Viral Video: ವಧು ಪಕ್ಕದಲ್ಲಿದ್ದಾಗಲೇ ವರನಿಗೆ ಚುಂಬಿಸಿದ ವಧುವಿನ ತಂಗಿ; ವರನಿಗೆ ಹೇಗಾಗಿರಬೇಡ?
ಅಕ್ಕನ ಮದುವೆ ಅಂದಾಕ್ಷಣ ಎಲ್ಲ ತಂಗಿಯರಿಗೂ ಖುಷಿಯ ವಿಚಾರ. ಅದರಲ್ಲಿಯೂ ಅಕ್ಕನ ಗಂಡನಾಗಿ ಬರುವ ಬಾವನಿಗೆ ಕಾಲೆಳೆಯುತ್ತಾ ನಗಿಸುತ್ತಾ ಮದುವೆ ಸಂಭ್ರಮ ನಡೆಯುತ್ತದೆ.
ಮದುವೆ ಮನೆ ಅಂದಾಕ್ಷಣ ಎಲ್ಲೆಲ್ಲೂ ಸಂಭ್ರಮ. ಮಕ್ಕಳೆಲ್ಲಾ ರಂಗು ರಂಗಿನ ಉಡುಗೆ, ಮಹಿಳೆಯರೆಲ್ಲಾ ಚಿನ್ನದ ಆಭರಣ ತೊಟ್ಟು ಓಡಾಡುವ ದೃಶ್ಯ ನೋಡುವುದೇ ಒಂದು ರೀತಿಯ ಖುಷಿ. ಮದುವೆ ಮನೆಯಲ್ಲಿ ನಗುವಿನದೇ ಅಧಿಪತ್ಯ. ನವಜೋಡಿಯಾಗುವವರ ಸ್ನೇಹಿತರು, ಅಕ್ಕ-ತಂಗಿಯರು ಕಾಲೆಳೆಯುತ್ತಾ ತಮಾಷೆ ಮಾಡುತ್ತಾ ಶುಭ ದಿನವನ್ನು ಆಚರಿಸುತ್ತಾರೆ. ಇಂತಹುದೇ ಒಂದು ತಮಾಷೆಯ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ವರನ ಪರಿಸ್ಥಿತಿ ಹೇಗಾಗಿರಬೇಡ? ಎಂದು ತಮಾಷೆ ಮಾಡಿದ್ದಾರೆ.
ಎಲ್ಲರೂ ಸಂಭ್ರಮದಲ್ಲಿ ತೊಡಗಿರುವಾಗ ಕೀಟಲೆ ಮಾಡತ್ತಾ ಮತ್ತಷ್ಟು ನಗಿಸಲು ಎಲ್ಲಿ ಸಾಧ್ಯ ಎಂಬುದರ ಹುಡುಕಾಟ. ಹೆಣ್ಣಿನ ಮನೆಯವರು ಗಂಡಿನ ಕಡೆಯವರಿಗೆ ಕಾಲೆಳೆಯುವುದು, ಮಧುಮಗಳ ಸಂಬಂಧಿಕರು ವರನಿಗೆ ರೇಗಿಸುವುದರ ಜತೆ ಮದುವೆ ಸಮಾರಂಭವನ್ನು ಅಚರಿಸುತ್ತಾರೆ. ಕೀಟಲೆ ಮಾಡಲು ಎಲ್ಲಿ ಸಾಧ್ಯವಾಗುತ್ತೆ ಅಂತ ಯೋಚಿಸುತ್ತಿದ್ದ ವಧುವಿನ ತಂಗಿಯು ವರನ ಕೆನ್ನೆಗೆ ಮುತ್ತಿಟ್ಟಿದ್ದಾಳೆ. ಫೊಟೋ ತೆಗೆಸಿಕೊಳ್ಳುತ್ತಿದ್ದ ಸಂದರ್ಭ ಎಲ್ಲರನ್ನೂ ನಗಿಸುವಂತೆ ಮಾಡಿದೆ.
View this post on Instagram
ವಿವಾಹದಲ್ಲಿ ಸ್ನೇಹಿತರೊಡನೆ, ಕುಟುಂಬದವರೊಡನೆ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಅದೇ ರೀತಿ ವಧುವಿನ ಕುಟುಂಬವು ಫೋಟೋ ತೆಗೆಸಿಕೊಳ್ಳುವ ಹುಮ್ಮಸ್ಸಿನಿಂದ ಸ್ಟೇಜ್ಗೆ ಅಗಮಿಸಿದ್ದಾರೆ. ವರನ ಅಕ್ಕ- ಪಕ್ಕದಲ್ಲಿ ವಧುವಿನ ತಂಗಿಯರು ಕುಳಿತಿದ್ದಾರೆ. ತಂಗಿಯ ಪಕ್ಕದಲ್ಲಿ ವಧು ಕುಳಿತಿದ್ದಾಳೆ. ಇನ್ನೇನು ಫೋಟೋ ಕ್ಲಿಕ್ಕಿಸಬೇಕು ಅನ್ನುವಷ್ಟರಲ್ಲಿ ನಗುತ್ತಾ ವಧುವಿನ ತಂಗಿ ವರನ ಕೆನ್ನೆಗೆ ಮುತ್ತಿಟ್ಟಿದ್ದಾಳೆ. ತಂಗಿಯ ಕೀಟಲೆ ನೋಡಿ ಎಲ್ಲರೂ ನಗುತ್ತಿದ್ದಾರೆ.
ಅಕ್ಕನ ಮದುವೆ ಅಂದಾಕ್ಷಣ ಎಲ್ಲ ತಂಗಿಯರಿಗೂ ಖುಷಿಯ ವಿಚಾರ. ಅದರಲ್ಲಿಯೂ ಅಕ್ಕನ ಗಂಡನಾಗಿ ಬರುವ ಬಾವನಿಗೆ ಕಾಲೆಳೆಯುತ್ತಾ ನಗಿಸುತ್ತಾ ಮದುವೆ ಸಂಭ್ರಮ ನಡೆಯುತ್ತದೆ. ಸಹಜವಾಗಿಯೇ ಕಿಡಿಗೇಡಿತನ ಹುಡುಕುವುದು ಮಾಮೂಲಿ. ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ಕಾಮೆಂಟ್ ವಿಭಾಗದಲ್ಲಿ ನಗುವಿನ ಇಮೋಜಿಗಳ ಸುರಿಮಳೆ. ಪಾಪ! ವರನ ಪರಿಸ್ಥಿತಿ ಹೇಗಾಗಿರಬೇಡ? ಎಂದು ನೆಟ್ಟಿಗರೋರ್ವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಆಶ್ಚರ್ಯಗೊಂಡಿದ್ದಾರೆ.
ಇದನ್ನೂ ಓದಿ:
37ನೇ ಬಾರಿ ಮದುವೆಯಾದ ಅಜ್ಜ…?!
Published On - 1:51 pm, Sun, 13 June 21