Viral Video: ಹಿಮಾಚಲ ಪ್ರದೇಶದ ಮಹಾದೇವ ದೇವಾಲಯಕ್ಕೆ ಬಂದೆರಗಿದ ಸಿಡಿಲು! ವಿಡಿಯೋ ನೋಡಿ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಈ ವಿಡಿಯೋ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಹಲವಾರು ಮಂದಿ ಇದನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಹಂಚಿಕೊಂಡಿದ್ದಾರೆ. ಅಪ್ಲೋಡ್ ಮಾಡಿದ ಕೆಲವೇ ದಿನಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಬಹುಶಃ ಬಹುತೇಕ ಮಂದಿ ಭಯಪಡುವ ಒಂದು ಅಂಶ ಎಂದರೆ ಅದು ಸಿಡಿಲು ಎಂದು ಹೇಳಬಹುದು. ಜೋರಾದ ಮಳೆ, ಗಾಳಿ ಅಬ್ಬರಿಸುವ ಸಿಡಿಲು, ಮಿಂಚು, ಗುಡುಗಿಗೆ ಒಂದೊಮ್ಮೆಗೆ ನಾವು ಭಯಪಡುತ್ತೇವೆ. ಮಳೆಗಾಲದ ಸಿಡಿಲು, ಮಿಂಚು ಸಹಿಸಿಕೊಂಡು ಯಾರೂ ಸುಮ್ಮನೆ ಹೊರಹೋಗಲು ಮನಸ್ಸು ಮಾಡುವುದಿಲ್ಲ. ಮನೆಯೊಳಗೆ ಇದ್ದರೂ ಸಿಡಿಲು ಮಿಂಚಿನ ಬಣ್ಣ, ಅದರ ಶಬ್ದಕ್ಕೆ ಗಾಬರಿ ಬೀಳುವುದು ಸಹಜ. ಹಿರಿಯರಂತೂ ಮಕ್ಕಳನ್ನು ಅತೀ ಜೋಪಾನ ಮಾಡಿಬಿಡುತ್ತಾರೆ.
ಇಲ್ಲೀಗ ಅಂತಹ ದೃಶ್ಯವೊಂದು ಸೆರೆಯಾಗಿದೆ. ಸಿಡಿಲು ಬಂದು ಬಡಿಯುತ್ತಿರುವ ಕ್ಷಣವೊಂದು ವಿಡಿಯೋದಲ್ಲಿ ದಾಖಲಾಗಿದೆ. ಇಂತಹ ಕ್ಷಣಗಳನ್ನು ಸೆರೆ ಹಿಡಿಯುವುದು ಬಹಳ ಕಷ್ಟದ ಕೆಲಸ. ಸಿಡಿಲು ಮಿಂಚಿನ ಫೋಟೊ ಸೆರೆ ಹಿಡಿಯಲು ಛಾಯಾಗ್ರಾಹಕನಿಗೆ ಉತ್ತಮ ಕೌಶಲ್ಯ ಬೇಕಿರುತ್ತದೆ. ವಿಡಿಯೋ ತೆಗೆಯಲೂ ಅಷ್ಟೇ. ಸಮಯ, ಸಂದರ್ಭಕ್ಕೆ ಸರಿಯಾಗಿ ಕಾದು ಕುಳಿತು ಈ ಕೆಲಸ ಮಾಡಬೇಕಾಗುತ್ತದೆ.
ಹಿಮಾಚಲ ಪ್ರದೇಶದ ಮಹಾದೇವ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಕುಲು ಜಿಲ್ಲೆಯ ಮಹಾದೇವ ದೇವಾಲಯದಲ್ಲಿ ಗುರುವಾರ ಈ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಉತ್ಸಾಹಿ ಛಾಯಾಗ್ರಾಹಕರೊಬ್ಬರು ಈ ದೃಶ್ಯಾವಳಿಯನ್ನು ತಮ್ಮ ಕ್ಯಾಮಾರಾದಲ್ಲಿ ಬಂಧಿಸಿದ್ದಾರೆ. ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಕೂಡ ಇದನ್ನು ಅಪ್ಲೋಡ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಈ ವಿಡಿಯೋ ಮತ್ತಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಹಲವಾರು ಮಂದಿ ಇದನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಹಂಚಿಕೊಂಡಿದ್ದಾರೆ. ಅಪ್ಲೋಡ್ ಮಾಡಿದ ಕೆಲವೇ ದಿನಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಕಳೆದ ದಶಕದಿಂದ ಈಚೆಗೆ ಈ ಕಣಿವೆ ಪ್ರದೇಶದಲ್ಲಿ ಸಿಡಿಲು, ಮಿಂಚು ಪ್ರಮಾಣ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಮಹಾದೇವ ದೇವಾಲಯಕ್ಕೆ ಸಿಡಿಲು ಬಂದು ಬಡಿದಿದೆ. ಇದು ಕುಲು ಕಣಿವೆ ಪ್ರದೇಶದಲ್ಲಿ ಇರುವ ಅತಿ ಪುರಾತನ ದೇವಾಲಯವಾಗಿದೆ. ಕೆಲವರು ಈ ಘಟನೆಯನ್ನು ಶಿವನ ಆಶೀರ್ವಾದ ಈ ಪರ್ವತದ ಮೇಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೋಲ್ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಪೋಸ್ ಮಾಡಿದ ಹುಡುಗ; ಹೀಗೆ ಮಾಡಿದ್ರೆ ಯಾರೇ ಆದ್ರೂ ಬೀಳ್ದೇ ಇರ್ತಾರಾ?!
World Record: ಈಕೆಯ ರೆಪ್ಪೆ ನೋಡಿದರೆ ನೀವು ಹುಬ್ಬೇರಿಸೋದು ಖಚಿತ! ಏನಿದು ವಿಶೇಷ?
Published On - 7:25 pm, Sat, 12 June 21