ಸದ್ದಿಲ್ಲದೆ ಹರಡುತ್ತಿದೆ ‘ಖಿನ್ನತೆ’ ರೋಗ, ಸತ್ತವರ ಸಂಖ್ಯೆ ಕೊರೊನಾಗಿಂತ ಹೆಚ್ಚು!
ದೆಹಲಿ: ಎಲ್ಲೆಲ್ಲೂ ಕೊರೊನಾ ಸೋಂಕಿನದ್ದೇ ಭಯ. ಎಲ್ಲಿ ನೋಡಿದ್ರೂ, ಕೇಳಿದ್ರೂ ಕೊರೊನಾ ಬಗ್ಗೆಯೇ ಜನ ಮಾತಾಡ್ತಾರೆ. ಆದ್ರೆ ಭಾರತದಲ್ಲಿ ಕೊರೊನಾಗಿಂತಲೂ ಕ್ರೂರವಾದ ರೋಗವೊಂದು ಸದ್ದಿಲ್ಲದೆ ಹರಡುತ್ತಿದೆ. ಅಷ್ಟೇ ಅಲ್ಲ ಈ ರೋಗ ಈಗಾಗಲೇ ಕೊರೊನಾಗಿಂತ ಹೆಚ್ಚಿನ ಜನರನ್ನು ಬಲಿಪಡೆದಿದೆ. ಕೊರೊನಾ ಕ್ರೂರತೆ ಕಂಡು ಇಡೀ ಜಗತ್ತು ಬೆಚ್ಚಿಬಿದ್ದಿದೆ. ಅದ್ರಲ್ಲೂ ಭಾರತದಲ್ಲಿ ಈ ಸೋಂಕು ಅತಿ ವೇಗವಾಗಿ ಹಬ್ಬುತ್ತಿರುವುದು ಭಾರತೀಯರ ಮೈ ನಡುಗುವಂತೆ ಮಾಡಿದೆ. ಎಲ್ರೂ ಕೊರೊನಾ ಸೋಂಕನ್ನೇ ಅತ್ಯಂತ ಕ್ರೂರಿ, ಡೆಡ್ಲಿ ಅಂತಾ ಭಾವಿಸಿದ್ದಾರೆ. ಆದ್ರೆ ‘ಕೊರೊನಾ’ಗಿಂತಲೂ […]
ದೆಹಲಿ: ಎಲ್ಲೆಲ್ಲೂ ಕೊರೊನಾ ಸೋಂಕಿನದ್ದೇ ಭಯ. ಎಲ್ಲಿ ನೋಡಿದ್ರೂ, ಕೇಳಿದ್ರೂ ಕೊರೊನಾ ಬಗ್ಗೆಯೇ ಜನ ಮಾತಾಡ್ತಾರೆ. ಆದ್ರೆ ಭಾರತದಲ್ಲಿ ಕೊರೊನಾಗಿಂತಲೂ ಕ್ರೂರವಾದ ರೋಗವೊಂದು ಸದ್ದಿಲ್ಲದೆ ಹರಡುತ್ತಿದೆ. ಅಷ್ಟೇ ಅಲ್ಲ ಈ ರೋಗ ಈಗಾಗಲೇ ಕೊರೊನಾಗಿಂತ ಹೆಚ್ಚಿನ ಜನರನ್ನು ಬಲಿಪಡೆದಿದೆ.
ಕೊರೊನಾ ಕ್ರೂರತೆ ಕಂಡು ಇಡೀ ಜಗತ್ತು ಬೆಚ್ಚಿಬಿದ್ದಿದೆ. ಅದ್ರಲ್ಲೂ ಭಾರತದಲ್ಲಿ ಈ ಸೋಂಕು ಅತಿ ವೇಗವಾಗಿ ಹಬ್ಬುತ್ತಿರುವುದು ಭಾರತೀಯರ ಮೈ ನಡುಗುವಂತೆ ಮಾಡಿದೆ. ಎಲ್ರೂ ಕೊರೊನಾ ಸೋಂಕನ್ನೇ ಅತ್ಯಂತ ಕ್ರೂರಿ, ಡೆಡ್ಲಿ ಅಂತಾ ಭಾವಿಸಿದ್ದಾರೆ. ಆದ್ರೆ ‘ಕೊರೊನಾ’ಗಿಂತಲೂ ಕ್ರೂರವಾದ, ಡೇಂಜರಸ್ ರೋಗವೊಂದು ಭಾರತದಲ್ಲಿ ಸದ್ದಿಲ್ಲದೆ ಹರಡುತ್ತಿದೆ. ಈ ರೋಗಕ್ಕೆ ಕೊರೊನಾಗಿಂತಲೂ ಹೆಚ್ಚಿನ ಜನ ಬಲಿಯಾಗಿದ್ದಾರೆ. ಇತ್ತೀಚೆಗೆ ನಟನೊಬ್ಬ ಕೂಡ ಇದೇ ರೋಗಕ್ಕೆ ಬಲಿಯಾಗಿ, ದೊಡ್ಡ ಸುದ್ದಿಯಾಗಿತ್ತು.
ಸದ್ದಿಲ್ಲದೆ ಹರಡುತ್ತಿದೆ ‘ಖಿನ್ನತೆ’ ರೋಗ: ಅಂದಹಾಗೆ ಕಳೆದ ವಾರವಷ್ಟೇ ಮಾನಸಿಕ ಖಿನ್ನತೆಯಿಂದ ಬಾಲಿವುಡ್ ನಟ ಸುಶಾಂತ್ ಮುಂಬೈನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಣ, ಐಶ್ವರ್ಯ ಎಲ್ಲವನ್ನೂ ಹೊಂದಿದ್ದ ಸುಶಾಂತ್ ಸಿಂಗ್ ರಜಪೂತ್ ನೆಮ್ಮದಿಯೇ ಇಲ್ಲದೇ ಸೂಸೈಡ್ ಮಾಡಿಕೊಂಡಿದ್ದರು. ಇನ್ನು ನಟ ಸುಶಾಂತ್ ಸಾವಿನ ಬೆನ್ನಲ್ಲೇ ಸ್ಫೋಟಕ ಮಾಹಿತಿಯೊಂದು ಈಗ ಬಹಿರಂಗವಾಗಿದೆ. ದೇಶದಲ್ಲಿ ಮಾನಸಿಕ ಖಿನ್ನತೆಯಿಂದ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆಯಂತೆ. ಪ್ರತಿವರ್ಷ ಕನಿಷ್ಠ 10 ಸಾವಿರ ಜನ ಸೂಸೈಡ್ಗೆ ಶರಣಾಗ್ತಿದ್ದಾರೆ.
ಆಘಾತಕಾರಿ ಸಂಗತಿ ಏನಂದ್ರೆ, ಭಾರತದಲ್ಲಿ ಮಾನಸಿಕ ಖಿನ್ನತೆ ಪರಿಣಾಮ ಯುವ ಸಮುದಾಯವೇ ಹೆಚ್ಚಾಗಿ ಬಲಿಯಾಗ್ತಿದೆ. 2016ರಲ್ಲಿ ಒಟ್ಟು 9 ಸಾವಿರದ 478 ಮಂದಿ ಮಾನಸಿಕ ಖಿನ್ನತೆಗೆ ಬಲಿಯಾಗಿದ್ದರೆ, 2017ರಲ್ಲಿ ಈ ಸಂಖ್ಯೆ 9,905ಕ್ಕೆ ಏರಿತ್ತು. ಹಾಗೇ 2018ರಲ್ಲಿ 10 ಸಾವಿರದ ಗಡಿ ದಾಟಿದೆಯಂತೆ. ಹೀಗೆ ದೇಶದಲ್ಲಿ ಖಿನ್ನತೆಯಿಂದ ಗಂಟೆಗೊಂದು ಸಾವು ಸಂಭವಿಸುತ್ತಿದ್ದು, ಪ್ರತಿದಿನ ಸರಿಸುಮಾರು 28 ಮಂದಿ ಖಿನ್ನತೆಗೆ ಬಲಿಯಾಗುತ್ತಿದ್ದಾರಂತೆ.
ಒಟ್ನಲ್ಲಿ ಆಧುನಿಕ ಭಾರತದಲ್ಲಿ, ಭಾರತೀಯರನ್ನ ಖಿನ್ನತೆ ಇನ್ನಿಲ್ಲದಂತೆ ಕಾಡ್ತ್ತಿದೆ. ಬಾಲಿವುಡ್ನ ಘಟಾನುಘಟಿ ಸೆಲೆಬ್ರಿಟಿಗಳು ಖಿನ್ನತೆಯಿಂದ ಬಳಲಿದವರೇ ಆಗಿದ್ದಾರೆ. ದೇಶದಲ್ಲಿ ಕೊರೊನಾ ಈವರೆಗೂ 13 ಸಾವಿರ ಜನರನ್ನ ಬಲಿ ಪಡೆದಿದ್ದರೆ, ಇದಕ್ಕಿಂತಲೂ ಹಲವು ಪಟ್ಟು ಜನ ಖಿನ್ನತೆಯಿಂದ ಬಳಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಲ್ಲೂ ಹೀಗೆ ಸೂಸೈಡ್ ಮಾಡಿಳ್ಳುವವರ ಪ್ರಮಾಣ ಹೆಚ್ಚಾಗುತ್ತಿರುವುದು ಬಹುದೊಡ್ಡ ಗಂಡಾಂತರ ತಂದೊಡ್ಡಿದೆ.
Published On - 7:13 am, Wed, 24 June 20