150 ಅಡಿ ಆಳದ ಬೋರ್​ವೆಲ್​ಗೆ ಬಿದ್ದ 4 ವರ್ಷದ ಮಗು; ಪೊಲೀಸರಿಂದ ರಕ್ಷಣಾ ಕಾರ್ಯಾಚಾರಣೆ

ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಧಿಕಾರಿ ಸೂರಜ್​ ಪ್ರಸಾದ್​ ಮಾಹಿತಿ ಹಂಚಿಕೊಂಡಿದ್ದಾರೆ.

150 ಅಡಿ ಆಳದ ಬೋರ್​ವೆಲ್​ಗೆ ಬಿದ್ದ 4 ವರ್ಷದ ಮಗು; ಪೊಲೀಸರಿಂದ ರಕ್ಷಣಾ ಕಾರ್ಯಾಚಾರಣೆ
ಬೋರ್​ವೆಲ್​

ಉತ್ತರ ಪ್ರದೇಶ: ಆಟವಾಡುತ್ತಿದ್ದ 4 ವರ್ಷದ ಮಗು 150 ಅಡಿ ಆಳದ ಬೋರ್​ವೆಲ್​ಗೆ ಬಿದ್ದಿರುವ ಘಟನೆಯೊಂದು ಆಗ್ರಾದ ಧರಿಯೈ ಗ್ರಾಮದಲ್ಲಿ ಸೋಮವಾರ ನಡೆದಿದೆ. ಪೊಲೀಸ್​ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿದ್ದಾರೆ ಎಂದು ಪೊಲೀಸ್​ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಸರಿಸುಮಾರು 8:30 ಸಮಯದಲ್ಲಿ ಆಗ್ರಾದ ನಿಬೊಹಾರಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿನ ಫತೆಹಾಬಾದ್​ನಲ್ಲಿ ಘಟನೆ ನಡೆದಿದೆ. ಪೊಲೀಸ್​ ಸಿಬ್ಬಂದಿ ಕಾರ್ಯಾಚರಣೆಯಲ್ಲಿದೆ. ಮಗು ಪ್ರತಿಕ್ರಿಯೆ ನೀಡುತ್ತಿದೆ ಹಾಗೂ ಮಗುವಿನ ಚಲನ-ವಲನಗಳು ಗಮನಕ್ಕೆ ಬರುತ್ತಿದೆ ಎಂದು ಅಧಿಕಾರಿ ಸೂರಜ್​ ಪ್ರಸಾದ್​ ಪಿಟಿಐಗೆ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಹಾಗೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮಗುವಿನ ತಂದೆ ನಿರ್ಮಿಸಿದ್ದ ಬೋರ್​ವೆಲ್​ಗೆ ಮಗು ಬಿದ್ದಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಘಟನೆ ನಡೆದ ಬಳಿಕ ತಡಮಾಡದೇ ಹಗ್ಗವನ್ನು ಬೋರ್​ವೆಲ್​ಗೆ ಇಳಿಬಿಟ್ಟಿದ್ದೇವೆ. ಮಗು ನಮ್ಮ ಮಾತನ್ನು ಕೇಳಿಸಿಕೊಂಡು ಪ್ರತಿಕ್ರಿಯೆ ನೀಡುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಬೋರ್‌ವೆಲ್‌ ಪೈಪ್ ಸಾಗಿಸ್ತಿದ್ದ ಲಾರಿ ಪಲ್ಟಿ, ಮೂವರು ಸ್ಥಳದಲ್ಲೇ ಸಾವು

ಬೋರ್‌ವೆಲ್‌ ಕೊರೆಯುವಾಗ ಕುಸಿದ ಭೂಮಿ, ಮಣ್ಣಿನಲ್ಲಿ ಸಿಲುಕಿದ್ದವನ ರಕ್ಷಣೆ

Click on your DTH Provider to Add TV9 Kannada