ಆಕ್ಸಿಜನ್ ವ್ಯತ್ಯಯ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರೂ ಸೇರಿ 22 ರೋಗಿಗಳ ಸಾವು
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ, ರೋಗಿಗಳು ಆಕ್ಸಿಜನ್ಗೆ ಪರದಾಡ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಭಾನುವಾರ ರಾತ್ರಿ ಆಕ್ಸಿಜನ್ ಖಾಲಿಯಾಗಿ ಹಲವರು ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಡಿಸ್ ಚಾರ್ಜ್ ಮಾಡುವುದಾಗಿ ಹೇಳಿದ ವೈದ್ಯರು, ತಡರಾತ್ರಿ ಸಂಬಂಧಿಕರಿಗೆ ಶವ ಕೊಟ್ಟು ಕಳುಹಿಸುತ್ತಿದ್ದಾರಂತೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ ಮನಕಲಕುವ ದೃಶ್ಯಗಳು ಕಂಡು ಬಂದಿವೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಭಾನುವಾರ ಸಂಜೆ ಆಕ್ಸಿಜನ್ ಖಾಲಿ ಆಗಿದ್ರಿಂದ 24 ಗಂಟೆಯಲ್ಲಿ 22 ಕೊವಿಡ್, ನಾನ್ ಕೊವಿಡ್ ರೋಗಿಗಳು ಆಕ್ಸಿಜನ್ ಸಿಗದೇ ಮೃತಪಟ್ಟಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 350 ಆಕ್ಸಿಜನ್ ಸಿಲಿಂಡರ್ಗಳಿವೆ. 6KL ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಕೂಡ ಇದೆ. ಸುಮಾರು 120 ರೋಗಿಗಳಿಗೆ ಇದ್ರಿಂದ ಆಕ್ಸಿಜನ್ ಪೂರೈಕೆ ಮಾಡ್ತಿದ್ದಾರೆ. ಮೈಸೂರಿನ ಸದರನ್ ಮತ್ತು ಪರ್ಕಿ ಏಜೆನ್ಸಿಗಳಿಂದ ಪ್ರತಿನಿತ್ಯ 350 ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗ್ತಿತ್ತು. ಆಕ್ಸಿಜನ್ ಪ್ಲಾಂಟ್ಗೆ ಬಳ್ಳಾರಿಯಿಂದ ಟ್ಯಾಂಕರ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಕಳೆದೆರಡು ದಿನಗಳಿಂದ ಕೇವಲ 30 ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗಿವೆ. ಕಳೆದ ಭಾನುವಾರದಿಂದ ಬಳ್ಳಾರಿಯಿಂದ ಬರ್ತಿದ್ದ ಆಕ್ಸಿಜನ್ ಟ್ಯಾಂಕರ್ ಕೂಡ ಬಂದಿಲ್ಲ. ಹೀಗಾಗಿ ಭಾನುವಾರ 9 ಗಂಟೆಯಿಂದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ.
ರಾತ್ರಿ 8ಗಂಟೆಗೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿದೆ. ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ರೆ ನಾಟ್ ರೀಚಬಲ್ ಆಗಿದೆ. ವೈದ್ಯರನ್ನ ವಿಚಾರಿಸಿದ್ರೆ ಅಸಹಾಯಕರಾಗಿ ಉತ್ತರಿಸ್ತಿದ್ರಂತೆ. ಹೀಗಾಗಿ ನಾವು ಯಾರನ್ನ ಕೇಳಬೇಕು ಅಂತಾ ಪ್ರಶ್ನೆ ಮಾಡ್ತಿದ್ರು.
ಮೈಸೂರಿನಿಂದ ಬರ್ತಿದ್ದ ಆಕ್ಸಿಜನ್ ಸ್ಥಗಿತಗೊಳಿಸಿರೋದು ಇದಕ್ಕೆಲ್ಲಾ ಕಾರಣವಂತೆ. ಮೈಸೂರು ಜಿಲ್ಲಾಧಿಕಾರಿ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗೆ ಪೂರೈಕೆ ಆಗ್ತಿರೋ ಆಕ್ಸಿಜನ್ ಸ್ಥಗಿತಗೊಳಿಸಲು ಮೌಖಿಕ ಆದೇಶ ನೀಡಿರೋದ್ರಿಂದ ಆಕ್ಸಿಜನ್ ಪೂರೈಸಲು ಏಜೆನ್ಸಿಗಳು ಮೀನಮೇಷ ಎಣಿಸ್ತಿವೆಯಂತೆ. ಹೀಗಾಗಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಆಕ್ಸಿಜನ್ ಸಮಸ್ಯೆ ನೀಗಿಸಲಿ ಅಂತಾ ಸಾರ್ವಜನಿಕರು ಆಗ್ರಹಿಸ್ತಿದ್ದಾರೆ.
ಇದನ್ನೂ ಓದಿ: ಯುವ ಕಾಂಗ್ರೆಸ್ ತಂಡದಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆ; ವಿವಾದಕ್ಕೆ ಕಾರಣವಾಯ್ತು ಟ್ವೀಟ್
Published On - 7:26 am, Mon, 3 May 21