Happy birthday Disha Patani: 19ನೇ ವಯಸ್ಸಿಗೆ ದಿಶಾ ಕೊಟ್ಟ ಮೊದಲ ಆಡಿಷನ್​ ವಿಡಿಯೋ ವೈರಲ್​

Rajesh Duggumane

Rajesh Duggumane | Edited By: Madan Kumar

Updated on: Jun 13, 2021 | 4:49 PM

ದಿಶಾ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಕಮರ್ಷಿಯಲ್​ ಜಾಹೀರಾತುಗಳನ್ನು ನಟಿಸುತ್ತಿದ್ದರು. ಚಾಕೋಲೆಟ್​, ಬಟ್ಟೆ, ಸೌಂದರ್ಯ ವರ್ಧಕ ಉತ್ಪನ್ನಗಳ ಜಾಹೀರಾತಿನಲ್ಲಿ ದಿಶಾ ಕಾಣಿಸಿಕೊಳ್ಳುತ್ತಿದ್ದರು.

Happy birthday Disha Patani: 19ನೇ ವಯಸ್ಸಿಗೆ ದಿಶಾ ಕೊಟ್ಟ ಮೊದಲ ಆಡಿಷನ್​ ವಿಡಿಯೋ ವೈರಲ್​
ದಿಶಾ ಪಟಾಣಿ

ದಿಶಾ ಪಟಾಣಿ ಬಾಲಿವುಡ್​ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಸ್ಟಾರ್​ ನಟರಾದ ಟೈಗರ್​ ಶ್ರಾಫ್​, ಸಲ್ಮಾನ್​ ಖಾನ್​ ಜತೆ ದಿಶಾ ತೆರೆಹಂಚಿಕೊಂಡಿದ್ದಾರೆ. ಅವರಿಗೆ ಇಂದು (ಜೂನ್​ 13) 29ನೇ ಜನ್ಮದಿನದ ಸಂಭ್ರಮ. ಈ ವೇಳೆ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದಿಶಾ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಕಮರ್ಷಿಯಲ್​ ಜಾಹೀರಾತುಗಳನ್ನು ನಟಿಸುತ್ತಿದ್ದರು. ಚಾಕೋಲೆಟ್​, ಬಟ್ಟೆ, ಸೌಂದರ್ಯ ವರ್ಧಕ ಉತ್ಪನ್ನಗಳ ಜಾಹೀರಾತಿನಲ್ಲಿ ದಿಶಾ ಕಾಣಿಸಿಕೊಳ್ಳುತ್ತಿದ್ದರು. 10 ವರ್ಷಗಳಲ್ಲಿ ಅವರ ಜೀವನ ಸಂಪೂರ್ಣವಾಗಿ ಬದಲಾಗಿದೆ.

ತಾಜಾ ಸುದ್ದಿ

2015ರಲ್ಲಿ ತೆರೆಗೆ ಬಂದ ತೆಲುಗಿನ ‘ಲೋಫರ್​’ ಸಿನಿಮಾ ಮೂಲಕ ದಿಶಾ ಚಿತ್ರರಂಗಕ್ಕೆ ಕಾಲಿಟ್ಟರು. 2016ರಲ್ಲಿ ತೆರೆಕಂಡ ಎಂಎಸ್​​ ಧೋನಿ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟರು. ‘ಭಾಗಿ’ ಸರಣಿಯ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಟೈಗರ್​ ಶ್ರಾಫ್​ ಪ್ರೇಯಸಿ ಎಂದು ಕೂಡ ಹೇಳಲಾಗುತ್ತಿದೆ.

ಬಾಲಿವುಡ್​ನಲ್ಲಿ ಮಿಂಚುತ್ತಿರುವ ದಿಶಾ 10 ವರ್ಷಗಳ ಹಿಂದೆ ಈ ರೀತಿ ಇರಲಿಲ್ಲ. ಸಣ್ಣ-ಪುಟ್ಟ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು, ಮಾಡೆಲಿಂಗ್​ನಲ್ಲಿ ತೊಡಗಿಕೊಂಡಿದ್ದರು. ಅವರು ಮೊಟ್ಟ ಮೊದಲ ಬಾರಿಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಆಡಿಷನ್​ ಕೊಟ್ಟಿದ್ದು 2009ರಲ್ಲಿ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇತ್ತೀಚೆಗೆ ತೆರೆಗೆ ಬಂದ ಸಲ್ಮಾನ್​ ಖಾನ್​ ನಟನೆಯ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್​ ಭಾಯ್​’ ಚಿತ್ರದಲ್ಲಿ ದಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ‘ಏಕ್​ ವಿಲನ್​ ರಿಟರ್ನ್’​​ ಚಿತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ.

ಇತ್ತೀಚೆಗೆ ದಿಶಾ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಲಾಕ್​ಡೌನ್​ ಮಧ್ಯೆಯೂ ದಿಶಾ ಹಾಗೂ ಟೈಗರ್​ ಶ್ರಾಫ್​ ಕಾರಿನಲ್ಲಿ ಮುಂಬೈನ ಬಾಂದ್ರಾ ರಸ್ತೆಯಲ್ಲಿ ಸುತ್ತಾಟ ನಡೆಸಿದ್ದರು. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ಜೋರಾಗಿತ್ತು.

ಇದನ್ನೂ ಓದಿ: ಲಾಕ್​ಡೌನ್​ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್​ ಶ್ರಾಫ್​ ವಿರುದ್ಧ ಎಫ್​ಐಆರ್​ ದಾಖಲು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada