ಜಾರ್ಜಿಯಾ ಮರುಎಣಿಕೆಯಲ್ಲೂ ಟ್ರಂಪ್​ಗೆ ಮುಖಭಂಗ; ಬೈಡೆನ್​ಗೆ​ ಐತಿಹಾಸಿಕ ಗೆಲುವು

ಜಾರ್ಜಿಯಾ ಮರುಎಣಿಕೆಯಲ್ಲೂ ಟ್ರಂಪ್​ಗೆ ಮುಖಭಂಗ; ಬೈಡೆನ್​ಗೆ​ ಐತಿಹಾಸಿಕ ಗೆಲುವು
ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್​: ಅಮೆರಿಕ ಚುನಾವಣೆ ಫಲಿತಾಂಶ ಈ ಬಾರಿ ಡೆಮಾಕ್ರಟಿಕ್​ ಪಕ್ಷದ ಜೋ ಬೈಡನ್​​ ಪರವಾಗಿ ಬಂದಿದ್ದರೂ ದಕ್ಷಿಣ ಅಮೆರಿಕದ ಜಾರ್ಜಿಯಾ ರಾಜ್ಯ ಇನ್ನೂ ಕುತೂಹಲ ಉಳಿಸಿಕೊಂಡಿತ್ತು. ಅಲ್ಲಿ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ಗಿಂತ ಬಿಡೆನ್​ ತುಂಬ ಕಡಿಮೆ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರಿಂದ ಮರುಎಣಿಕೆಗೆ ಆದೇಶ ನೀಡಲಾಗಿತ್ತು. ಇದೀಗ ಜಾರ್ಜಿಯಾದ ಮತ ಎಣಿಕೆಯೂ ಮುಗಿದಿದ್ದು ಅಲ್ಲಿ ಕೂಡ ಜೋ ಬೈಡನ್​​​ ಅವರೇ ಗೆದ್ದಿದ್ದಾರೆ. ಬೈಡನ್​ಗೆ 12,284 ಮತಗಳ ಅಂತರದ ಗೆಲುವು.. ಸುಮಾರು 5 ಮಿಲಿಯನ್​ ಮತ ಚಲಾವಣೆ […]

pruthvi Shankar

| Edited By: sadhu srinath

Nov 20, 2020 | 1:46 PM

ವಾಷಿಂಗ್ಟನ್​: ಅಮೆರಿಕ ಚುನಾವಣೆ ಫಲಿತಾಂಶ ಈ ಬಾರಿ ಡೆಮಾಕ್ರಟಿಕ್​ ಪಕ್ಷದ ಜೋ ಬೈಡನ್​​ ಪರವಾಗಿ ಬಂದಿದ್ದರೂ ದಕ್ಷಿಣ ಅಮೆರಿಕದ ಜಾರ್ಜಿಯಾ ರಾಜ್ಯ ಇನ್ನೂ ಕುತೂಹಲ ಉಳಿಸಿಕೊಂಡಿತ್ತು. ಅಲ್ಲಿ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ಗಿಂತ ಬಿಡೆನ್​ ತುಂಬ ಕಡಿಮೆ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರಿಂದ ಮರುಎಣಿಕೆಗೆ ಆದೇಶ ನೀಡಲಾಗಿತ್ತು. ಇದೀಗ ಜಾರ್ಜಿಯಾದ ಮತ ಎಣಿಕೆಯೂ ಮುಗಿದಿದ್ದು ಅಲ್ಲಿ ಕೂಡ ಜೋ ಬೈಡನ್​​​ ಅವರೇ ಗೆದ್ದಿದ್ದಾರೆ.

ಬೈಡನ್​ಗೆ 12,284 ಮತಗಳ ಅಂತರದ ಗೆಲುವು.. ಸುಮಾರು 5 ಮಿಲಿಯನ್​ ಮತ ಚಲಾವಣೆ ಆಗಿದ್ದ ಜಾರ್ಜಿಯಾದಲ್ಲಿ  ಎರಡನೇ ಬಾರಿಗೆ ಮ್ಯಾನ್ಯುಯಲ್​ ಆಗಿ ಮತಎಣಿಕೆ ಮಾಡಲಾಗಿದ್ದು, ಬೈಡನ್​ 12,284 ಮತಗಳ ಅಂತರದಿಂದ ಟ್ರಂಪ್ ವಿರುದ್ಧ ಗೆಲುವು ಸಾಧಿಸಿದ್ದಾರೆ.  ಮೊದಲ ಬಾರಿ ಎಣಿಕೆ ಪೂರ್ಣಗೊಂಡಾಗ ಬೈಡನ್ 14,000 ಮತಗಳಿಂದ ಮುನ್ನಡೆ ಸಾಧಿಸಿದ್ದರು ಎಂದು ಜಾರ್ಜಿಯಾದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಜಾರ್ಜಿಯಾದಲ್ಲಿ ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಗೆದ್ದಿದ್ದೇ ಇಲ್ಲ.. 1992ರಿಂದಲೂ ಜಾರ್ಜಿಯಾದಲ್ಲಿ ರಿಪಬ್ಲಿಕನ್​ ಪಕ್ಷದ ಪಾರುಪತ್ಯವೇ ಇತ್ತು. ಅವತ್ತಿಂದಲೂ ಡೆಮಾಕ್ರಟಿಕ್​ ಪಕ್ಷದ ಅಭ್ಯರ್ಥಿ ಗೆದ್ದಿದ್ದೇ ಇಲ್ಲ. ಆದರೆ ಈ ಬಾರಿ ಉಲ್ಟಾ ಆಗಿದೆ. ನವೆಂಬರ್​ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ವಂಚನೆ, ಜನರ ಹಾದಿ ತಪ್ಪಿಸುವ ಕೆಲಸಗಳು ಆಗಿಲ್ಲ ಎಂದು ಸ್ಥಳೀಯ ಲೆಕ್ಕಪರಿಶೋಧನಾ ಸಂಸ್ಥೆ ದೃಢಪಡಿಸಿದೆ. ಈ ಐತಿಹಾಸಿಕ ಗೆಲವು ದಕ್ಕಿದ್ದು ಜಾರ್ಜಿಯಾದಲ್ಲಿರುವ ನಮ್ಮ ಪಕ್ಷದ ಕಾರ್ಯಕರ್ತರು, ಚುನಾವಣಾ ಅಧಿಕಾರಿಗಳ ಕಠಿಣ ಪರಿಶ್ರಮದಿಂದ. ಅವರಿಗೆ ಮನ್ನಣೆ ನೀಡಲೇಬೇಕು ಎಂದು ರಿಪಬ್ಲಿಕನ್​ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.

Follow us on

Most Read Stories

Click on your DTH Provider to Add TV9 Kannada