ಬಿಬಿಎಂಪಿಯಿಂದ ಬಿವಿಕೆ ಅಯ್ಯಂಗಾರ್ ರೋಡ್ ಬ್ಲಾಕ್
ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಏರಿಯಾ ಸೀಲ್ಡೌನ್ ಮಾಡುವ ಅಸ್ತ್ರ ಪ್ರಯೋಗಕ್ಕೆ ಮುಂದಾಗಿತ್ತು. ಹೀಗಾಗಿ ಬಿವಿಕೆ ಅಯ್ಯಂಗಾರ್ ರಸ್ತೆಯನ್ನು ಬ್ಲಾಕ್ ಮಾಡಿದೆ. ಚಿಕ್ಕಪೇಟೆ ಮೂಲಕ ಹಾದು ಹೋಗುವ ಕೆ.ಆರ್ ಮಾರುಕಟ್ಟೆ ಮತ್ತು ಕೆ.ಆರ್ ರಸ್ತೆ ಸಂಪರ್ಕಿಸುವ ಬಿವಿಕೆ ಅಯ್ಯಂಗಾರ್ ರಸ್ತೆ ಬ್ಲಾಕ್ ಆಗಿದೆ. ಬಿಬಿಎಂಪಿ ಸಿಬ್ಬಂದಿ ಬಿವಿಕೆ ರೋಡ್ ಮಧ್ಯೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಅರ್ಧ ರಸ್ತೆ ಬ್ಲಾಕ್ ಮಾಡಿದ್ದರಿಂದ ಬಿವಿಕೆ ಅಯ್ಯಂಗಾರ್ ರೋಡ್ ಸಂಪೂರ್ಣ ಜಾಮ್ ಆಗಿದೆ. ಕೆ.ಆರ್ ರೋಡ್ನಿಂದ ಅರ್ಧದವರೆಗೆ ರಸ್ತೆ ಓಪನ್ […]

ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಏರಿಯಾ ಸೀಲ್ಡೌನ್ ಮಾಡುವ ಅಸ್ತ್ರ ಪ್ರಯೋಗಕ್ಕೆ ಮುಂದಾಗಿತ್ತು. ಹೀಗಾಗಿ ಬಿವಿಕೆ ಅಯ್ಯಂಗಾರ್ ರಸ್ತೆಯನ್ನು ಬ್ಲಾಕ್ ಮಾಡಿದೆ. ಚಿಕ್ಕಪೇಟೆ ಮೂಲಕ ಹಾದು ಹೋಗುವ ಕೆ.ಆರ್ ಮಾರುಕಟ್ಟೆ ಮತ್ತು ಕೆ.ಆರ್ ರಸ್ತೆ ಸಂಪರ್ಕಿಸುವ ಬಿವಿಕೆ ಅಯ್ಯಂಗಾರ್ ರಸ್ತೆ ಬ್ಲಾಕ್ ಆಗಿದೆ.
ಬಿಬಿಎಂಪಿ ಸಿಬ್ಬಂದಿ ಬಿವಿಕೆ ರೋಡ್ ಮಧ್ಯೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಅರ್ಧ ರಸ್ತೆ ಬ್ಲಾಕ್ ಮಾಡಿದ್ದರಿಂದ ಬಿವಿಕೆ ಅಯ್ಯಂಗಾರ್ ರೋಡ್ ಸಂಪೂರ್ಣ ಜಾಮ್ ಆಗಿದೆ. ಕೆ.ಆರ್ ರೋಡ್ನಿಂದ ಅರ್ಧದವರೆಗೆ ರಸ್ತೆ ಓಪನ್ ಇದೆ. ಬಂದ ವಾಹನ ಸವಾರರು ತಾವೇ ಬ್ಯಾರಿಕೇಡ್ಗಳನ್ನು ತೆಗೆದು ಬೇಕಾಬಿಟ್ಟಿ ಸಂಚಾರ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಯಾವುದೇ ಕೊರೊನಾ ರೋಗಿಗಳು ಇಲ್ಲ. ಆದ್ರೆ ಮುಂದೆ ಸಂಪರ್ಕ ಹೊಂದುವ ರಸ್ತೆಗಳಲ್ಲಿ ಸೋಂಕಿತರಿರುವ ಕಾರಣ ಬಿವಿಕೆ ಅಯ್ಯಂಗಾರ್ ರಸ್ತೆಯನ್ನು ಮುಚ್ಚಲಾಗಿದೆ.





