂಪುಗಳಿವೆ. ಐಸಿಸ್ ಮತ್ತು ಅಲ್-ಖೈದಾಗೆ ಸಂಬಂಧಿಸಿದ ಗುಂಪುಗಳಿಂದ ಕೋವಿಡ್ ಸಂಬಂಧಿತ ಸಂದೇಶವನ್ನು ಪರಿಶೀಲಿಸಿದಾಗ, ಉದ್ದೇಶಪೂರ್ವಕವಾಗಿ ರೋಗವನ್ನು ಹರಡುವ ಮೂಲಕ ಜೈವಿಕ ಬಾಂಬ್​ಗಳಾಗಿ ಕಾರ್ಯ ನಿರ್ವಹಿಸಲು ಸಂಚು ಹೂಡಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಯುನಿಕ್ರಿ ಸಂಶೋಧನಾ ಸಂಸ್ಥೆ ನಿರ್ದೇಶಕಿ ಆಂಟೋನಿಯಾ ಮೇರಿ ಡಿ ವಿಯೋ ವರದಿಯಲ್ಲಿ ತಿಳಿಸಿರುವ ಪ್ರಕಾರ, ಭಯೋತ್ಪಾದಕ ಮತ್ತು ಹಿಂಸಾತ್ಮಕ ಉಗ್ರಗಾಮಿ ಗುಂಪುಗಳು ಸಾಮಾಜಿಕ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಳ್ಳಲು ಸಂಭಾವ್ಯ ಭಯೋತ್ಪಾದಕರನ್ನು ಹೆಚ್ಚಿಸಲು ಕೋವಿಡ್19 ಅನ್ನು ಹರಡಲು ಬಳಸಿದ ಜೈವಿಕ ಆಯುಧ ಎಂದು ತಿಳಿಸಿದ್ದಾರೆ.

ದತ್ತಾಂಶ ವಿಜ್ಞಾನ ಉಪಕರಣಗಳು, ಸತ್ಯ-ಪರಿಶೀಲನೆ ಅಪ್ಲಿಕೇಶನ್​ಗಳು ಕೃತಕ ಬುದ್ಧಿವಂತಿಕೆ ಸೇರಿದಂತೆ ತಪ್ಪು ಮಾಹಿತಿಗಳನ್ನು ತೆಗೆದು ಹಾಕಲು ಯುನಿಕ್ರಿ (UNICRI) ಸಂಶೋಧಕರು ಹಲವು ಬಗೆಯ ತಂತ್ರಗಳನ್ನು ಹೂಡಿದ್ದಾರೆ. ಆದರೆ ತಂತ್ರಜ್ಞಾನ ಪ್ರತಿರೋಧಗಳು ಮಾತ್ರ ಸಾಮಾಜಿಕ ಮಾಧ್ಯಮ ದುರುಪಯೋಗ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ