World Record: ಈಕೆಯ ರೆಪ್ಪೆ ನೋಡಿದರೆ ನೀವು ಹುಬ್ಬೇರಿಸೋದು ಖಚಿತ! ಏನಿದು ವಿಶೇಷ?

ಯು ಜಿಯಾಂಕ್ಸಿಯಾ ಚೀನಾದ ಯುವತಿ. 2016ರಿಂದಲೂ ಅತ್ಯಂತ ಉದ್ದದ ಕಣ್ ರೆಪ್ಪೆ ಎಂಬ ದಾಖಲೆ ಈಕೆಯ ಹೆಸರಿನಲ್ಲೇ ಇದೆ. ಆ ಬಳಿಕ ಮತ್ತೆ ಅದನ್ನು ಅವಳು ಕತ್ತರಿಸಿಲ್ಲ. ಇನ್ನಷ್ಟು ಉದ್ದ ಬೆಳೆಯಲು ಬಿಟ್ಟಿದ್ದಾಳೆ.

World Record: ಈಕೆಯ ರೆಪ್ಪೆ ನೋಡಿದರೆ ನೀವು ಹುಬ್ಬೇರಿಸೋದು ಖಚಿತ! ಏನಿದು ವಿಶೇಷ?
ಯುವತಿಯ ವಿಶ್ವದಾಖಲೆ
Follow us
TV9 Web
| Updated By: ganapathi bhat

Updated on: Jun 12, 2021 | 5:21 PM

ಈ ಯುವತಿಯ ಕಣ್ ರೆಪ್ಪೆ ನೋಡಿದರೆ ನೀವು ಕಣ್ಣು ಮಿಟುಕಿಸದೇ ಉಳಿಯಬಹುದು. ಹುಬ್ಬೇರಿಸಿಬಿಡಬಹುದು. ಅಂತಹಾ ವಿಶೇಷ ಕಣ್ಣಿನ ರೆಪ್ಪೆ ಇದು. ಗಿನ್ನೆಸ್ ವರ್ಲ್ಡ್ ರೆಕಾರ್ಡ್​ನ ಇನ್​ಸ್ಟಾಗ್ರಾಂ ಖಾತೆ ಈಕೆಯ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಯು ಜಿಯಾಂಕ್ಸಿಯಾ ಎಂಬ ಯುವತಿಯ ರೆಪ್ಪೆಯಲ್ಲೇನಿದೆ ವಿಶೇಷ ಅಂತೀರಾ? ಈ ವಿವರ ಓದಿ.

ಯು ಜಿಯಾಂಕ್ಸಿಯಾ ವಿಶ್ವದ ಅತ್ಯಂತ ಉದ್ದದ ಕಣ್ಣಿನ ರೆಪ್ಪೆ ಹೊಂದಿದವಳಾಗಿ ಹೊಸ ದಾಖಲೆ ನಿರ್ಮಿಸಿದ್ದಾಳೆ. ಈ ಮೊದಲು ಅತ್ಯಂತ ಉದ್ದದ ಕಣ್ಣಿನ ರೆಪ್ಪೆ ಹೊಂದಿದ ದಾಖಲೆಯೂ ಅವಳ ಹೆಸರಿನಲ್ಲೇ ಇತ್ತು. ಈಗ ತನ್ನ ದಾಖಲೆಯನ್ನು ಸ್ವತಃ ತಾನೇ ಮುರಿದು ಮತ್ತೆ ಹೊಸ ಸಾಧನೆ ಮಾಡಿದ್ದಾಳೆ. ಮೊದಲಿಗಿಂತ ಉದ್ದದ ಕಣ್ಣಿನ ರೆಪ್ಪೆಯು ಈಗ ಮತ್ತೆ ಗಿನ್ನೆಸ್ ವಿಶ್ವ ದಾಖಲೆಯ ಪುಟ ಸೇರಿದೆ.

ಯು ಜಿಯಾಂಕ್ಸಿಯಾ ಚೀನಾದ ಯುವತಿ. 2016ರಿಂದಲೂ ಅತ್ಯಂತ ಉದ್ದದ ಕಣ್ ರೆಪ್ಪೆ ಎಂಬ ದಾಖಲೆ ಈಕೆಯ ಹೆಸರಿನಲ್ಲೇ ಇದೆ. ಆ ಬಳಿಕ ಮತ್ತೆ ಅದನ್ನು ಅವಳು ಕತ್ತರಿಸಿಲ್ಲ. ಇನ್ನಷ್ಟು ಉದ್ದ ಬೆಳೆಯಲು ಬಿಟ್ಟಿದ್ದಾಳೆ. ಈಗ ಮತ್ತೆ ಹೊಸ ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿದ್ದಾಳೆ.

ಮೇ 20ರಂದು ಅಧಿಕೃತವಾಗಿ ನೂತನ ದಾಖಲೆ ಮಾಡಿದ್ದಾಳೆ. ಅವಳ ರೆಪ್ಪೆಯ ಕೂದಲ ಉದ್ದ ಈಗ 20.5 ಸೆಂಟಿ ಮೀಟರ್ ಆಗಿದೆ. ಗಿನ್ನೆಸ್ ವಿಶ್ವ ದಾಖಲೆಯ ಬ್ಲಾಗ್ ಪೋಸ್ಟ್ ವರದಿಯಂತೆ, ಆಕೆಯ ರೆಪ್ಪೆಯು ಸಹಜ ಬೆಳವಣಿಗೆಗಿಂತ ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ ಎಂಬುದು 2015ರಲ್ಲಿ ಆಕೆಗೆ ತಿಳಿಯಿತು.

ಆ ಬಗ್ಗೆ ಆಕೆ ಆತಂಕಗೊಂಡಿಲ್ಲ. ತಾನು ಈ ಮೊದಲು 480 ದಿನಗಳನ್ನು ಪರ್ವತ ಶ್ರೇಣಿಯಲ್ಲಿ ಕಳೆದಿದ್ದೇನೆ. ಹಾಗಾಗಿ, ಇದು ತನಗೆ ಬುದ್ಧ ನೀಡಿದ ಉಡುಗೊರೆ ಎಂದೇ ಆಕೆ ಭಾವಿಸಿಕೊಂಡಿದ್ದಾಳೆ. ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಈ ರೆಪ್ಪೆಯಿಂದಾಗಿ ತನಗೇನು ತೊಂದರೆ ಉಂಟಾಗಿಲ್ಲ. ಬದಲಾಗಿ ಖುಷಿಯೇ ಹೆಚ್ಚಿದೆ ಎಂದು ಹೇಳಿದ್ದಾಳೆ.

ಜೂನ್ 10ರಂದು ಹಂಚಿಕೆಯಾಗಿರುವ ಈ ವಿಡಿಯೋ ಸುಮಾರು 28,000ಕ್ಕೂ ಅಧಿಕ ಮೆಚ್ಚುಗೆ ಪಡೆದುಕೊಂಡಿದೆ. ಕೆಲವರು ತಮ್ಮ ರೆಪ್ಪೆ, ಹುಬ್ಬಿನ ಬಗ್ಗೆ ಅತಿಯಾಗಿ ಚಿಂತಿಸುವಾಗ ಈ ಯುವತಿ ವಿಶೇಷವಾಗಿ ಕಂಡುಬಂದಿದ್ದಾಳೆ. ಕೆಲವರು ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ಧಾರೆ. ಇನ್ನೂ ಕೆಲವರು ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಗೋಲ್​ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಪೋಸ್ ಮಾಡಿದ ಹುಡುಗ; ಹೀಗೆ ಮಾಡಿದ್ರೆ ಯಾರೇ ಆದ್ರೂ ಬೀಳ್ದೇ ಇರ್ತಾರಾ?! 

Viral Video: ಮಾಸ್ಕ್ ಧರಿಸದೆ ಓಡಾಡಿದವರಿಗೆ ಮಂಗಳಾರತಿ ಬೆಳಗಿ ಹಾಡು ಹೇಳಿದ ಮಹಿಳಾ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ