ಬೋರ್‌ವೆಲ್‌ ಪೈಪ್ ಸಾಗಿಸ್ತಿದ್ದ ಲಾರಿ ಪಲ್ಟಿ, ಮೂವರು ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ಬೋರ್‌ವೆಲ್‌ ಪೈಪ್​ಗಳನ್ನು ಸಾಗಿಸ್ತಿದ್ದ ಲಾರಿ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸಹುಡ್ಯ ಗ್ರಾಮದ ವಿಶ್ವನಾಥ್ ಎನ್ನುವವರ ಜಮೀನಿನ ಬಳಿ ಘಟನೆ ನಡೆದಿದೆ. ಮೃತ ಇಬ್ಬರು ಮಹಾರಾಷ್ಟ್ರ ಮೂಲದ ಕಾರ್ಮಿಕರು. ಮತ್ತೊಬ್ಬ ಛತ್ತಿಸಘಡ ಮೂಲದ ಕಾರ್ಮಿಕ. ಬೈರಾರೆಡ್ಡಿ ಎನ್ನುವವರ ಜಮೀನಿಗೆ ಬೋರ್​ವೆಲ್ ಕೊರೆಯಲು ಲಾರಿಯಲ್ಲಿ ಪೈಪ್​ಗಳನ್ನು ಸಾಗಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಚೇಳೂರು […]

ಬೋರ್‌ವೆಲ್‌ ಪೈಪ್ ಸಾಗಿಸ್ತಿದ್ದ ಲಾರಿ ಪಲ್ಟಿ, ಮೂವರು ಸ್ಥಳದಲ್ಲೇ ಸಾವು
Follow us
ಆಯೇಷಾ ಬಾನು
|

Updated on: Jun 24, 2020 | 8:49 AM

ಚಿಕ್ಕಬಳ್ಳಾಪುರ: ಬೋರ್‌ವೆಲ್‌ ಪೈಪ್​ಗಳನ್ನು ಸಾಗಿಸ್ತಿದ್ದ ಲಾರಿ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸಹುಡ್ಯ ಗ್ರಾಮದ ವಿಶ್ವನಾಥ್ ಎನ್ನುವವರ ಜಮೀನಿನ ಬಳಿ ಘಟನೆ ನಡೆದಿದೆ. ಮೃತ ಇಬ್ಬರು ಮಹಾರಾಷ್ಟ್ರ ಮೂಲದ ಕಾರ್ಮಿಕರು. ಮತ್ತೊಬ್ಬ ಛತ್ತಿಸಘಡ ಮೂಲದ ಕಾರ್ಮಿಕ. ಬೈರಾರೆಡ್ಡಿ ಎನ್ನುವವರ ಜಮೀನಿಗೆ ಬೋರ್​ವೆಲ್ ಕೊರೆಯಲು ಲಾರಿಯಲ್ಲಿ ಪೈಪ್​ಗಳನ್ನು ಸಾಗಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.