ಗೋಲ್​ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಪೋಸ್ ಮಾಡಿದ ಹುಡುಗ; ಹೀಗೆ ಮಾಡಿದ್ರೆ ಯಾರೇ ಆದ್ರೂ ಬೀಳ್ದೇ ಇರ್ತಾರಾ?!

ಸೋಷಿಯಲ್ ಮೀಡಿಯಾದಲ್ಲಿ ಕೂಡ ಈಗ ಅಂಥದ್ದೊಂದು ವಿಶೇಷವಾಗಿ ಪ್ರಪೋಸ್ ಮಾಡಿದ ಕಥೆ ಹರಿದಾಡುತ್ತಿದೆ. ಹುಡುಗನೊಬ್ಬ ತನ್ನ ಪ್ರೇಯಸಿಗೆ ಊಹಿಸಲಾಗದ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಅದು ಹೇಗೇ ಅಂತೀರಾ? ಇಲ್ಲಿದೆ ವಿವರ

ಗೋಲ್​ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಪೋಸ್ ಮಾಡಿದ ಹುಡುಗ; ಹೀಗೆ ಮಾಡಿದ್ರೆ ಯಾರೇ ಆದ್ರೂ ಬೀಳ್ದೇ ಇರ್ತಾರಾ?!
ಗೋಲ್​ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಪೋಸ್

ಪ್ರೇಮಿಗಳಿಗೆ ತಮ್ಮ ಜೊತೆಗಾರ ಅಥವಾ ಜೊತೆಗಾರ್ತಿ ಪ್ರಪೋಸ್ ಮಾಡಿದ ದಿನ ಎಂದೂ ಮರೆಯಲಾಗದಂಥದ್ದು. ಅವರು ಮದುವೆ ಆದಮೇಲೆ ವಿವಾಹ ವಾರ್ಷಿಕೋತ್ಸವವನ್ನೂ ಅಷ್ಟು ಸಂಭ್ರಮಿಸುತ್ತಾರೋ ಇಲ್ವೋ ಆದರೆ ಪ್ರಪೋಸ್ ಮಾಡಿರುವ ದಿನವನ್ನು ಮಾತ್ರ ಎಂದಿಗೂ ಮರೆಯೋದಿಲ್ಲ. ಹೇಗೆ ಪ್ರಪೋಸ್ ಮಾಡಿದ್ದೆವು, ಏನು ರಿಯಾಕ್ಷನ್ ಸಿಕ್ಕಿತ್ತು, ಎಷ್ಟು ನಾಚಿಕೊಂಡಿದ್ದೆವು, ಎಷ್ಟು ಹೆದರಿದ್ದೆವು.. ಹೀಗೇ ಹತ್ತಾರು ಭಾವನೆಗಳು ಆ ದಿನದ ನೆನಪಲ್ಲಿ ಉಳಿದುಕೊಂಡಿರುತ್ತದೆ.

ಅದೇ ಕಾರಣದಿಂದ ಪ್ರತಿಯೊಬ್ಬ ಪ್ರೇಮಿಯೂ ಡಿಫರೆಂಟ್ ಆಗಿ ಪ್ರಪೋಸ್ ಮಾಡಬೇಕು ಅಂದುಕೊಂಡಿರುತ್ತಾರೆ. ಎಲ್ಲರಿಗಿಂತಲೂ ವಿಭಿನ್ನವಾಗಿ ಪ್ರಪೋಸ್ ಮಾಡಿ ಮೆಚ್ಚುಗೆ ಪಡೆಯಬೇಕು, ಯಾವತ್ತೂ ಆ ದಿನ ಮರೆತು ಹೋಗಬಾರದು ಅಂದುಕೊಂಡಿರುತ್ತಾರೆ. ಹುಡುಗಿ ಅಥವಾ ಹುಡುಗ ಆ ಪ್ರಪೋಸ್​ಗೆ ಬಿದ್ದೇ ಬೀಳಬೇಕು ಎಂಬ ಆಸೆಯೂ ಇರುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಕೂಡ ಈಗ ಅಂಥದ್ದೊಂದು ವಿಶೇಷವಾಗಿ ಪ್ರಪೋಸ್ ಮಾಡಿದ ಕಥೆ ಹರಿದಾಡುತ್ತಿದೆ. ಹುಡುಗನೊಬ್ಬ ತನ್ನ ಪ್ರೇಯಸಿಗೆ ಊಹಿಸಲಾಗದ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಅದು ಹೇಗೇ ಅಂತೀರಾ? ಇಲ್ಲಿದೆ ವಿವರ

ಹುಡುಗನೊಬ್ಬ ತನ್ನ ಪ್ರೇಯಸಿಗೆ ಗೋಲ್​ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಪೋಸ್ ಮಾಡಿದ್ದಾನೆ. ಈ ಘಟನೆಯನ್ನು ತಿಳಿದ ನೆಟ್ಟಿಗರು ಒಂದುಕ್ಷಣ ಚಕಿತರಾಗಿದ್ದಾರೆ. ಬಳಿಕ, ಈ ವಿಧಾನದಲ್ಲಿ ಪ್ರಪೋಸ್ ಮಾಡಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಗರ್ಲ್​ಫ್ರೆಂಡ್​ಗೆ ಇದಕ್ಕಿಂತ ವಿಶೇಷವಾಗಿ ಪ್ರಪೋಸ್ ಮಾಡೋಕೆ ಸಾಧ್ಯವಿಲ್ಲ. ಬಾಯ್​ಫ್ರೆಂಡ್ ಸೂಪರ್ ಆಗಿ ಪ್ರಪೋಸ್ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹಲವರು ಹೇಳಿದ್ದಾರೆ.

ಇಷ್ಟೊಂದು ವಿಭಿನ್ನವಾಗಿ ಪ್ರಪೋಸ್ ಮಾಡಿರುವ ಹುಡುಗನ ಬಗ್ಗೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ತುಂಬೆಲ್ಲಾ ಹೀಗೆ ಹುಡುಗನನ್ನು ಹೊಗಳಿರುವ ಕಮೆಂಟ್​ಗಳೇ ತುಂಬಿಕೊಂಡಿವೆ. ಹಲವರು ಈ ಪೋಸ್ಟ್​ನ್ನು ತಮ್ಮ ಖಾತೆಗಳಲ್ಲೂ ಶೇರ್ ಮಾಡಿಕೊಂಡಿದ್ದಾರೆ.

ಎಲ್ಲರಿಗೂ ತಮ್ಮ ಹುಡುಗಿಗೆ ಹೊಸಾ ಥರ ಪ್ರಪೋಸ್ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ, ಎಲ್ಲರಿಗೂ ಹೀಗೆ ಹೊಸ ಉಪಾಯ ಹೊಳೆದಿರುವುದಿಲ್ಲ. ಕೆಲವು ದಿನಗಳ ಹಿಂದೆ ಹುಡುಗನೊಬ್ಬ ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಪೋಸ್ ಮಾಡಿದ್ದ. ಹಿಪ್ಪೊಪೊಟಮಸ್ ಸಮ್ಮುಖದಲ್ಲಿ ಹುಡುಗ, ಹುಡುಗಿಗೆ ಉಂಗುರ ತೊಡಿಸಿದ್ದ. ಈ ಘಟನೆಯೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ: ಯುಜ್ವೇಂದ್ರ ಚಹಾಲ್​ ಹಾಗೂ ಧನಶ್ರೀ ವರ್ಮಾ ವ್ಯಾಯಾಮ ನೋಡಿ ಹುಬ್ಬೇರಿಸಿದ ನೆಟ್ಟಿಗರು; ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್

ಕ್ರಿಕೆಟ್ ದಂಪತಿಯ ವ್ಯಾಯಾಮ, ವೈರಲ್…!