‘ಮತ್ತೆ ಬದುಕುವುದಕ್ಕೆ ಇಷ್ಟವಿಲ್ಲ’; ಕೊವಿಡ್ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಖ್ಯಾತ ಯೂಟ್ಯೂಬರ್ ಭುವನ್
‘ಒಂದೇ ತಿಂಗಳು. ಎಲ್ಲವನ್ನೂ ಛಿದ್ರಮಾಡಿ ಬಿಟ್ಟಿತು. ನನ್ನ ಎರಡು ಲೈಫ್ಲೈನ್ಗಳನ್ನು ಕಳೆದುಕೊಂಡೆ. ನನ್ನ ಅಪ್ಪ-ಅಮ್ಮ ಇಲ್ಲದೆ ಯಾವುದೂ ಮೊದಲಿನಂತೆ ಇರೋಕೆ ಸಾಧ್ಯವಿಲ್ಲ. ಮನೆ, ಕನಸು ಎಲ್ಲವೂ ಈಗ ನಾಶವಾಗಿದೆ’ ಎಂದು ಅವರು ಬರಹ ಆರಂಭಿಸಿದ್ದಾರೆ.
ಕೊವಿಡ್ನಿಂದ ಸಾಕಷ್ಟು ಮಂದಿ ತಂದೆ-ತಾಯಿ ಕಳೆದುಕೊಂಡಿದ್ದಾರೆ. ಸೆಲೆಬ್ರಿಟಿಗಳ ವಲಯಕ್ಕೂ ಕೊರೊನಾ ಮುಳುವಾಗಿದೆ. ಈಗ ಭಾರತದ ಟಾಪ್ ಕಂಟೆಂಟ್ ಕ್ರಿಯೇಟರ್ಗಳಲ್ಲಿ ಮುಂಚೂಣಿಯಲ್ಲಿರುವ ಭುವನ್ ಬಾಮ್ ಅವರ ತಂದೆ ತಾಯಿ ಇಬ್ಬರೂ ಕೊವಿಡ್ಗೆ ಬಲಿಯಾಗಿದ್ದಾರೆ. ಈ ನೋವಿನ ಸಂಗತಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ದುಃಖ ಹೊರ ಹಾಕಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಭುವನ್ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
‘ಒಂದೇ ತಿಂಗಳು. ಎಲ್ಲವನ್ನೂ ಛಿದ್ರಮಾಡಿ ಬಿಟ್ಟಿತು. ನನ್ನ ಎರಡು ಲೈಫ್ಲೈನ್ಗಳನ್ನು ಕಳೆದುಕೊಂಡೆ. ನನ್ನ ಅಪ್ಪ-ಅಮ್ಮ ಇಲ್ಲದೆ ಯಾವುದೂ ಮೊದಲಿನಂತೆ ಇರೋಕೆ ಸಾಧ್ಯವಿಲ್ಲ. ಮನೆ, ಕನಸು ಎಲ್ಲವೂ ಈಗ ನಾಶವಾಗಿದೆ’ ಎಂದು ಅವರು ಬರಹ ಆರಂಭಿಸಿದ್ದಾರೆ.
‘ಅಮ್ಮ ನನ್ನ ಜತೆ ಇಲ್ಲ. ತಂದೆ ನನ್ನ ಜತೆ ಇಲ್ಲ. ನಾನು ಈಗ ಮತ್ತೆ ಬದುಕೋದಕ್ಕೆ ಕಲಿಯಬೇಕು. ಆದರೆ, ಮತ್ತೆ ಬದುಕುವುದಕ್ಕೆ ನನಗೆ ಇಷ್ಟವಿಲ್ಲ. ನಾನು ಒಳ್ಳೆಯ ಮಗನೇ? ಅವರನ್ನು ಉಳಿಸಲು ನಾನು ಮಾಡಿದ ಪ್ರಯತ್ನ ಸಾಕಾಗಲಿಲ್ಲವೇ? ಜೀವನ ಪರ್ಯಂತ ನಾನು ಈ ಪ್ರಶ್ನೆಯೊಂದಿಗೆ ಬದುಕಬೇಕಿದೆ. ನಾನು ಅವರನ್ನು ನೋಡಲು ಮತ್ತೆ ಕಾದಿದ್ದೇನೆ. ಆ ದಿನ ಬೇಗ ಬರಲಿ’ ಎಂದು ಹಾರೈಸುತ್ತೇನೆ ಎಂದಿದ್ದಾರೆ.
View this post on Instagram
ಈ ಪೋಸ್ಟ್ಗೆ ಬಾಲಿವುಡ್ ನಟ ರಾಜ್ಕುಮಾರ್ ರಾವ್ ಕಮೆಂಟ್ ಮಾಡಿದ್ದಾರೆ. ‘ನಿಮ್ಮ ಈ ನಷ್ಟಕ್ಕೆ ನನ್ನ ವಿಷಾದವಿದೆ. ಏನು ಮಾಡಬೇಕೋ ನಾವು ಅದನ್ನು ಮಾಡಿದ್ದೇವೆ. ಆದರೆ ಹಣೆಯಲ್ಲಿ ಬರೆದಿದ್ದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಅವರ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ದೇವರು ನಿಮಗೆ ಶಕ್ತಿಯನ್ನು ನೀಡಲಿ. ನಾನು ಯಾವಾಗಲೂ ನಿಮ್ಮ ಜತೆ ಇರುತ್ತೇನೆ’ ಎಂದಿದ್ದಾರೆ. ಇದೇ ರೀತಿಯಲ್ಲಿ ಸಾಕಷ್ಟು ಸೆಲೆಬ್ರಿಟಿ ಹಾಗೂ ಅಭಿಮಾನಿಗಳು ಭುವನ್ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
‘ಬಿಬಿ ಕಿ ವೈನ್ಸ್’ ಯೂಟ್ಯೂಬ್ ಚಾನೆಲ್ ಮೂಲಕ ಭುವನ್ ಹೆಚ್ಚು ಗುರುತಿಸಿಕೊಂಡಿದ್ದಾರೆ. 1 ಕೋಟಿ ಸಬ್ಸ್ಕ್ರೈಬರ್ಗಳನ್ನು ಹೊಂದಿದ ಮೊದಲ ಇಂಡಿಯನ್ ಯೂಟ್ಯೂಬರ್ ಎನ್ನುವ ಖ್ಯಾತಿ ಇವರಿಗಿದೆ. ಇದಲ್ಲದೆ, ಭುವನ್ ನಟ ಹಾಗೂ ಗಾಯಕ ಕೂಡ ಹೌದು.
ಇದನ್ನೂ ಓದಿ: ಕೊವಿಡ್ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ ನಟಿ ಹರ್ಷಿಕ ಪೂಣಚ್ಚ, ನಟ ಭುವನ್ ಪೊನ್ನಣ್ಣ; ರೋಗಿಗಳು ಫುಲ್ ಖುಷ್