ರಸ್ತೆ ದಾಟಲು ಪರದಾಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪ, ಅರಣ್ಯಕ್ಕೆ ಶಿಫ್ಟ್
ಬೆಳಗಾವಿ: ರಸ್ತೆ ದಾಟಲು ಪರದಾಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಖಾನಾಪುರ ತಾಲೂಕಿನ ಓಲಮನಿ ಗ್ರಾಮದ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯಲ್ಲಿ ಕಾಳಿಂಗ ಸರ್ಪವನ್ನು ರಕ್ಷಿಸಲಾಗಿದೆ. ಪ್ರಾಣಿಯೊಂದನ್ನ ನುಂಗಿ ರಸ್ತೆ ದಾಟಲು 15 ಅಡಿ ಉದ್ದದ ಹಾವು ಪರದಾಡುತ್ತಿತ್ತು. ರಸ್ತೆ ಮೇಲೆ ಹಾವನ್ನು ಕಂಡ ಗ್ರಾಮಸ್ಥರು ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಬಳಿಕ ಉರಗತಜ್ಞ ಭಜರಂಗ ಡುಕರೆ, ನಿಂಗಪ್ಪ ಗುರವರರ ಸಹಾಯದಿಂದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಳಿಕ ಸುರಕ್ಷಿತವಾಗಿ ಜಾಂಬೋಟಿ ಅರಣ್ಯ […]
ಬೆಳಗಾವಿ: ರಸ್ತೆ ದಾಟಲು ಪರದಾಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಖಾನಾಪುರ ತಾಲೂಕಿನ ಓಲಮನಿ ಗ್ರಾಮದ ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯಲ್ಲಿ ಕಾಳಿಂಗ ಸರ್ಪವನ್ನು ರಕ್ಷಿಸಲಾಗಿದೆ.
ಪ್ರಾಣಿಯೊಂದನ್ನ ನುಂಗಿ ರಸ್ತೆ ದಾಟಲು 15 ಅಡಿ ಉದ್ದದ ಹಾವು ಪರದಾಡುತ್ತಿತ್ತು. ರಸ್ತೆ ಮೇಲೆ ಹಾವನ್ನು ಕಂಡ ಗ್ರಾಮಸ್ಥರು ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಬಳಿಕ ಉರಗತಜ್ಞ ಭಜರಂಗ ಡುಕರೆ, ನಿಂಗಪ್ಪ ಗುರವರರ ಸಹಾಯದಿಂದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಳಿಕ ಸುರಕ್ಷಿತವಾಗಿ ಜಾಂಬೋಟಿ ಅರಣ್ಯ ಪ್ರದೇಶಕ್ಕೆ ಸರ್ಪವನ್ನು ಬಿಟ್ಟಿದ್ದಾರೆ.
Published On - 5:37 pm, Thu, 26 December 19