‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ಏಪ್ರಿಲ್ 10ರಂದು ‘ವಾಮನ’ ಸಿನಿಮಾ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ನಡೆದ ಪ್ರೀಮಿಯರ್ ಶೋನಲ್ಲಿ ದರ್ಶನ್ ಅವರು ಭಾಗಿಯಾಗಿದ್ದಾರೆ. ಸಿನಿಮಾ ನೋಡಲು ಬಂದ ಅವರು ಚಿಕ್ಕಣ್ಣ ಜೊತೆ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಕೆಲವೇ ದಿನಗಳ ಹಿಂದೆ ‘ವಾಮನ’ ಟ್ರೇಲರ್ ಅನ್ನು ದರ್ಶನ್ ರಿಲೀಸ್ ಮಾಡಿದ್ದರು.
ನಟ ಧನ್ವೀರ್ ಗೌಡ (Dhanveer Gowda) ಅವರು ‘ವಾಮನ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಪ್ರೀಮಿಯರ್ ಶೋಗೆ ದರ್ಶನ್ ಅವರು ಆಗಮಿಸಿದ್ದಾರೆ. ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ಸಿನಿಮಾ ಪ್ರದರ್ಶನ ಏರ್ಪಡಿಸಿದ್ದು, ಅಲ್ಲಿ ಚಿಕ್ಕಣ್ಣ, ಧನ್ವೀರ್ ಗೌಡ ಮುಂತಾದವರ ಜೊತೆ ದರ್ಶನ್ (Darshan) ಅವರು ಕುಶಲೋಪರಿ ವಿಚಾರಿಸಿದ್ದಾರೆ. ದರ್ಶನ್ ಜೈಲಿನಲ್ಲಿ ಇದ್ದಾಗ ಧನ್ವೀರ್ ಅವರು ಸಹಾಯ ಮಾಡಿದ್ದರು. ಈಗ ಧನ್ವೀರ್ ಅವರ ಸಿನಿಮಾಗೆ ದರ್ಶನ್ ಬೆಂಬಲ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ‘ವಾಮನ’ (Vaamana) ಟ್ರೇಲರ್ ಬಿಡುಗಡೆ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos

