Sanchari Vijay: ನಟ ಸಂಚಾರಿ ವಿಜಯ್​​ಗೆ ಬೈಕ್ ಅಪಘಾತ; ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಯಾಂಡಲ್​ವುಡ್​ ಹೀರೋ

Rajesh Duggumane

Rajesh Duggumane | Edited By: TV9 SEO

Updated on: Jun 13, 2021 | 4:59 PM

Sanchari Vijay Accident: ಶನಿವಾರ (ಜೂನ್​ 12) ರಾತ್ರಿ ಬೈಕ್​ ಅಪಘಾತ ಸಂಭವಿಸಿದೆ. ಅವರನ್ನು ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೆದುಳಿನ ಬಲ ಭಾಗದಲ್ಲಿ ರಕ್ತಸ್ರಾವ ಉಂಟಾಗಿದ್ದು, ತೊಡೆಯಲ್ಲಿ ಗಾಯಗಳಾಗಿವೆ.

Sanchari Vijay: ನಟ ಸಂಚಾರಿ ವಿಜಯ್​​ಗೆ ಬೈಕ್ ಅಪಘಾತ; ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಯಾಂಡಲ್​ವುಡ್​ ಹೀರೋ
ಸಂಚಾರಿ ವಿಜಯ್


2020ರಲ್ಲಿ ಸ್ಯಾಂಡಲ್​ವುಡ್​ ಸಾಕಷ್ಟು ನೋವು ತಿಂದಿದೆ. ಇದು ಈಗ 2021ಕ್ಕೂ ವಿಸ್ತರಣೆ ಆದಂತೆ ಕಾಣುತ್ತಿದೆ. ಸ್ಯಾಂಡಲ್​ವುಡ್​ನಲ್ಲಿ ಭಿನ್ನ ನಟನೆ ಮೂಲಕ ಗುರುತಿಸಿಕೊಂಡ ನಟ ಸಂಚಾರಿ ವಿಜಯ್​ ಅವರು ಅಪಘಾತಕ್ಕೆ ತುತ್ತಾಗಿದ್ದಾರೆ. ಬೈಕ್​ನಲ್ಲಿ ಸಂಚಾರ ಮಾಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ಶನಿವಾರ (ಜೂನ್​ 12) ರಾತ್ರಿ ಬೈಕ್​ ಅಪಘಾತ ಸಂಭವಿಸಿದೆ. ಅವರನ್ನು ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೆದುಳಿನ ಬಲ ಭಾಗದಲ್ಲಿ ರಕ್ತಸ್ರಾವ ಉಂಟಾಗಿದ್ದು, ತೊಡೆಯಲ್ಲಿ ಗಾಯಗಳಾಗಿವೆ. ನಿನ್ನೆ ರಾತ್ರಿಯೇ ಅವರಿಗೆ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ  ನಡೆಸಿದ್ದಾರೆ. ಸದ್ಯ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿ

2011ರಲ್ಲಿ ತೆರೆಗೆ ಬಂದ ‘ರಂಗಪ್ಪ ಹೋಗ್​ಬಿಟ್ನಾ’ ಸಿನಿಮಾ ಮೂಲಕ ಸಂಚಾರಿ ವಿಜಯ್​ ಚಿತ್ರರಂಗಕ್ಕೆ ಕಾಲಿಟ್ಟರು. 2015ರಲ್ಲಿ ತೆರೆಗೆ ಬಂದ ‘ನಾನು ಅವನಲ್ಲ.. ಅವಳು’ ಸಿನಿಮಾ ಅವರ ಖ್ಯಾತಿಯನ್ನು ದುಪ್ಪಟ್ಟು ಮಾಡಿತ್ತು. ಈ ಸಿನಿಮಾದಲ್ಲಿ ಅವರ ನಟನೆಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳು ಸಿಕ್ಕಿವೆ. ಇದಾದ ನಂತರದಲ್ಲಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಸದ್ಯ, ಎರಡು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಸಂಚಾರಿ ವಿಜಯ್​ ಅಪಘಾತಗೊಂಡಿರುವ ವಿಚಾರ ಕೇಳಿ ಅಭಿಮಾನಿಗಳು ಹಾಗೂ ಸ್ಯಾಂಡಲ್​ವುಡ್​ ಮಂದಿಯಲ್ಲಿ ಆತಂಕ ಮನೆ ಮಾಡಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಚಾರಿ ವಿಜಯ್​ ಓರ್ವ ಪ್ರತಿಭಾನ್ವಿತ ನಟ. 2014ರಲ್ಲಿ ಅವರ ನಟಿಸಿದ ಹರಿವು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ‘ನಾನು ಅವನಲ್ಲ.. ಅವಳು’ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಅವಕಾಶಗಳು ಹೆಚ್ಚಾಗಿದ್ದವು. ಲಾಕ್​ಡೌನ್​ ಸಂದರ್ಭದಲ್ಲಿ ಅವರು ಅನೇಕರಿಗೆ ಸಹಾಯ ಮಾಡುತ್ತಿದ್ದರು. ಅಷ್ಟರಲ್ಲೇ ಈ ಅಪಘಾತ ಸಂಭವಿಸಿರುವುದು ನೋವಿನ ಸಂಗತಿ.

ಇದನ್ನೂ ಓದಿ: ಕೊರೊನಾ ವೈರಸ್​ನಿಂದಾಗಿ ಮೂವರು ಆತ್ಮೀಯರನ್ನು ಕಳೆದುಕೊಂಡ ನಟ ಸಂಚಾರಿ ವಿಜಯ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada